google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಕಲಾವಿದರ ಒಕ್ಕೂಟದ ವತಿಯಿಂದ ಡಿ. 7ರಂದು ಕನ್ನಡ ರಂಗಭೂಮಿಯ ಖ್ಯಾತ ಕಲಾವಿದೆ ಅಕ್ಷತಾ ಪಾಂಡವಪುರ ಅವರು ಅಭಿನಯಿಸಿರುವ ಲೀಕ್ ಔಟ್ ನಾಟಕದ 100ನೇ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕಾಂತೇಶ್ ಕದರಮಂಡಲಿಗಿ ತಿಳಿಸಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ೩ಕ್ಕೆ ಪತ್ರಿಕಾಭವನದಲ್ಲಿ ಲೀಕ್ ಔಟ್ ನಾಟಕದ ಇದೂವರೆಗಿನ ಆಯೋಜಕರಿಗೆ ಅಭಿನಂದನೆ, ಲೀಕ್ ಔಟ್ ನಾಟಕ 100 ಪ್ರದರ್ಶನ ಸಾಗಿಬಂದ ದಾರಿಯ ಅನುಭವ ಕಥನದ ಕೃತಿ ಹಾಗೂ ಸಾಕ್ಷ್ಯಚಿತ್ರ ಬಿಡುಗಡೆ ನಡೆಯಲಿದೆ ಎಂದರು.

ಕೆ.ಪಿ. ಶ್ರೀಪಾಲ್ ಮಾತನಾಡಿ, ಈ ಕಾರ್ಯಕ್ರಮವನ್ನು ಸದ್ಭಾವನಾ ಟ್ರಸ್ಟ್ ಅಧ್ಯಕ್ಷ ಎಂ.ಶ್ರೀಕಾಂತ್ ಉದ್ಘಾಟಿಸಲಿದ್ದು, ಕಲೆ ಮತ್ತು ಲಿಂಗ ತಾರತಮ್ಯ ವಿಷಯವಾಗಿ ಸಬಿತಾ ಬನ್ನಾಡಿ ಮಾತನಾಡುವರು. ಲೀಕ್ ಔಟ್ ಪುಸ್ತಕವನ್ನು ಆಯೋಜಕರೇ ಮಾಡಲಿದ್ದು, ದಾದಪೀರ್ ನವಿಲೇಹಾಳ್ ಅವರು ಕೃತಿ ಕುರಿತು ಮಾತನಾಡುವರು. ಚಿತ್ರ ಸಾಹಿತ್ಯ ಹಾಗೂ ನಿರ್ದೇಶಕ ಕವಿರಾಜ್ ಡಾಕ್ಯುಮೆಂಟರಿ ಬಿಡುಗಡೆ ಮಾಡಲಿದ್ದಾರೆ ಎಂದರು.

ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಮಾತನಾಡಿ, ಅಂದು ಸಂಜೆ 6.30ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಲೀಕ್ ಔಟ್ ನಾಟಕದ 100ನೇ ಪ್ರದರ್ಶನ ನಡೆಯಲಿದ್ದು, ಖ್ಯಾತ ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ಅವರು ಚಾಲನೆ ನೀಡಲಿದ್ದಾರೆ. ಪಾಂಡವಪುರದ ದಿ ಚಾನಲ್ ಥಿಯೇಟರ್ ಅರ್ಪಿಸುವ ಈ ನಾಟಕವನ್ನು ಅಕ್ಷತಾ ಪಾಂಡವಪುರ ಮತ್ತು ತಂಡ ಪ್ರಸ್ತುತಪಡಿಸಲಿದೆ. ನಾಟಕಕ್ಕೆ ಉಚಿತ ಪ್ರವೇಶವಿದೆ ಎಂದರು.

ಅಕ್ಷತಾ ಪಾಂಡವಪುರ ಅವರು ಪಲ್ಲಟ ಸಿನಿಮಾದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಪುರಸ್ಕತರಾಗಿದ್ದು, ಇವರ ಅಭಿನಯದ ಪಿಂಕಿ ಎಲ್ಲಿ? ಹಾಗೂ ಕೋಳಿ ಎಸ್ರು ಸಿನಿಮಾ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಿತ್ರತ್ಸೋವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿದೆ. ರಾಷ್ಟ್ರೀಯ ನಾಟಕ ಶಾಲೆ ಪದವೀಧರರಾದ ಅಕ್ಷತಾ ಪಾಂಡವಪುರ ಅವರು ಪ್ರೇಕ್ಷಕರೊಂದಿಗೆ ಸಂವಾದಿಸುವ ವಿನ್ಯಾಸದ ನಾಟಕಕಗಳನ್ನು ನಿರಂತರವಾಗಿ ಪ್ರದರ್ಶಿಸುತ್ತ ಬಂದಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸುರೇಶ್ ಅರಸಾಳು, ರುದ್ರೇಶ್, ರಾಜಕುಮಾರ್, ಸುರೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *