ಶಿವಮೊಗ್ಗ :- ನಗರದ ಗ್ರಾಮದೇವತೆ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ಅಮ್ಮನವರ ಬ್ರಹ್ಮ ರಥೋತ್ಸವ ಇಂದು ವೈಭವದಿಂದ ನಡೆಯಿತು.
ಈ ಸಂದರ್ಭದಲ್ಲಿ ಬ್ರಹ್ಮರಥ ಪೂಜೆ, ರಥಾಂಗಹೋಮ, ದಿಂಡಿರಥ ರಾಜಬೀದಿ ಉತ್ಸವ ನಂತರ ಬ್ರಹ್ಮ ರಥೋತ್ಸವ, ಆಚಾರ್ಯತ್ರಯರ ಭವನದಲ್ಲಿ ಗುರುಪಾದುಕ ಪೂಜೆ, ಮಹಾ ಪ್ರಸಾದ ವಿನಿಯೋಗ ನಡೆಯಿತು.
ಆಚಾರ್ಯರು, ಆಗಮಿಕರಾದ ವಿದ್ವಾನ್ ಶಂಕರಾನಂದ ಜೋಯ್ಸ್ ಹಾಗೂ ವಿದ್ವಾನ್ ಮಹಿಪತಿ ಎಸ್. ಜೋಯ್ಸ್ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.