google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಮ್ಮ ಪೂರ್ವಾಶ್ರಮದ ತಾಯಿಯವರು ನೀಡಿದ ಸಂಸ್ಕಾರದಿಂದ ನಾವಿಂದು ಈ ದೀಕ್ಷೆ ಪಡೆಯಲು ಸಾಧ್ಯವಾಯಿತು ಎಂದು ಚಿನ್ಮಯಾನಂದ ದೀಕ್ಷೆ ಪಡೆದ ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿಗಳು ನುಡಿದರು.

ಇಂದು ಮಾಚೇನಹಳ್ಳಿ ಡೈರಿ ಸಮೀಪದ ಬಸವ ನೆಲೆ ಮೈದಾನದಲ್ಲಿ ಆಯೋಜಿಸಿದ್ದ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭದ ಬಹಿರಂಗ ಅಧಿವೇಶನದಲ್ಲಿ ಆಶೀರ್ವಚನ ನೀಡಿದರು.

ಇದೊಂದು ಭಾವುಕವಾದ ಕ್ಷಣವಾಗಿದೆ. ೨೧ನೇ ವರ್ಷಕ್ಕೆ ನಾವು ಬಸವಕೇಂದ್ರದಲ್ಲಿ ಚರಮೂರ್ತಿಗಳಾಗಿ ಪ್ರವಚನಗಳ ಮೂಲಕ ೧೩ ವರ್ಷಗಳ ಕಾಲದ ನಂತರ ಇದೀಗ ಈ ಗುರು ಸ್ಥಾನವನ್ನು ಹಿರಿಯ ಸ್ವಾಮೀಜಿಗಳು ತಮ್ಮ ಅಮೃತ ಹಸ್ತದಿಂದ ದೀಕ್ಷೆಯ ಮೂಲಕ ನೀಡಿದ್ದಾರೆ. ಇದು ನನ್ನ ಪೂರ್ವಾಶ್ರಮದ ಪುಣ್ಯವೇ ಆಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ನನ್ನ ಪೂರ್ವಾಶ್ರಮದ ಮಾತೃಶ್ರೀ ಹಾಗೂ ಗುರುಗಳು ಕೂಡ ಭಾಗವಹಿಸಿರುವುದು ನಮಗೆ ಅತ್ಯಂತ ಭಾವುಕ ಕ್ಷಣವಾಗಿದೆ. ವಿರಕ್ತ ಮಠದಲ್ಲಿ ತಾಯಿಯ ಸಂಬಂಧ ಕೂಡ ಇರಬಾರದು ಎಂಬ ಕಾರಣಕ್ಕೆ ಇದನ್ನು ಪೂರ್ವಾಶ್ರಮ ಎಂದು ಕರೆಯಲಾಗಿದೆ. ಆ ತಾಯಿ ನಮಗೆ ಎಲ್ಲಾ ರೀತಿಯ ಸಂಸ್ಕಾರಗಳನ್ನು ನೀಡಿದ್ದಾರೆ. ಆ ಸಂಸ್ಕಾರವೇ ನಾವು ಇವರು ಈ ಪದವಿ ಪಡೆಯಲು ಸಾಧ್ಯವಾಗಿದೆ. ಇವರ ಜೊತೆಗೆ ಪೂರ್ವಾಶ್ರಮದಲ್ಲಿ ನಮಗೆ ವಿದ್ಯಾಭ್ಯಾಸ ನೀಡಿದ ಇಬ್ಬರು ಗುರುಗಳು ಕೂಡ ಭಾಗವಹಿಸಿರುವುದು ನಮಗೆ ಸಂತಸ ತಂದಿದೆ. ಗುರುಗಳಿಗೆ ನನ್ನ ಕೃತಜ್ಞತೆಗಳು ಎಂದರು.

ಇದರ ಜೊತೆಗೆ ತರಳಬಾಳು ಸಂಸ್ಥೆ, ದಾವಣಗೆರೆಯ ಜಯದೇವ ಹಾಸ್ಟೆಲ್, ಚಿತ್ರದುರ್ಗದ ಮಠ ಇವೆಲ್ಲವನ್ನೂ ನೆನಪು ಮಾಡಿಕೊಂಡ ಶ್ರೀಗಳು ನಾವು ಸ್ವಾಮೀಜಿಗಳಾಗಲು ಮೃತ್ಯುಂಜಯ ಶ್ರೀಗಳ ಕಾದಂಬರಿಯೇ ಪ್ರೇರಣೆಯಾಗಿದೆ. ಸ್ವಾಮೀಜಿ ಎಂದರೆ ಸಿನಿಮಾ, ನಾಟಕಗಳಲ್ಲಿ ಪಾತ್ರ ಹಾಕಿದಂತಲ್ಲ, ಈಗ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಹಿಂದೂ ಸಮಾಜದಲ್ಲಿ ದೀಕ್ಷೆ ಎಂಬ ಪದಕ್ಕೆ ಮಹತ್ವದ ಸ್ಥಾನವಿದೆ. ಇದು ಒಂದು ಉತ್ತಮ ಪರಂಪರೆಯದ್ದು. ತಾತ್ವಿಕ ಮನೋಭಾವದ್ದು, ಶಿಷ್ಯರೇ ಗುರುವಾಗುವ ಬಗೆ, ಜನಸ್ವರೂಪಿಯಾಗಿ ತೇಜಸ್ಸು ಪಡೆದುಕೊಂಡು ಸಮಾಜಕ್ಕೆ ಬೆಳಕಾಗುವುದೇ ಈ ದೀಕ್ಷೆಯಾಗಿರುತ್ತದೆ. ಇದು ಶಿವತತ್ವದಲ್ಲಿ ನಡೆಯುವ ದಾರಿಯಾಗಿದೆ. ಬಸವತತ್ವದ ಪ್ರಕಾರ ಇದೊಂದು ಆಧ್ಯಾತ್ಮಿಕ ದೀಕ್ಷೆಯಾಗಿದೆ ಎಂದರು. ಗಣ್ಯರು ಹಾಜರಿದ್ದರು.

Leave a Reply

Your email address will not be published. Required fields are marked *