ಶಿವಮೊಗ್ಗ :- ಕ್ರೀಡೆ ಎಂಬುದು ಸಂಘಟಿಕ ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ ಜೀವನದ ಸವಾಲುಗಳನ್ನು ಅತ್ಯಂತ ಧನಾತ್ಮಕ ಮತ್ತು ಶಾಂತ ರೀತಿಯಿಂದ ಎದುರಿಸಲು ಕ್ರೀಡೆ ನಮ್ಮನ್ನು ಸಿದ್ಧಪಡಿಸುತ್ತದೆ ಹಾಗೂ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕರ್ನಾಟಕ ರಾಜ್ಯ ಬೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಅಭಿಮತ ವ್ಯಕ್ತಪಡಿಸಿದರು.
ಅವರು ಇಂದು ಶಾಲಾ ಶಿಕ್ಷಣ ಇಲಾಖೆ ( ಪದವಿಪೂರ್ವ). ಮತ್ತು ಮಹೇಶ್ ಪದವಿಪೂರ್ವ ಕಾಲೇಜ್ ಸಹಯೋಗದಲ್ಲಿ ನೆಹರು ಒಳ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 19ವರ್ಷ ವಯೋಮಿತಿ ಒಳಗಿನ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ 2 ದಿನದ ಬಾಕ್ಸಿಂಗ್ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯೂ ಸಹ ತುಂಬಾ ಮುಖ್ಯ ಇದು ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಆ ಯೋಜನೆ ಗೊಂಡಿರುವಂತಹ ಈ ಬಾಕ್ಸಿಂಗ್ ಕ್ರೀಡಾಕೂಟಕ್ಕೆ 17 ಜಿಲ್ಲೆಗಳಿಂದ ಸ್ಪರ್ಧೆಗಳು ಆಗಮಿಸಿದ್ದು ತುಂಬಾ ಸಂತೋಷವಾಗಿದೆ ಎಂದು ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದಿಸಿದರು.
ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಎಸ್ ಗುಂಡಪಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂತಹ ಕ್ರೀಡೆಗಳು ನಮ್ಮಲ್ಲಿ ಖಿನ್ನತೆಯನ್ನು ಕಡಿಮೆ ಮಾಡುವುದರ ಜೊತೆಗೆ ನಾವು ಸದಾ ಸದೃಢರಾಗಿ ಧನಾತ್ಮಕ ಚಿಂತೆಯಿಂದ ಇರುತ್ತೇವೆ
ಈ ರಾಜ್ಯ ಮಟ್ಟದ ಬಾಕ್ಸಿಂಗ್ ಕ್ರೀಡೆಯಲ್ಲಿ 160 ಜನ ಸ್ಪರ್ದಾಳುಗಳು ಭಾಗವಹಿಸಿದ್ದು ಅದರಲ್ಲಿ 120 ಯುವಕರು ಹಾಗೂ 40 ಜನ ಯುವತಿಯರು ಭಾಗವಹಿಸಿದ್ದಾರೆ. ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ನಾಯಕ, ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ಇ. ರಾಜಶೇಖರ್, ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ನ ಗೌರವಾಧ್ಯಕ್ಷ ದೇವರಾಜ್ ಮಂಡನೆಕೊಪ್ಪ, ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್, ಜಿಲ್ಲಾ ವಾಣಿಜ್ಯ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್, ಪಂಡ್ರಿನಾಥ್ , ಪಳನಿ ವೇಲು, ಶ್ರೀ ಹರಿ, ಶಶಿಕುಮಾರ್, ನಾಗೇಂದ್ರ ಪ್ರಸಾದ್, ಪ್ರಸನ್ನ ಕೆ. ಹೆಚ್. ವಿ. ಶುಭಕರ, ಬೆಂಜಮಿನ್ ಫ್ರಾನ್ಸಿಸ್, ಜಿಎಫ್ ಕುಟ್ರಿ, ಶಿವಮೊಗ್ಗ ವಿನೋದ್ ಪಸ್ಥಿತರಿದ್ದರು.