
ಶಿವಮೊಗ್ಗ :- ಕೃಷಿ ಪರಿಕರಗಳ ಯಶಸ್ವಿ ಮಾರಾಟದೊಂದಿಗೆ ೧೫ವರ್ಷಗಳನ್ನು ಪೂರೈಸಿರುವ ನಗರದ ಸಾಗರ ರಸ್ತೆಯಲ್ಲಿರುವ ಎಸ್.ಜಿ.ಎಂ. ಟೆಕ್ನಾಲಜೀಸ್ ಸಂಸ್ಥೆಯು ರೈತರಿಗೆ ಅಡಿಕೆ ಸುಲಿಯುವುದಕ್ಕೆ ಸುಲಭವಾಗುವಂತೆ ಹೊಚ್ಚ ಹೊಸ ತಂತ್ರಜ್ನಾನದ ನೂತನ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸಾಗರ ರಸ್ತೆ ಬಿಎಸ್‌ಎನ್‌ಎಲ್ ಕಚೇರಿ ಬಳಿ ಇರುವ ಎಸ್ ಜಿ ಎಂ ಟೆಕ್ನಾಲಜೀಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಮಾಲೀಕ ನಾಗಸಮುದ್ರ ಪ್ರಕಾಶ್ ಜಿ.ಆರ್. ಅವರು ನೂತನ ಯಂತ್ರದ ವಿಶೇಷತೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಎಸ್‌ಜಿಎಂ ಟೆಕ್ನಾಲಜೀಸ್ ಸಂಸ್ಥೆಯು ಆರಂಭವಾಗಿ ೧೫ ವರ್ಷ ಕಳೆದಿದೆ. ರೈತರಿಗೆ ಅನುಕೂಲವಾಗುವ ಕೃಷಿಪರಿಕರಗಳ ತಯಾರಿಕೆಯಲ್ಲಿ ಸಂಸ್ಥೆಯು ತೊಡಗಿಸಿಕೊಂಡಿದೆ. ವಿಶೇಷವಾಗಿ ರೈತರಿಗೆ ಅಡಿಕೆ ಸಿಪ್ಪೆ ಸುಲಿಯಲು ಅನುಕೂಲವಾಗುವಂತೆ ೨೦೦೭ ರಲ್ಲಿ ಬೆಲ್ಟ್ ಚೈನ್‌ಅನ್ನು ತಯಾರಿಸಲಾಯಿತು ಎಂದರು.
ಹಸಿ ಮತ್ತು ಚಾಲಿ ಅಡಿಕೆ ಸುಲಿಯುವ ಈ ನೂತನ ಯಂತ್ರವು, ಪ್ರಪ್ರಥಮ ಬಾರಿಗೆ ಗೇರ್ ಅಳವಡಿಸಿದ ಯಂತ್ರವಾಗಿದ್ದು, ನಮ್ಮ ಸಂಸ್ಥೆಯ ಮೂಲ ಸಂಶೋಧನೆಯ ಫಲ ಇದಾಗಿದೆ. ಒಂದು ಗಂಟೆಗೆ ೪ ಡಬ್ಬದಿಂದ ೫೦ ಡಬ್ಬ ಅಡಿಕೆ ಸುಲಿಯಬಹುದು.ಈ ಯಂತ್ರಗಳ ಖರೀದಿಗೆ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ದೊರೆಯುತ್ತಿದೆ. ಸಾಮಾನ್ಯ ವರ್ಗದವರಿಗೆ ೬೦ ಸಾವಿರ, ಪರಿಶಿಷ್ಟ ಜಾತಿ ಮತ್ತು ಪಂಗಡವರಿಗೆ ೯೦ ಸಾವಿರ ರೂ. ಸಬ್ಸಿಡಿ ದೊರೆಯಲಿದೆ ಎಂದು ತಿಳಿಸಿದರು.
ಈ ಯಂತ್ರದಲ್ಲಿನ ನೂನ್ಯತೆಯನ್ನು ಕಂಡು ಹಿಡಿದು ಗುಣಮಟ್ಟದ ಯಂತ್ರವನ್ನು ಗೇರು ಬಳಸಿ ಹಸಿ ಮತ್ತು ಚಾಲಿ ಅಡಿಕೆ ಸುಲಿಯುವ ಯಂತ್ರ ಬಿಡುಗಡೆ ಮಾಡಲಾಗಿದೆ. ಈ ಯಂತ್ರಗಳ ಖರೀದಿಗೆ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ದೊರೆಯುತ್ತಿದೆ ಎಂದರು.
ಯಂತ್ರ ಖರೀದಿಗೆ ಇಚ್ಚಿಸುವ ರೈತರು ಸಾಗರ ರಸ್ತೆಯಲ್ಲಿರುವ ಎಸ್.ಜಿ.ಎಂ ಟೆಕ್ನಾಲಜೀಸ್ ಕಚೇರಿಯನ್ನು ಅಥವಾ ಮಾಲೀಕ ಪ್ರಕಾಶ್ ಅವರನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಪ್ರಮುಖರಾದ ಗೋವರ್ಧನ್, ಸುಮಂತ್, ವೆಂಕಟೇಶ್ ನಾಡಿಗ್, ಸುಪರ್ವ ಇದ್ದರು.