google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಬೆಂಗಳೂರಿನ ಪಯಣ ರಂಗತಂಡವು ಶಿವಮೊಗ್ಗದ ರಕ್ಷಾ ಸಮುದಾಯ ಸಂಘದ ಸಹಕಾರದೊಂದಿಗೆ ಜೂ. 22 ನಾಳೆ ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ಕಳೆದುಹೋದ ಹಾಡು ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಯಣ ರಂಗತಂ ಡದ ನಟಿ ಚಾಂದಿನಿ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಈ ನಾಟಕವನ್ನು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ಈ ನಾಟಕದಲ್ಲಿ ಅಭಿನಯಿಸಿದ್ದು, ಈಗಾಗಲೇ ಈ ನಾಟಕ ಆರು ಪ್ರದರ್ಶನ ಗೊಂಡಿದ್ದು, ಈಗ ಶಿವಮೊಗ್ಗ ದಲ್ಲಿ ನಡೆಯುತ್ತಿರುವ ೭ನೇ ಪ್ರದರ್ಶ ನವಾಗಿದೆ ಎಂದರು.

ಪಯಣ ರಂಗತಂಡವು ಈಗಾಗ ಲೇ ತಲ್ಕಿ ನಾಟಕ ಪ್ರದರ್ಶಿಸಿದ್ದು, 28 ಪ್ರದರ್ಶನಗಳು ಯಶಸ್ವಿಗೊಂಡಿವೆ. ಲೈಂಗಿಕ ಅಲ್ಪಸಂಖ್ಯಾತರು
ಸಮಾಜ ದಲ್ಲಿ ತಿರಸ್ಕಾರಗೊಳ್ಳುತ್ತಿದ್ದು, ಅವ ಮಾನ-ದೌರ್ಜನ್ಯಕ್ಕೆ ಒಳಗಾಗು ತ್ತಿದ್ದಾರೆ. ಅವರ ಜೀವನದಲ್ಲಿ ನಡೆದ ನೈಜ ಘಟನೆಗಳು ಮತ್ತು ಅವರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಅವರೇ ಅಭಿನಯಮಾಡಿ ತೋರಿಸುತ್ತಿದ್ದಾರೆ. ಈ ನಾಟಕದಲ್ಲಿ 13 ಜನರ ತಂಡ ಅಭಿನಯಿಸಲಿದೆ ಎಂದರು.

ಕಾಡುವ ನೆನಪುಗಳ ಜಾಡು ಹಿಡಿದು, ಕಳೆದಹೋದ ಹಾಡಿನ ಹುಡುಕಾಟಕ್ಕೆ ತೊಡಗುವ ಪಯ ಣವೇ ಈ ನಾಟಕ. ಈ ಹಿಮ್ಮುಖ ಚಲನೆಯ ಕಡಿದಾದ ಹಾದಿಯಲ್ಲಿ ಬಾಲ್ಯದಲ್ಲಿ ದಕ್ಕದ ಭಾವಗಳ ಭಾಷೆಯಿದೆ. ದಕ್ಕದ ಪ್ರೇಮದ ನೆನಪುಗಳಿವೆ, ಸಿಕ್ಕ ಪ್ರೇಮದ ಸಂಭ್ರಮಗಳಿವೆ. ದುಃಖದ ದಾರಿ ಯೇ ಹೆಜ್ಜೆ ಗುರುತುಗಳಿವೆ. ಕರಾಳ ರಾತ್ರಿಯ ಕಹಿ ಘಟನೆಗಳಿವೆ. ಅಸ್ಮಿತೆ, ಕುಟುಂಬ, ಸಮುದಾಯ, ಸಮಾಜ ಗಳ ತಪ್ಪು-ಒಪ್ಪುಗಳನ್ನು ಆತ್ಮವಿಮ ರ್ಶೆಯ ನೆಲೆಗಟ್ಟಿನಲ್ಲಿ ಒಂದಕ್ಕೊಂದು ಕನ್ನಡಿ ಹಿಡಿ ಯುವಂತೆ ಕಥೆ ಹೇಳು ತ್ತಲೇ ಕಾಣಿಸುವ ಸರಳ ರೇಖಾತ್ಮಕ ವಲ್ಲದ ಪ್ರಸ್ತುತಿ ಇದೆ ಎಂದರು.ಈ ನಾಟಕವನ್ನು ಮಂಗಳಾ ಎನ್. ನಿರ್ದೇಶಿಸಿದ್ದು, ಈ ನಾಟಕಕ್ಕೆ ಉಚಿತ ಪ್ರವೇಶವಿದೆ ಇದೆ ಎಂದರು. ನಟರಾದ ಕೆ. ತ್ರಿಮೂರ್ತಿ, ಸರವಣ, ಸೈಫುಲ್ಲಾ ಇದ್ದರು.

Leave a Reply

Your email address will not be published. Required fields are marked *