ಶಿವಮೊಗ್ಗ :- ನಗರದಲ್ಲಿ ಕಳೆದ ಕೆಲ ದಿನಗಳಿಂದ ಮಣ್ಣು ಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಜನ ನೀರು ಕುಡಿಯಲಾಗದೆ ಪರಿತಪಿಸಿದರು.

ಕಾರಣ ಕಳೆದ ಕೆಲ ದಿನಗಳಿಂದ ತೀರ್ಥಹಳ್ಳಿ ಭಾಗದ ವಿವಿಧೆಡೆ ಸುರಿದ ಭಾರಿ ಮಳೆಯಿಂದಾಗಿ ಶಿವಮೊಗ್ಗ ನಗರದ ನಾಗರಿಕರಿಗೆ ಮಣ್ಣು ಮಿಶ್ರಿತ ಕೆಂಪು ನೀರು ಸರಬರಾಜು ಆಗುತ್ತಿದೆ.
ಜೊತೆಗೆ ಮುಖ್ಯವಾಗಿ ನೀರು ಈ ಮಟ್ಟಕೆ ಕೆಸರಿನಂತಾಗಿದೆ, ನೀರು ಶುದ್ದೀಕರಣ ನಿರ್ಲಕ್ಷಿಸಲಾಗಿದೆಯೇ ಎಂಬ ಎಲ್ಲಾ ಪ್ರಶ್ನೆ ಗಳಿಗೆ ಇಂದು ಬೆಳಿಗ್ಗೆ ಸಂಪೂರ್ಣ ಮಾಹಿತಿ ದೊರಕಿದೆ. ಅದು ಶಾಸಕರ ಸಮ್ಮುಖದಲ್ಲಿಯೇ…

ಕೆಂಪು ಬಣ್ಣ ಮಿಶ್ರಿತ ನೀರು ಸರಬರಾಜಾದ ಹಿನ್ನಲೆ ಶಿವಮೊಗ್ಗದ ಇತಿಹಾಸ ಪ್ರಸಿದ್ದ ಮಂಡ್ಲಿ ನೀರು ಶುದ್ದೀಕರಣ ಘಟಕಕ್ಕೆ (ಪಂಪ್ ಹೌಸ್) ಶಾಸಕರು ಖುದ್ದಾಗಿ ಭೆಟಿ ನೀಡಿ ಪರಿಶೀಲನೆ ನಡೆಸಿದರು. ಕೆಸರಿನಂತಾಗಿ ಬಂದ ನೀರನ್ನು ಶುದ್ದೀಕರಣ ಗೊಳಿಸಲು ಪಂಪ್ ಹೌಸೌ ನಲ್ಲಿ ಸಾಕಷ್ಟು ಶ್ರಮಪಟ್ಟು ಪ್ರಯತ್ನಿಸಲಾಗಿದೆ. ಆದರೂ ಈ ಮಟ್ಟಕ್ಕೆ ಮಣ್ಣು ಮಿಶ್ರಿತ ಕೆಂಪು ನೀರು ಪೂರೈಕೆ ಆಗಿದೆ. ಇಂದಿನಿಂದ ಶುದ್ದ ನೀರು ಸಿಗಲಿದೆ ಎಂದು ಶಾಸಕರು ಭರವಸೆ ನೀಡಿದ್ದಾರೆ.

ಜೊತೆಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಪಾಲಿಕೆಯ ಆಯುಕ್ತರಾದ ಶ್ರೀಮತಿ ಕವಿತಾ ಅವರು, ಪಾಲಿಕೆ ಹಾಗೂ ಜಲ ಮಂಡಳಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ವಾಸ್ತವಿಕ ಪರಿಸ್ಥಿತಿಯನ್ನು ವೀಕ್ಷಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.