
ಶಿವಮೊಗ್ಗ :- ನಗರದ ಇಕ್ಕೆಲಗಳ ರಸ್ತೆಗಳಿಗೆ ಡಾಂಬರೀಕರಣ ಮಾಡುವುದು, ಮತ್ತೆ ಕೀಳುವುದು. ಮತ್ತದೇ ರಾಗ ಅದೇ ಹಾಡು. ರಸ್ತೆ ಗುಂಡಿಗಳಾಗಿವೆ, ದುರಸ್ಥಿ ಮಾಡಿಸಿ, ಪಾಲಿಕೆ ಸದಸ್ಯರ ಮನೆಗೆ ಅಲೆದು ರಸ್ತೆ ಸರಿಪಡಿಸಿ ಎಂದು ಮನವಿ ಮಾಡುವುದು. ಈಗೆಲ್ಲ ನಡೆಯುತ್ತಲೇ ಇರುತ್ತದೆ. ಗುತ್ತಿಗೆದಾರರಿಗೆ ಕೆಲಸ ಇಲ್ಲದಂತೆ ಮಾಡಬಾರದು ಎಂಬ ಉದ್ದೇಶಕ್ಕೇನಾದರು ಈ ರೀತಿ ಕೆಲಸಗಳು ನಡೆಯುತ್ತವೆಯೋ ಎಂಬ ಅನುಮಾನಗಳು ನಾಗರೀಕರಲ್ಲಿ ಹುಟ್ಟಿಕೊಂಡಿವೆ.
ಶಿವಮೊಗ್ಗದ ವಿನೋಬನಗರದ ವಿವಿಧ ರಸ್ತೆಗಳು ಮತ್ತು ಎಲ್‌ಬಿಎಸ್ ನಗರದ ಹಲವೆಡೆ 24/7 ಕುಡಿಯುವ ನೀರು ಪೂರೈಕೆಗೆ ನಲ್ಲಿ ಪೈಪ್‌ಗಳನ್ನು ಅಳವಡಿಸಲು ಚಂದವಾಗಿ ರೂಪುಗೊಂಡಿದ್ದ ಡಾಂಬರ್ ರಸ್ತೆಗಳನ್ನು ಅಗೆಯಲಾಗುತ್ತಿದೆ. ಪ್ರತೀ ಸಲ ಒಂದಲ್ಲಾ ಒಂದು ಕೆಲಸಕ್ಕೆ ಈ ರೀತಿ ರಸ್ತೆ ಹಾಳು ಮಾಡುತ್ತ ಪುನಃ ರಸ್ತೆ ಮಾಡುತ್ತ ಹಣ, ಸಮಯ, ಕೆಲಸ ಹಾಳು ಮಾಡುತ್ತಿರುವ ಅವೈಜನಿಕ ಕಾಮ ಗಾರಿಗಳು ಎಂದರೆ ತಪ್ಪಾಗಲಾರದು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ, ರಸ್ತೆ ಕಾಮಗಾರಿ ಪ್ರಾರಂಭಿಸುವ ಮೊದಲೇ ಕುಡಿಯುವ ನೀರು ಸೇರಿದಂತೆ ಏನೇನೆಲ್ಲ ಅಳವಡಿಸಬೇಕು ಎಂಬ ದೊಡ್ಡ ಪಟ್ಟಿಯೇ ಇರುತ್ತದೆ. ಇದೆಲ್ಲ ಇದ್ದರೂ ಕೂಡ ಎಲ್ಲಾ ಮಾಡಿ ಅದೇನೋ ಇಲ್ಲಾ ಅಂದ ಹಾಗೆ ರಸ್ತೆ ಆದ ಮೇಲೆ ಈಗ ಕುಡಿಯುವ ನೀರು ಸರಬರಾಜು ಪೈಪ್ ಅಳವಡಿಸಲು ರಸ್ತೆ ತುಂಡು ಮಾಡುತ್ತಿರುವುದು ಎಂತಹ ಅವೈeನಿಕ ಕೆಲಸ ಇದು ಎಂದು ಈ ಭಾಗದ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ರಸ್ತೆ ಆಗುವ ಮುನ್ನವೇ ಈ ಕೆಲಸ ಮಾಡಬಹುದಿತ್ತಲ್ಲವೇ ಸರ್ಕಾರದ ಕೆಲಸ ಹೊಳೆಯಲ್ಲಿ ಹುಣಸೇಹಣ್ಣು ಕಿವುಚಿದಂತಾಗಿದೆ. ಇನ್ನು ಮುಂದೆ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು, ಈ ರೀತಿಯಾಗಿ ಅವೈeನಿಕ ಕಾಮಗಾರಿಗಳಿಗೆ ಒತ್ತು ನೀಡದೆ ಇನ್ನುಮುಂದೆಯಾದರೂ ಹಣ, ಸಮಯ, ಕೆಲಸ ವ್ಯಯವಾಗದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಉತ್ತಮ ಕಾಮಗಾರಿಗಳು ಕೈಗೊಳ್ಳೂ ವಂತೆ ರಾಷ್ಟ್ರಭಕ್ತ ಬಳಗದ ಮುಖಂಡ ಶ್ರೀಕಾಂತ್ ಒತ್ತಾಯಿಸಿದ್ದಾರೆ.