ಶಿವಮೊಗ್ಗ :- ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರೇ ಎಚ್ಚರವಾಗಿರಿ.. ಜೋಗ ಜಲಪಾತಕ್ಕೆ ಹೋಗುವ ರಸ್ತೆಯಲ್ಲೇ ಕರಿ ಚಿರತೆಯೊಂದು ಹಸುವನ್ನು ಬೇಟೆಯಾಡಿದೆ.
ಸಾಗರ ತಾಲೂಕಿನ ವಡನಬೈಲಿನಲ್ಲಿ ಕರಿ ಚಿರತೆ ಪ್ರತ್ಯಕ್ಷವಾಗಿದ್ದು, ಹಸುವನ್ನು ಬೇಟೆಯಾಡಿ ಪೊದೆಯೊಳಗೆ ಎಳೆದೊಯ್ದಿದೆ. ಕರಿಚಿರತೆ ಹಸುವನ್ನು ಬೇಟೆಯಾಡುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಜೋಗ ರಸ್ತೆಯಲ್ಲಿ ಚಿರತೆ ಹಸುವನ್ನು ಬೇಟೆಯಾಡಿದ ವಿಷಯ ಹ್ಬಬ್ಬುತ್ತಿದ್ದಂತೆ ಜೋಗಕ್ಕೆ ತೆರಳುತ್ತಿದ್ದ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಹಲವಾರು ವರ್ಷಗಳಿಂದ ಸಮೀಪದ ಕಾಡಿನಲ್ಲಿ ನಾಯಿಗಳು, ಕರುಗಳನ್ನು ಚಿರತೆ ಬೇಟೆಯಾಡಿದ್ದು ಹೌದು. ಆದರೆ ನಡು ರಸ್ತೆಯಲ್ಲಿ ಹಸುವನ್ನು ಚಿರತೆ ಬೇಟೆಯಾಡಿದ ದೃಶ್ಯ ಮೊದಲ ಭಾರಿಗೆ ನೋಡಿದ್ದು ಎಂದು ಸ್ಥಳಿಯರು ತಿಳಿಸಿದ್ದಾರೆ.