

ಶಿವಮೊಗ್ಗ : ತಾಲ್ಲೂಕಿನ ಅರಸಾಳು, ಬೆಳ್ಳೂರು, ತಮ್ಮಡಿಹಳ್ಳಿ, ಸಿರಿಗೆರೆ, ಹೆದ್ದಾರಿಪುರ, ಸೇರಿದಂತೆ ಸುತ್ತಮುತ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಆನೆಗಳು ಗುಂಪು ಗುಂಪಾಗಿ ಬಂದು ಬೆಳೆನಾಶ ಮಾಡುವು ದಲ್ಲದೇ ರೈತರ ಮೇಲೆ ದಾಳಿ ಮಾಡು ತ್ತಿದ್ದು ಜನರು ದಿನ ನಿತ್ಯ ಆತಂಕದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ವಲಯ ಅರಣ್ಯ ಅಧಿಕಾರಿಗಳಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರೈತನು ಬೆಳೆದ ಬೆಳೆಗಳು ಮೆಕ್ಕಜೋಳ, ಬಾಳೆ. ಅಡಿಕೆ ನಾಶ ಪಡಿಸಿ ರೈತನಿಗೆ ಅಪಾರ ನಷ್ಟ ಉಂಟು ಮಾಡುತ್ತಿವೆ ಅಲ್ಲದೇ ಕೆಲವು ಗ್ರಾಮಗಳಿಗೆ ನುಗ್ಗಿದ ಉದಾಹರಣೆಗಳು ಸಹ ಇವೆ ಈ ರೀತಿಯಾಗಿ ಪದೇ ಪದೇ ದಾಳಿ ಮಾಡುತ್ತಿರುವುದರಿಂದ ರೈತರು ಜೀವನ ಮರಣದ ಭಯದಿಂದ ಆತಂಕದಿಂದ ಬದುಕುತ್ತಿದ್ದಾರೆ. ಆದ್ದರಿಂದ ತಕ್ಷಣ ಇವರಿಗೆ ರಕ್ಷಣೆ ಒದಗಿಸುವುದರ ಜೊತೆಗೆ ಸೂಕ್ತ ಬೆಳೆ ನಷ್ಟ ಪರಿಹಾರವನ್ನು ಕೊಡಬೇಕು ಮತ್ತು ಜಮೀನಿಗೆ ಗ್ರಾಮದೊಳಗೆ ಅನೆಗಳು ಬಾರದ ಹಾಗೆ ತಡೆಯಬೇಕು. ತತಕ್ಷಣದಿಂದ ಇವುಗಳನ್ನು ಕಾಡಿಗೆ ಕಳುಹಿಸುವ ಕೆಲಸ ಮಾಡಬೇಕು.ಈ ವ್ಯವಸ್ಥೆ ಮಾಡುವುದಲ್ಲದೇ ರೈತರ ಜಮೀನಿಗೆ ಬರುತ್ತಿರುವ ಆನೆಗಳನ್ನ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯಕ್ಕೆ ಬೆಳಕು ನೀಡಿ ತಮ್ಮ ಸ್ವಂತ ಜಗವನ್ನ ಬಿಟ್ಟುಕೊಟ್ಟು ಗ್ರಾಮಸ್ಥರು ಇಲ್ಲಿನ ಹಳ್ಳಿಗಳಲ್ಲಿ ತಮ್ಮ ಜೀವನ ನೆಲೆಯನ್ನ ಕಟ್ಟಿಕೊಳ್ಳುತ್ತಿರುವ ಜನರ ಹಾಗೂ ಪ್ರಾಣಿಗಳ ಮಧ್ಯೆ ಇತ್ತೀಚ್ಚಿನ ದಿನಗಳಲ್ಲಿ ಸಂಘರ್ಷ ನಡೆಯುತ್ತಲೇ ಇದೆ. ಈ ಬಗ್ಗೆ ಕೆಲ ರೈತ ಸಂಘಗಳು ಸರ್ಕಾರದ ಜೊತೆ ಮಾತುಕತೆ ನಡೆಸಿ ಒತ್ತಾಯ ಮಾಡಿದ್ದರೂ, ಸರ್ಕಾರ ರೈತರ ಪರ ಕಾಳಜಿ ವಯಿಸುತ್ತಿಲ್ಲ . ರೈತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿವೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಂಭಂದ ಪಟ್ಟ ಜನಪ್ರತಿನಿಧಿಗಳು ಆಧಿಕಾರಿಗಳ ಜೊತೆ ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಾದಯಾತ್ರೆ ಮಾಡಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮನವಿ ಸಂದರ್ಭದಲ್ಲಿ ದೇವರಾಜ್ ಮತ್ತಿಕೊಪ್ಪ, ಮಹೇಂದ್ರ ಬುಕ್ಕಿವರೆ, ಪ್ರವೀಣ್ ಲಕ್ಸ್ಮಿಕಾಂತ್, ಅರುಣ್ ಕಟ್ಟೆ, ಪುನೀತ್ ಬೆಳ್ಳೂರು, ಚಂದ್ರಶೇಟ್ಟಿ, ರೈಸ್ ಮಿಲ್ ಮಾಲೀಕರಾದ ಶಂಕರ್, ಪ್ರವೀಣ್, ಕೃಷ್ಣ ಮೂರ್ತಿ ಮಂಜು ಕುಲಾಲ್ ಉಮೇಶ್ ಬಸವಪುರ ಸೇರಿದಂತೆ ಗ್ರಾಮಸ್ಥರು ಭಾಗವಸಿದ್ದರು.