google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಪ್ರತಿಷ್ಠಿತ ದೇಶ್ ನೀಟ್ ಅಕಾಡೆಮಿಯ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್. ಹೇಳಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ದೇಶ್‌ನೀಟ್ ಅಕಾಡೆಮಿಯ ತನ್ನ ಉದ್ಘಾಟನಾ ಬ್ಯಾಚನ್ನು ಯಶಸ್ವಿಯಾಗಿ ಪೂರೈಸಿದೆ. ನಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳ ಕನಸ್ಸನ್ನು ನನಸು ಮಾಡಿಸುವ ಮತ್ತು ಉತ್ತಮ ಮಟ್ಟದ ತರಬೇತಿಯನ್ನು ನೀಡುವ ದೂರದೃಷ್ಠಿಯಿಂದ ಸ್ಥಾಪಿಸಲಾದ ಅಕಾಡೆಮಿ ನೀಟ್ ತರಬೇತಿ ಕ್ಷೇತ್ರದಲ್ಲಿ ಭರವಸೆ ಹುಟ್ಟಿಸಿದೆ ಎಂದರು.

ಇದೀಗ ಪ್ರಸಕ್ತ ಸಾಲಿನ ಪ್ರವೇಶಾತಿ ಆರಂಭವಾಗಿದೆ. ಈಗಾಗಲೇ ಇದಕ್ಕೆ ಪಿಯು ಇಲಾಖೆಯಿಂದ ತಿಂಗಳ ಹಿಂದೆಯೇ ಅನುಮತಿ ಸಿಕ್ಕಿದೆ. ಕೆಲವು ಸಮಸ್ಯೆಗಳಿದ್ದು, ಎಲ್ಲಾ ಸಮಸ್ಯೆಗಳು ಬಗೆಹರಿದಿವೆ. ಈಗಾಗಲೇ ಪರೀಕ್ಷೆ ಬರೆದು ೪೦೦ಕ್ಕೂ ಹೆಚ್ಚು ಅಂಕ ಪಡೆದವರಿಗೆ ದೀರ್ಘಾವಧಿ ಕೋರ್ಸಿಗೆ ತರಬೇತಿ ಶುಲ್ಕದ ಶೇ.೫೦ರಷ್ಟು ರಿಯಾಯಿತಿ ಸಿಗಲಿದೆ. ತೀರಾ ಬಡವರಿಗೆ ಅತ್ಯಂತ ಕಡಿಮೆ ದರ ನಿಗಧಿಪಡಿಸಲಾಗಿದೆ ಎಂದರು.

ಈ ಕೇಂದ್ರದಲ್ಲಿ ಸಮರ್ಪಕ ತಜ್ಞರಿದ್ದಾರೆ. ಉತ್ತಮ ಬೋಧನೆ ಮಾಡುತ್ತಿದ್ದಾರೆ. ಮೂಲ ಸೌಕರ್ಯಗಳಿವೆ. ಪ್ರೇರಕ ಬೆಂಬಲವಿದೆ. ಈ ವರ್ಷದ ಪ್ರವೇಶಕ್ಕಾಗಿ 96638-61713ನ್ನು ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಅಕಾಡೆಮಿಯ ಮುಖ್ಯಸ್ಥರಾದ ಬ್ರಹ್ಮ ಗಾಯಕ್‌ವಾಡ್, ಅಧ್ಯಾಪಕರಾದ ಧಾಮೋದರ ರೆಡ್ಡಿ, ಗೋವರ್ಧನ್ ಇದ್ದರು.

Leave a Reply

Your email address will not be published. Required fields are marked *