google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ನಗರದ ಮೆಟ್ರೋ ಆಸ್ಪತ್ರೆಯ ರೋಗಿ ಒಬ್ಬರ ಹೃದಯಕ್ಕೆ “ಆರಬೈಟಲ್ ಅಥೆರೆಕ್ಟಮಿ” ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಮೆಟ್ರೋ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಲಕ್ಷ್ಮೀನಾರಾಯಣ ಆಚಾರ್ ರವರು ತಿಳಿಸಿದರು.

ನಗರದ ಮೆಟ್ರೋ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಆರಬೈಟಲ್ ಅಥೆರೆಕ್ಟಮಿ ಚಿಕಿತ್ಸೆಗೆ ಒಳಗಾದ ಶಿವಮೊಗ್ಗ ನಗರದ 76 ವರ್ಷದ ಚಂದ್ರಪ್ಪ ಶೆಟ್ಟಿ ಅವರಿಗೆ ಆಸ್ಪತ್ರೆ ಹೃದಯ ರೋಗ ತಜ್ಞರಾದ ಡಾ. ಶಿವಶಂಕರ್ ಟಿ.ಹೆಚ್. ನೇತೃತ್ವದ ತಂಡ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ತಿಳಿಸಿದರು.

ಹೃದಯದ ರಕ್ತ ನಾಳದಲ್ಲಿ ತುಂಬಾ ಕ್ಯಾಲ್ಸಿಯಂ ಇದ್ದರೆ ಈ ಹಿಂದೆ ಓಪನ್ ಹಾರ್ಟ್ ಸರ್ಜರಿ ಮಾಡುತ್ತಿದ್ದೆವು. ಈಗ ರಕ್ತನಾಳದ ಕ್ಯಾಲ್ಸಿಯಂನ್ನು ಪುಡಿ ಮಾಡಿ ಸ್ಟಂಟ್ ಹಾಕುವ ವಿಧಾನವಾಗಿದೆ. ಈ ವಿಧಾನದಿಂದ ರಕ್ತ ನಾಳಕ್ಕೆ ಅಪಾಯ ಕಡಿಮೆ ಎಂದು ವೈದ್ಯರಾದ ಡಾ. ಶಿವಶಂಕರ್ ಟಿ ಹೆಚ್ ಮಾತನಾಡಿ ಆರಬೈಟಲ್ ಅಥೆರೆಕ್ಟಮಿ ಡೈಮಂಡ್ ಬ್ಲಾಕ್ 360 ಸಾಧನವನ್ನು ಉಪಯೋಗಿಸಿ ರಕ್ತ ನಾಳದಲ್ಲಿ ಕ್ಯಾಲ್ಸಿಯಂ ಫ್ಯಾಟ್ ತೆಗೆದು ರಕ್ತ ನಾಳವನ್ನು ಶುದ್ದೀಕರಿಸಲಾಯಿತು, ನಂತರ ಸ್ಟಂಟ್ ಅಳವಡಿಸಲಾಗಿದೆ ಎಂದು ತಿಳಿಸಿದರು.

ಇದರಿಂದ ರೋಗಿಗೆ ಯಾವುದೇ ತೊಂದರೆ ಆಗುವುದಿಲ್ಲ. ಶಸ್ತ್ರ ಚಿಕಿತ್ಸೆ ಆದ ನಂತರ 3 ದಿನಗಳಲ್ಲಿ ರೋಗಿಯನ್ನು ಮನೆಗೆ ಕಳುಹಿಸಿಕೊಡಲಾಯಿತು ಎಂದರು.

ಈ ಪತ್ರಿಕಾಘೋಷ್ಟಿಯಲ್ಲಿ ನಿರ್ದೇಶಕರುಗಳಾದ ಡಾ. ತೇಜಸ್ವಿ ಟಿ. ಎಸ್. (ಸಿ.ಈ.ಓ), ಡಾ. ಪೃಥ್ವಿ ಬಿ. ಸಿ, (ಮೆಡಿಕಲ್ ಡೈರೆಕ್ಟರ್) ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ. ಶಿವಶಂಕರ್ ಟಿ. ಹೆಚ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *