
ಶಿವಮೊಗ್ಗ :- ಭಾರತೀಯ ದಲಿತ ಸಂಘರ್ಷ ಸಮಿತಿ (ಡಾ. ಹೆಚ್. ಪ್ರಕಾಶ್ ಬೀರಾವರ ಸ್ಥಾಪಿತ) ವತಿಯಿಂದ ಆಗಸ್ಟ್ 13ರ ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ 50ಕ್ಕೂ ಹೆಚ್ಚು ಜೋಡಿಯ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿಯ ಯುವ ಘಟಕದ ರಾಜಧ್ಯಕ್ಷ ಕೂಡ್ಲಿಗೆರೆ ಟಿ. ಚಂದ್ರಶೇಖರ್ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಈ ಸಾಮೂಹಿಕ ವಿವಾಹ ಮಹೋತ್ಸವ ಇಂದು ನಡೆಯಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ನಮ್ಮಲ್ಲಿ ನೊಂದಾಯಿಸಿಕೊಂಡಿದ್ದು ಹಲವು ಜೋಡಿಗಳು ದಾವಣಗೆರೆಯಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಹೋಗಿದ್ದರಿಂದ ಇದನ್ನು ಮುಂದೂಡಬೇಕಾಗಿದೆ. ಹಾಗಾಗಿ ಸಾಮೂಹಿಕ ವಿವಾಹಕ್ಕೆ ನೊಂದಾಯಿಸಿಕೊಳ್ಳುವವರಿಗೆ ಈಗಲೂ ಅವಕಾಶವಿದೆ ಎಂದರು.
ಈಗಾಗಲೇ ಸಾಮೂಹಿಕ ವಿವಾಹಕ್ಕೆ 25ಕ್ಕೂ ಹೆಚ್ಚು ಜೋಡಿ ಗಳು ಹೆಸರು ನೊಂದಾಯಿಸಿದ್ದು, 101 ಜೋಡಿಗಳ ಮದುವೆ ಮಾಡಬೇಕು ಎಂಬ ಉದ್ದೇಶ ನಮ್ಮದು. ಎಲ್ಲಾ ವಧು-ವರರಿಗೂ ಉಚಿತವಾಗಿ ತಾಳಿ, ಬಟ್ಟೆ, ಕಾಲುಂಗರು ನೀಡಲಾಗು ವುದು. ಜೊತೆಗೆ ವರ ಮತ್ತು ವಧು-ವರರ ಕಡೆಯ ಕನಿಷ್ಠ 100 ಜನರಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗುವುದು ಎಂದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ನೆರವೇರಿಸು ವರು. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಧು-ವರರಿಗೆ ಮಾಂಗಲ್ಯ ವಿತರಿಸುವರು. ಸಚಿವ ಮಧುಬಂಗಾರಪ್ಪ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಜನಪ್ರತಿನಿಧಿಗಳು, ಮುಖಂಡರುಗಳು, ಈ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ ಎಂದರು.
ಅಂಬೇಡ್ಕರ್ ರತ್ನ ಪ್ರಶಸ್ತಿಯನ್ನು ಸಮಾಜ ಸೇವಕ ಕೆ.ಈ. ಕಾಂತೇಶ್, ಮಾಡಾಳ್ ಮಲ್ಲಿ ಕಾರ್ಜುನ್ ಸೇರಿದಂತೆ ಸುಮಾರು ೫೦ಕ್ಕೂ ಹೆಚ್ಚು ಜನರಿಗೆ ನೀಡ ಲಾಗುವುದು ಎಂದರು.
ಹಾಗೆಯೇ ಕಾರ್ಯಕ್ರಮದಲ್ಲಿ ಕಿರುತೆರೆಯ ಕಲಾವಿದರು ಗಳಾದ ತುಕಾಲಿ ಸಂತೋಷ್, ಮಾನಸ ತುಕಾಲಿ, ಬುಲೆಟ್ ರಕ್ಷಕ್, ಚಂದ್ರಪ್ರಭ, ಸೂರಜ್ ಸೇರಿದಂತೆ ಹಲವು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಉಚಿತ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವರಿಗೆ ನಿಬಂಧನೆಗಳಿದ್ದು, ಶಾಲಾ ದಾಖಲಾತಿ, ಆಧಾರ್ ಕಾರ್ಡ್, ಫೋಟೋ, ನಿವಾಸ ದ್ಢೃಕರಣ ಪತ್ರ ಕಡ್ಡಾಯವಾಗಿ ನೀಡಬೇಕು. ಬಾಲ್ಯ ವಿವಾಹಕ್ಕೆ ಅವಕಾಶವಿಲ್ಲ. ಒಂದು ಪಕ್ಷ ನಕಲಿ ದಾಖಲೆಪತ್ರ ನೀಡಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದರು.
ಜೊತೆಗೆ ನೂತನ ಯುವ ಘಟಕ ರಾಜಧ್ಯಕ್ಷರ ಪದಗ್ರಹಣ ಹಾಗೂ ರಾಜ್ಯಮಟ್ಟದ ಪದಾಧಿಕಾರಿಗಳ ಸಮಾವೇಶ ಮತ್ತು ಗಣ್ಯರಿಗೆ ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದರು.
