google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್‌ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಧಕರಿಗೆ ಶ್ರೀದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮವನ್ನು ಅ. 12ರಂದು ಬೆಳಿಗ್ಗೆ 10ಕ್ಕೆ ಗೆಜ್ಜೇನಹಳ್ಳಿ ಮಾರ್ಗದ ಮಾಧ್ಯ ಇರುವ ಕೆ.ಎಚ್.ಬಿ. ಪ್ರೆಸ್ ಕಾಲೋನಿಯ ಟ್ರಸ್ಟ್ ಅವರಣದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಎಂ.ಎನ್. ಸುಂದರಾಜ್ ಹೇಳಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಕಳೆದ 3 ವರ್ಷಗಳಿಂದ ಸಾಧಕರಿಗೆ ರಾಷ್ಟ್ರೀಯ ಪುರಸ್ಕಾರವನ್ನು ನೀಡುತ್ತ ಬಂದಿದ್ದು, ಈ ಬಾರಿ ಮಧುರೈನ ನಾರಾಯಣ್ಣನ್ ಕೃಷ್ಣನ್ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯೂ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದರು.

ಹಾಗೆಯೇ ಸಾಧಕರಾದ ಶಿವಮೊಗ್ಗದ ಮುಕ್ತಭಟ್ ಅವರಿಗೆ 2024ರ ಶ್ರೀ ಲಲಿತಾ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯೂ ೫ಸಾವಿರ ನಗದು ಬಹುಮಾನವನ್ನು ಒಳಗೊಂಡಿದೆ ಎಂದರು.

ಈ ಎರಡು ಪ್ರಶಸ್ತಿಗಳ ವಿತರಣಾ ಕಾರ್ಯಕ್ರಮವನ್ನು ಹೊಸಕೋಟೆಯ ಪೂಜ್ಯ ಮಾತಾಜಿ ಬ್ರಹ್ಮಮಯಿ ಅವರು ಉದ್ಘಾಟಿಸಲಿದ್ದಾರೆ ಅಧ್ಯಕ್ಷತೆಯನ್ನು ದೊಡ್ಡಮ್ಮ ದೇವಿಯ ಉಪಾಸಕರು ಹಾಗೂ ಟ್ರಸ್ಟ್‌ನ ಅಧ್ಯಕ್ಷರಾದ ಸಿದ್ದಪ್ಪಾಜಿ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ವಿಜನಿ ಡಾ. ವಾಸುದೇವ್ , ಬೆಂಗಳೂರಿನ ರಮಣ ಆಶ್ರಮದ ಶ್ರೀನಿವಾಸ್ ರೆಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದರು.

ನಾರಾಯಣ್ ಕೃಷ್ಣನ್ ಅವರು ಸೇವೆಗೆ ಮತ್ತೊಂದು ಹೆಸರಾಗಿದ್ದಾರೆ. ಇವರು ಮಧುರೈನಲ್ಲಿ ಟ್ರಸ್ಟ್ ಸ್ಥಾಪಿಸಿ ಅಲ್ಲಿ ಪ್ರತಿನಿತ್ಯ 500 ಭಿಕ್ಷುಕರಿಗೆ 3 ಹೊತ್ತು ಬಿಸಿಯೂಟ ನೀಡುತ್ತಿದ್ದಾರೆ. ಇದುವರೆಗೂ ಸುಮಾರು 55ಲಕ್ಷಕ್ಕೂ ಹೆಚ್ಚು ಹೊತ್ತು ಊಟ ಹಾಕಿದ್ದಾರೆ. ಇಲ್ಲಿರುವ ಮಾನಸಿಕ ಅಸ್ವಸ್ಥರನ್ನು ನೋಡಿಕೊಳ್ಳಲು 50 ಜನರನ್ನು ನೇಮಿಸಿದ್ದಾರೆ. ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡುತ್ತಿದ್ದಾರೆ. ಇವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಕೂಡ ಸಿಕ್ಕಿವೆ ಇಂತವರನ್ನು ಗೌರವಿಸುವುದು ನಮ್ಮ ಪುಣ್ಯ ಎಂದರು.

ಹಾಗೆಯೇ ಶಿವಮೊಗ್ಗದವರೇ ಆದ ಮುಕ್ತಭಟ್ ಅವರು ಶ್ರೀ ವಿದ್ಯಾಭಜನ ಮಂಡಳಿ ಸ್ಥಾಪಿಸಿ ಲಲಿತಾ ಸಹಸ್ರಾನಾಮ, ಸೌಂದರ್‍ಯ ಲಹರಿಯನ್ನು ನೂರಾರು ಮಾತೆಯರಿಗೆ ಕಲಿಸಿದ್ದಾರೆ. ಹಲವು ಸತ್ಸಂಗಗಳನ್ನು ನಡೆಸುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಶಬರೀಶ್ ಕಣ್ಣನ್, ನರಸಿಂಹಣ್ಣ, ಪುರುಷೋತ್ತಮ್, ಸಚಿನ್, ದೇವಿ ಉಪಾಸಕ ಗಜೇಂದ್ರ ಎಸ್. ಕುಡಾಲ್ಕರ್, ವಿಜಯ್ ಇದ್ದರು.

Leave a Reply

Your email address will not be published. Required fields are marked *