ಶಿವಮೊಗ್ಗ :- ನಗರದ ಪ್ರತಿಷ್ಟಿತ ಸಿಟಿ ಕೋ- ಆಪರೇಟಿವ್ ಬ್ಯಾಂಕಿನ 2024ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಉಮಾಶಂಕರ ಉಪಾಧ್ಯಾಯ, ಉಪಾಧ್ಯಕ್ಷರಾಗಿ ಎಸ್.ಪಿ. ಶೇಷಾದ್ರಿ ಖಜಾಂಚಿಯಾಗಿ ಜಿ. ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರು ಹಾಗೂ ಚುನಾವಣಾಧಿಕಾರಿಯದ ಶ್ರೀನಿವಾಸ್ ರವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ನಿರ್ದೇಶಕರು ಹಾಗೂ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಎಸ್.ಕೆ. ಮರಿಯಪ್ಪ, ನಿಕಟ ಪೂರ್ವ ಪದಾಧಿಕಾರಿಗಳಾದ ಎಂ.ಕೆ. ಸುರೇಶ್ ಕುಮಾರ್, ಕೆ. ರಂಗನಾಥ್, ರುಕ್ಮಿಣಿ ವೇದ ವ್ಯಾಸ, ಬ್ಯಾಂಕಿನ ನಿರ್ದೇಶಕರಾದ ಸಿ. ಹೊನ್ನಪ್ಪ, ರೇಖಾ ಚಂದ್ರಶೇಖರ್, ರಾಜು, ಘನ ಶ್ಯಾಮ್, ಉಮೇಶ್ ಪುಟ್ಟಪ್ಪ, ಎಂ ರಾಕೇಶ್, ರಘುವೀರ್ ಸಿಂಗ್, ಸೀತಾರಾಮ್ ನಾಯಕ, ನವೀನ ದಳವಾಯಿ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮನೋಜ್ ಕುಮಾರ್ ಹಾಗೂ ಇನ್ನಿತರರಿದ್ದರು.