google.com, pub-9939191130407836, DIRECT, f08c47fec0942fa0

ಸಾಗರ :- ಶಿವಮೊಗ್ಗ ನಗರದಲ್ಲಿ ನವೆಂಬರ್ ೩೦ರಂದು ಭಗವದ್ಗೀತೆ ಕುರಿತು ಬೃಹತ್ ಅಭಿಯಾನ ನಡೆಯಲಿದೆ. ಸುಮಾರು 50ಸಾವಿರ ಜನರು ಏಕಕಂಠದಲ್ಲಿ ಭಗವದ್ಗೀತೆ ಪಠಣ ಮಾಡಲಿದ್ದಾರೆ ಎಂದು ಭಗವದ್ಗೀತೆ ಅಬಿಯಾನ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಅಶೋಕ್ ಜಿ. ಭಟ್ ತಿಳಿಸಿದರು.

ಇಲ್ಲಿನ ಭಾರತೀತೀರ್ಥ ಸಭಾಭವನದಲ್ಲಿ ಶೃಂಗೇರಿ ಶಂಕರಮಠ, ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮತ್ತು ಭಗವದ್ಗೀತಾ ಅಭಿಯಾನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಎಕಕಂಠದಲ್ಲಿ 50ಸಾವಿರ ಜನರು ಭಗವದ್ಗೀತೆಯನ್ನು ಶ್ರೀಕೃಷ್ಣನಿಗೆ ಸಮರ್ಪಣೆ ಮಾಡುವ ವಿಶೇಷವಾದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಶಿಕ್ಷಣ ಹಮ್ಮಿಕೊಳ್ಳಲಾಗಿದೆ. ಪ್ರಶಿಕ್ಷಣದಲ್ಲಿ ಪಾಲ್ಗೊಂಡವರು ಭಗವದ್ಗೀತೆ ಕಲಿತು ಅದನ್ನು ತಮ್ಮ ಅಕ್ಕಪಕ್ಕದವರಿಗೆ ಕಲಿಸಿ ಕೊಡುವ ಮೂಲಕ ಅವರು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಗಬೇಕು ಎಂದರು.

ಭಗವದ್ಗೀತೆ ಅಭಿಯಾನದ ಕಾರ್ಯಾಧ್ಯಕ್ಷ ಅಶೋಕ್ ಭಟ್ ಮಾತನಾಡಿ, ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಭಗವದ್ಗೀತೆ ಅಭಿಯಾನ ನಡೆಯಲಿದ್ದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು. ಈಗಾಗಲೆ ಭಗವದ್ಗೀತೆ ಕಲಿಸುವ ಕುರಿತು ಅನೇಕ ಕಾರ್ಯಾಗಾರಗಳು ನಡೆಯುತ್ತಿದೆ. ಕಲಿತವರು ಇನ್ನೊಬ್ಬರಿಗೆ ಕಲಿಸಬೇಕು. ಭಗವದ್ಗೀತೆ ಸಾರವನ್ನು ತಿಳಿದು ಜನ ಹೆಚ್ಚಿಸಿಕೊಳ್ಳಲು ಸಹ ಇದು ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಕಕ್ಷತೆ ವಹಿಸಿ ಮಾತನಾಡಿದ ಸಮಿತಿಯ ತಾಲ್ಲೂಕು ಅಧ್ಯಕ್ಷ ಕೆ.ವಿ.ಜಯರಾಮ್, ಮಕ್ಕಳಿಗೆ ಭಗವದ್ಗೀತೆ ಕುರಿತು ಅರಿವು ಮೂಡಿಸಬೇಕು. ಭಗವದ್ಗೀತೆ ನಮ್ಮ ನೆಲದ ಸಾರವನ್ನು ಹೊಂದಿದ್ದು, ಸನ್ಮಾರ್ಗವನ್ನು ಬೋಧಿಸಿದೆ ಎಂದು ತಿಳಿಸಿದರು.

ಅಡಿಕೆ ವರ್ತಕರ ಸಂಘದ ಅಧ್ಯಕ್ಷ ನಿರಂಜನ ಕೋರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭರತ್ ನಾಡಿಗ್, ವಿದ್ವಾನ್ ಶಂಕರ ಭಟ್, ವಿ.ಟಿ.ಭಟ್, ಮಾ.ಸ.ನಂಜುಂಡಸ್ವಾಮಿ ಇನ್ನಿತರರು ಹಾಜರಿದ್ದರು. ಮಮತಾ ಪ್ರಾರ್ಥಿಸಿದರು. ಜ್ಯೋತಿ ಸ್ವಾಗತಿಸಿದರು. ವೀಣಾ ಎನ್. ವಂದಿಸಿದರು. ಸುಜತ ನಿರೂಪಿಸಿದರು.

Leave a Reply

Your email address will not be published. Required fields are marked *