google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್-266 ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಇತರ ಸಂಸ್ಥೆಗಳ ಜೊತೆಗೂಡಿ ಮೇ 25ರಂದು ಮ್ಯಾರಥಾನ್ ಮತ್ತು ಸೈಕ್ಲಿಂಗ್ ಸ್ಫರ್ಧೆಯನ್ನು ಏರ್ಪಡಿಸುತ್ತಿದೆ ಎಂದು ರೌಂಡ್ ಟೇಬಲ್ಲಿನ ಚೇರ್ಮನ್ ರೋಹನ್ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಸೂಳೆಬೈಲಿನ ಸರ್ಕಾರಿ ಹೈಸ್ಕೂಲಿನಲ್ಲಿ ಮೂರು ಕೊಠಡಿಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ಹೊಂದಿದ್ದು, ಇದಕ್ಕಾಗಿ ಹಣ ಕೂಡಿಸಲು ರಾಯಲ್ ಇಂದ್ರಪ್ರಸ್ಥ, ನಂಜಪ್ಪ ಮೈಲ್ಸ್ ಆಫ್ ಹೋಪ್, ಪಾನಕ ಗೋಲಿಸೋಡಾ, ಟಿವಿಎಸ್ ಆರ್ಯ ಮೋಟಾರ್‍ಸ್, ಶಲೋಕ್ ಗ್ಯಾಸ್ ಏಜೆನ್ಸಿ, ಟಂಬಲ್ ಡ್ರೈ ಮುಂತಾದ ಸಂಸ್ಥೆಗಳ ಸಹಕಾರದೊಂದಿಗೆ ರೈಡ್‌ರನ್, ರೀಚೆ ಲೈವ್ಸ್ ಎಂಬ ಹೆಸರಿನಲ್ಲಿ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಸ್ಫರ್ಧೆ ಏರ್ಪಡಿಸಿದ್ದಾರೆ ಎಂದರು.

ಈ ಸ್ಪರ್ಧೆಯಲ್ಲಿ ೬ ರಿಂದ ೧೩ ವರ್ಷದ ಮಕ್ಕಳಿಗೆ ನಾಲ್ಕು ಕಿ.ಮೀ. ಓಟದ ಸ್ಪರ್ಧೆ, 13 ವರ್ಷ ಮತ್ತು ಹೆಚ್ಚಿನ ವಯಸ್ಸಿನವರಿಗೆ 5 ಕಿ.ಮೀ. ಓಟದ ಸ್ಪರ್ಧೆ, 13 ವರ್ಷ ಮೇಲ್ಪಟ್ಟವರಿಗೆ 22 ಕಿ.ಮೀ. ಕ್ರಾಸ್‌ಕಂಟ್ರೀ ಸೈಕ್ಲಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ. ಇದಕ್ಕಾಗಿ ಓಟದ ಸ್ಪರ್ಧೆಗೆ 250, ಸೈಕ್ಲಿಂಗ್ ಸ್ಪರ್ಧೆಗೆ 350 ಶುಲ್ಕ ವಿಧಿಸಲಾಗಿದೆ. ಸ್ಪರ್ಧೆಗಳು ಗೋಪಾಲಗೌಡ ಬಡಾವಣೆಯ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲಿನಿಂದ ನಡೆಯಲಿದೆ.

ಓಟದ ಸ್ಪರ್ಧೆಗೆ 13 ರಿಂದ 40 ವರ್ಷದವರಿಗೆ ಪ್ರಥಮ ಬಹುಮಾನ 5ಸಾವಿರ, ದ್ವಿತೀಯ ಬಹುಮಾನ ೩ಸಾವಿರ ನೀಡಲಾಗುವುದು. ಮಹಿಳೆಯರಿಗೆ ಮತ್ತು 40 ವರ್ಷ ಮೇಲ್ಪಟ್ಟವರಿಗೂ ಕೂಡ ಇದೇ ರೀತಿಯ ಬಹುಮಾನವಿದ್ದು, ಸೈಕ್ಲಿಂಗ್ ಸ್ಪರ್ಧೆಯಲ್ಲೂ ಕೂಡ ಮಹಿಳೆಯರಿಗೆ ಮತ್ತು ಗಂಡಸರಿಗೆ ಪ್ರತ್ಯೇಕ ಸ್ಫರ್ಧೆ ಇದ್ದು, ಕ್ರಮವಾಗಿ ೫ಸಾವಿರ, ೩ಸಾವಿರ ಬಹುಮಾನಗಳಿವೆ ಎಂದರು.

ಶಿವಮೊಗ್ಗದ ನಾಗರೀಕರು, ಸಂಘ-ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಮತ್ತು ಹೆಚ್ಚಿನ ಮಾಹಿತಿಗೆ ಮೊ. 96633 85544ರಲ್ಲಿ ಸಂಪರ್ಕಿಸಲು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ರೌಂಡ್ ಟೇಬಲ್ ಪದಾಧಿಕಾರಿಗಳಾದ ಸ್ಕಂದ, ರಘುನಂದನ್, ನವೀನ್ ಮುಂತಾದವರಿದ್ದರು.

Leave a Reply

Your email address will not be published. Required fields are marked *