google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಮೆಸ್ಕಾಂ ಸಿಬ್ಬಂದಿ ನಂದೀಶ್ (38) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೆಸ್ಕಾಂನ ಗುತ್ತಿಗೆದಾರ ವಿಜಯ ಕುಮಾರ್, ಜಗದೀಶ್, ರವಿ ಹಾಗೂ ಯುವರಾಜ್ ವಿರುದ್ಧ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೆಸ್ಕಾಂನಲ್ಲಿ ಮೇಸ್ತ್ರಿಯಾಗಿದ್ದ ನಂದೀಶ್ ಗುತ್ತಿಗೆದಾರ ವಿಜಯಕುಮಾರ್ ಕರೆದುಕೊಂಡು ಬಂದಿದ್ದ ಯುವರಾಜ್‌ಎಂಬುವರನ್ನ ಹೊರಗುತ್ತಿಗೆ ನೌಕರನ್ನಾಗಿ ನೇಮಿಸಿಕೊಂಡಿದ್ದರು. ಯುವರಾಜ್ ನನ್ನ ಗುತ್ತಿಗೆದಾರ ವಿಜಯ ಕುಮಾರ್ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಸೆಪ್ಟಂಬರ್ ನಲ್ಲಿ ವಿದ್ಯುತ್ ಕಂಬ ಹತ್ತಿಸಿ ದುರಸ್ತಿ ಕೆಲಸಕ್ಕೆ ಮುಂದಾಗಿದ್ದರು.

ಈ ವೇಳೆ ಯವರಾಜ್ ಗೆ ವಿದ್ಯುತ್ ಶಾಕ್ ಆಗಿ ತೀವ್ರಗಾಯಗಳಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಯುವರಾಜ್ ಅವರ ವಿಚಾರವಾಗಿ ಮಾನಸಿಕವಾಗಿ ನೋವು ತಿಂದಿದ್ದ ನಂದೀಶ್ ನಿನ್ನೆ ಕುಂಸಿಯಲ್ಲಿನ ಮೆಸ್ಕಾಂ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ.

ಯುವರಾಜ್ ನ ಚಿಕಿತ್ಸೆ ಮತ್ತು ಜೀವಲನೋಪಯಕ್ಕಾಗಿ ಆತನ ಕುಟುಂಬ ಬೆಳಿಗ್ಗೆ ೫ ಗಂಟೆಗೆ ನಂದೀಶ್ ಗೆ ಮೊಬೈಲ್ ನಲ್ಲಿ ಕರೆ ಮಾಡಿ 25-50 ಲಕ್ಷ ರೂ. ಹಣದ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ನಂದೀಶ್ ತಮ್ಮಕೈಯಿಂದಲೇ 4ಲಕ್ಷ ರೂ ಖರ್ಚು ಮಾಡಿದ್ದಾರೆ. ಇಲಾಖೆ ಅಧಿಕಾರಿಗಳು ಸಹ ಈ ವಿಚಾರದಲ್ಲಿ ಮುತುವರ್ಜಿ ವಹಿಸದ ಹಿನ್ನಲೆಯಲ್ಲಿ ನಂದೀಶ್ ನಿನ್ನೆ ನೇಣಿಗೆ ಶರಣಾಗಿದ್ದಾರೆ ಎಂದು ದೂಷಿಸಿದೆ.

ಇಂದು ಶಿವಮೊಗ್ಗದ ಮೆಗ್ಗಾನ್ ನ ಮರಣೋತ್ತರ ಪರೀಕ್ಷೆಯಲ್ಲಿ ಪೋಸ್ಟ್ ಮಾರ್ಟಂ ಆಗಿದೆ. ಈ ವೇಳೆ ಮೆಸ್ಕಾಂನ ಲಾರಿಗೆ ನಂದೀಶ್ ನ ಬ್ಯಾನರ್ ಕಟ್ಟಿ ಅಂತಿಮ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲಾಗಿದೆ. ನಂದೀಶ್ ಸಾವಿನಿಂದ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *