
ಶಿಕಾರಿಪುರ :- ಪಹಲ್ಗಾಮನಲ್ಲಿ ನಡೆದ ಪ್ರವಾಸಿಗರ ಹತ್ಯೆ ನಂತರ ದೇಶದ ಸಮಸ್ತ ಭಾರತೀಯರ ರಕ್ತ ಕುದಿಯುತ್ತಿತ್ತು, ಮೋದಿರವರು ತೆಗೆದುಕೊಂಡ ಆಪರೇಷನ್ ಸಿಂಧೂರ ನಿರ್ಧಾರದಿಂದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ.ಗಡಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶ ಸೇವೆಗಾಗಿ ಜೀವ ಮುಡುಪಾಗಿಟ್ಟಿರುವ ಸೈನಿಕರನ್ನು ಗೌರವಿಸಿ ಹುರಿದುಂಬಿಸುವುದು ದೇಶಪ್ರೇಮಿಗಳ ಕರ್ತವ್ಯವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಿರಂಗ ಯಾತ್ರೆಗೆ ಚಾಲನೆ ನೀಡಿ ನಂತರದಲ್ಲಿ ಪಟ್ಟಣದ ಪ್ರಮುಖ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆ ನಂತರ ತಾಲೂಕು ಕಚೇರಿ ಮುಂಭಾಗದ ಈಸೂರು ಸ್ವಾತಂತ್ರ ಹೋರಾಟಗಾರರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಪಕ್ಷದ ವರಿಷ್ಠರ ಸೂಚನೆ ಮೇರೆಗೆ ದೇಶಾದ್ಯಂತ, ಮೇ 23ರ ವರೆಗೆ ತಿರಂಗ ಯಾತ್ರೆ ನಡೆಯುತ್ತಿದ್ದು ದೇಶಭಕ್ತರು, ದೇಶಪ್ರೇಮಿಗಳು ಯಾತ್ರೆಯಲ್ಲಿ ಪಾಲ್ಗೊಂಡು ಸೈನಿಕರಿಗೆ ಗೌರವ ಸಲ್ಲಿಸಬೇಕು ಎಂದ ಅವರು, ವಿನಾಕಾರಣ ಕಾಶ್ಮೀರದಲ್ಲಿ ಪ್ರವಾಸಿಗರ ಹತ್ಯೆಗೈದು ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ಪಾಕಿಸ್ತಾನಕ್ಕೆ,ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರ ಮೂಲಕ ತಕ್ಕದಿಟ್ಟ ಉತ್ತರ ನೀಡಿದ್ದಾರೆ.ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಬಿಡುವುದಿಲ್ಲ ಎಂದು ಸಿಂಧೂ ನದಿಯ ನೀರನ್ನು ನಿಲ್ಲಿಸಿ ಸೂಕ್ತ ಪಾಠ ಕಲಿಸಿದ್ದಾರೆ ಎಂದರು.

ಗಡಿ ಆಚೆಗಿನ ದಾಳಿಯನ್ನು ಯುದ್ಧ ಎಂದು ಪರಿಗಣಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತೀರ್ಮಾನಿಸಿರುವುದು ಪಾಕಿಸ್ತಾನಕ್ಕೆ ನೀಡಿರುವ ಕಟ್ಟ ಕಡೆಯ ಎಚ್ಚರಿಕೆಯಾಗಿದೆ ಹಾಗೂ ಭಯೋತ್ಪಾದಕರನ್ನು ತಯಾರು ಮಾಡುವ, ಪಾಕಿಸ್ತಾನದಲ್ಲಿನ ಭಯೋತ್ಪಾದಕರನ್ನು ಬೇರು ಸಮೇತ ಮಟ್ಟ ಹಾಕಲು ಈ ನಿರ್ಧಾರ ಅವಶ್ಯಕವಾಗಿದೆ ಎಂದರು. ಪಹಲ್ಗಾಮ ನಲ್ಲಿ ನಡೆದ ಪ್ರವಾಸಿಗರ ಹತ್ಯೆಯ ನಂತರ ಸಮಸ್ತ ಭಾರತೀಯರ ರಕ್ತ ಕುದಿಯು ತ್ತಿತ್ತು,ಮೋದಿ ಜಿ ಅವರು ತೆಗೆದು ಕೊಂಡ ಆಪರೇಷನ್ ಸಿಂಧೂರ ನಿರ್ಧಾರದಿಂದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಮರ್ಮಾಘಾತ ನೀಡಿದೆ.ಪಹಲ್ಗಾಮ ನಲ್ಲಿನ ಪ್ರವಾಸಿಗರ ಹತ್ಯೆಗೆ ಪ್ರತಿಕಾರ ತೀರಿಸಿಕೊಂಡಿದ್ದೇವೆ ಎಂದರು.
ಮಾಜಿ ಯೋಧ ಬಸವರಾಜ್, ಮಹಾಲಿಂಗಪ್ಪ, ಪುರಸಭಾಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪ ಮಂಜುನಾಥ್, ತಾ.ಬಿಜೆಪಿ ಅಧ್ಯಕ್ಷ ಸಂಕ್ಲಾಪುರದ ಹನುಮಂತಪ್ಪ, ಸದಸ್ಯ ರೇಣುಕಸ್ವಾಮಿ, ಸುರೇಶ್, ಲಕ್ಷ್ಮೀ ಮಹಾಲಿಂಗಪ್ಪ, ರೇಖಾಬಾಯಿ, ಎಂಎಡಿಬಿ ಮಾಜಿ ಅಧ್ಯಕ್ಷ ಗುರು ಮೂರ್ತಿ, ಮುಖಂಡ ರಾಮಾ ನಾಯ್ಕ, ವಸಂತಗೌಡ, ಮಹೇಶ್ ಹುಲ್ಮಾರ್,ಸುಧೀರ್, ಪ್ರವೀಣಶೆಟ್ಟಿ, ಬೆಣ್ಣೆ ಪ್ರವೀಣ್, ಈರಣ್ಣ, ಮಧು, ನಿವೇದಿತಾ ರಾಜು ಸಹಿತ ಪಕ್ಷದ ಅನೇಕ ಮುಖಂಡರು ಕಾರ್ಯಕರ್ತರು ಎನ್ಸಿಸಿ ವಿದ್ಯಾರ್ಥಿಗಳಿದ್ದರು.
