google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಜಿಲ್ಲಾ ದೇಹದಾರ್ಢ್ಯ ಪಟುಗಳ ಸಂಘ, ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿಬಿಲ್ಡರ್‍ಸ್ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಪಾಲಿಕೆಯಿಂದ ಆಚರಿಸುವ ನಾಡಹಬ್ಬ ಶಿವಮೊಗ್ಗ ದಸರಾದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಸೆ. 22ರಂದು ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ದೇಹದಾರ್ಢ್ಯ ಪಟುಗಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಯೋಗೀಶ್ ಹೇಳಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆ ಪ್ರಾಯೋಜಕತ್ವದಲ್ಲಿ ಯುವದಸರಾ ಶ್ರೀ 2025ರ ಹೆಸರಿನಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿವಿಧ ವಿಭಾಗಗಳಲ್ಲಿ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಗೆ ಶಿವಮೊಗ್ಗ ಜಿಲ್ಲೆಯವರು ಮಾತ್ರ ಭಾಗವಹಿಸಬಹುದು. ಉಳಿದಂತೆ ರಾಜ್ಯಮಟ್ಟದ ಸ್ಪರ್ಧೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಬಹುದು ಎಂದರು.

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶ್ರೀ ಶಿವಮೊಗ್ಗ ಯುವದಸರಾ ವಿನ್ನರ್‌ಗೆ 15 ಸಾವಿರ ನಗದು ಹಾಗೂ ರನ್ನರ್‌ಗೆ 10 ಸಾವಿರ ರೂ. ನಗದು ಮತ್ತು ಉತ್ತಮ ಪ್ರದರ್ಶಕರಿಗೆ 5 ಸಾವಿರ ರೂ. ನಗದು ಮತ್ತು ಪಾರಿತೋಷಕವನ್ನು ನೀಡಲಾಗುವುದು. ಹಾಗೆಯೇ 55 ಕೆ.ಜಿ.ಯಿಂದ 90 ಕೆ.ಜಿ.ಯವರೆಗೆ 5 ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುವುದು. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಕ್ರಮವಾಗಿ 5 ಸಾವಿರ, ೪ಸಾವಿರ, ೩ಸಾವಿರ, 2ಸಾವಿರ, 1ಸಾವಿರ ಹೀಗೆ ಐದು ಬಹುಮಾನಗಳನ್ನು ಮತ್ತು ಪಾರಿತೋಷಕವನ್ನು ಪ್ರಶಸ್ತಿಪತ್ರದೊಂದಿಗೆ ನೀಡಲಾಗುವುದು ಎಂದರು.

ಹಾಗೆಯೇ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಎರಡು ಬಹುಮಾನಗಳನ್ನು ನೀಡಲಾಗುತ್ತದೆ. ಶ್ರೀ ಶಿವಮೊಗ್ಗ ಯುವದಸರಾ ವಿನ್ನರ್‌ಗೆ ೬ ಸಾವಿರ, ರನ್ನರ್‌ಗೆ 5ಸಾವಿರ ಬಹುಮಾನದ ಜೊತೆಗೆ ಪಾರಿತೋಷಕ ನೀಡಲಾಗುವುದು. ಇಲ್ಲಿ 55ಕೆ.ಜಿ.ಯಿಂದ 80 ಕೆ.ಜಿ.ಯವರೆಗೆ ಸ್ಪರ್ಧೆ ನಡೆಸಲಾಗುವುದು. ಮೂರು ಬಹುಮಾನಗಳನ್ನು ಕ್ರಮವಾಗಿ 2ಸಾವಿರ, 1ವರೆ ಸಾವಿರ ಹಾಗೂ 1 ಸಾವಿರದಂತೆ ನೀಡಲಾಗುವುದು. ನಾಲ್ಕನೇ ಬಹುಮಾನಕ್ಕೆ ಪಾರಿತೋಷಕ ನೀಡಲಾಗುವುದು ಎಂದರು.

ಇದೇ ಮೊದಲ ಬಾರಿಗೆ ದಿವ್ಯಾಂಗ ಚೇತನ ದೇಹದಾರ್ಢ್ಯ ಪಟುಗಳಿಗೂ ಕೂಡ ಸ್ಪರ್ಧೆ ನಡೆಸಲಾಗುವುದು. ಒಟ್ಟು ವಿಭಾಗಗಳಲ್ಲಿ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಗುವುದು. ಕ್ರಮವಾಗಿ 2ಸಾವಿರ, 1ವರೆ ಸಾವಿರ, 1ಸಾವಿರ ಹಾಗೂ 500 ರೂ.ಗಳನ್ನು ನೀಡಲಾಗುವುದು ಎಂದರು.

ದೇಹದ ತೂಕ ಹಾಗೂ ಹೆಸರು ನೊಂದಾಯಿಸಿಕೊಳ್ಳಲು ಸೆ. 22ರ ಮಧ್ಯಾಹ್ನ 2 ಗಂಟೆಯಿಂದ 4ಗಂಟೆಯವರೆಗೆ ಅವಕಾಶವಿದೆ. ಆರು ಗಂಟೆಯ ನಂತರ ಸ್ಪರ್ಧೆಗಳು ಆರಂಭವಾಗುತ್ತವೆ. ಹೆಚ್ಚಿನ ವಿವರಕ್ಕೆ 9972369129ರಲ್ಲಿ ಸಂಪರ್ಕಿಸಬಹುದು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಗೌರವಾಧ್ಯಕ್ಷ ಶಿವಬಸಪ್ಪ, ಉಪಾಧ್ಯಕ್ಷ ಶರವಣ, ಮುಖ್ಯಸ್ಥರಾದ ವಿಕ್ರಮ್, ಸುರೇಶ್ ಎಂ.ಬಿ. ಪರಶುರಾಮ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *