google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಮಲ್ಲೇಶ್ವರ ದೇವಸ್ಥಾನ ಸಮಿತಿ ಮತ್ತು ಶಿವಮೊಗ್ಗ ಪಿರಮಿಡ್ ಆಧ್ಯಾತ್ಮಿಕ ಸಂಸ್ಥೆಯ ಸಹಯೋಗದಲ್ಲಿ ಡಿ. 8ರ ಭಾನುವಾರ ಬೆಳಿಗ್ಗೆ 7ರಿಂದ 9ಗಂಟೆವರೆಗೆ ಊರಗಡೂರು, ಮತ್ತೂರು ರಸ್ತೆ ಗುಡ್ಡೆಮರಡಿ ದೇವಸ್ಥಾನ ಮಲ್ಲೇಶ್ವರ ಬೆಟ್ಟದ ಆವರಣದಲ್ಲಿ ಆಯೋಜಿಸಲಾಗಿದೆ.

ಈ ವಿಶೇಷ ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಧ್ಯಾನಿಗಳು ಮತ್ತು ಹೊಸದಾಗಿ ಧ್ಯಾನ ಕಲಿಯಲು ಬಯಸುವವರು ಇದರ ಸದುಪ ಯೋಗ ಪಡೆದುಕೊಳ್ಳಲು ಗುರು ಕಣ್ಣಿನ ಆಸ್ಪತ್ರೆಯ ಡಾ| ಗಿರಿಸ್ವಾಮಿ ಅವರು ವಿನಂತಿಸಿದ್ದಾರೆ.

ಕಾರ್ಯಕ್ರಮವು ಉಚಿತವಾಗಿದ್ದು ಉಪಹಾರ ಮತ್ತು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡುತ್ತಿರುವುದ ರಿಂದ ಹೆಸರು ನೋಂದಾಯಿಸುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೊಂದಾಯಿಸಲು ಶಿವಮೊಗ್ಗದ ಪ್ರತಿಷ್ಠಿತ ಗುರು ಕಣ್ಣಿನ ಆಸ್ಪತ್ರೆ ದೂ. 08182 404015, ಮೊ. 9035427447, ಸತೀಶ್ ಪಟೇಲ್ 9448979344, ಗಿರಿಸ್ವಾಮಿ 9448857060, ಉಮಾ ಗಿರಿಸ್ವಾಮಿ: 9449100856ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

ಟ್ರಾವೆಲ್ ಡಿಟೇಲ್ಸ್ : ಸಿಟಿ ಬಸ್ ಇರುವುದಿಲ್ಲ. ಸೀಟ್ ಲೆಕ್ಕದಲ್ಲಿ ಬಸ್ ಸ್ಟಾಂಡ್ ಎದುರು, ಅಶೋಕ ಹೋಟೆಲ್ ಎದುರು, ಮತ್ತು ಆಟೋ ಸ್ಟಾಂಡ್‌ನಿಂದ ಊರುಗಡುರಿಗೆ (ಸೂಳೆಬೈಲ್ ) ಒಬ್ಬರಿಗೆ 20 ರೂ ನಂತೆ ಇರುತ್ತದೆ. ಆಟೋ ಡ್ರೈವರ್ ಧನು ಮೊ. 8217063349ಮೂಲಕ ಮಲ್ಲೇಶ್ವರ ಬೆಟ್ಟದ ಮೇಲಿರುವ ದೇವಸ್ಥಾನದ ಪ್ರಾಂಗಣಕ್ಕೆ ಬರಬಹುದು. ಬರುವವರು ಮತ್ತೂರು ರಸ್ತೆಯಲ್ಲಿರುವ ಡೈಮಂಡ್ ಮೆಡಿಕಲ್ ಶಾಪ್ ಪಕ್ಕದ ರಸ್ತೆಯಲ್ಲಿ ಬರಬೇಕೆಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *