ಶಿವಮೊಗ್ಗ :- ಶಿವಮೊಗ್ಗ ನಗರದ ಎಲ್ಲೆಲ್ಲೂ ಶಿವಮಯ ವಾತಾವರಣ ಸೃಷ್ಠಿಯಾಯಿತು. ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ ೬ರಿಂದಲೇ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ಶಿವನ ಧರ್ಶನ ಪಡೆದು ಪಾನಕ, ಕೋಸಂಬರಿ ಸವೆದರು.
ಚಳಿಗಾಲ ಮುಗಿದು ಶಾಲಿವಾಹನ ಶೆಕೆ ಪ್ರಾರಂಭವಾಗುವ ಮುನ್ನ ಬರುವ ಜಗನ್ನಾಥ ಶಿವನನ್ನು ನೆನೆಯುವ ವಿಶೇಷ ಹಬ್ಬ ಮಹಾಶಿವರಾತ್ರಿ. ಈ ವಿಶೇಷ ಹಬ್ಬ ಈ ಭಾರಿ ಭಾನುವಾರ ಬಂದಿದೆ. ಬಹಳ ಹಿಂದಿನಿಂದಲೂ ಶಿವಮೊಗ್ಗ ತುಂಗಾ ನದಿಯ ತಟದಲ್ಲಿರುವ ಹರಕೆರೆಯ ಶಿವನ ಸನ್ನಿಧಿಗೆ ಭಕ್ತರು ಹೆಚ್ಚಾಗಿ ಹೋಗುತ್ತಿರುವುದು ಸಾಮಾನ್ಯ. ಇಂದು ಇಲ್ಲಿ ಭಕ್ತರು ವಿಶೇಷ ದರ್ಶನ ಪಡೆದು ಪುನೀತರಾದರು.
ಇದೇ ರೀತಿ ಊರಗಡೂರಿನ ಗುಡ್ಡೇ ಮರುಡು ಶಿವನ ದೇವಸ್ಥಾನದಲ್ಲಿ ಈ ಭಾರಿ ಕೂಡ ಭಕ್ತರ ದಂಡು ಹೆಚ್ಚಾಗಿತ್ತು. ಶಿವಮೊಗ್ಗ ನಗರದಿಂದ ಸ್ವಲ್ಪ ದೂರ ಎನಿಸಿದರೂ, ಇಲ್ಲಿಗೆ ಹೋಗಿ ಶಿವನ ದರ್ಶನ ಪಡೆದು ಪಾನಕ ಕೋಸಂಬರಿ ಸವೆಯುವುದೇ ಒಂದು ರೀತಿಯ ಸಂತಸದ ವಾತಾವರಣ ಎನ್ನಬಹುದು.

ಶಿವಮೊಗ್ಗ ನಗರದ ಹಳೇ ಜೈಲು ಕಾಂಪೌಂಡ್ ನಲ್ಲಿರುವ ನೂರಾರು ವರ್ಷ ಹಳೆಯ ಶಿವನ ದೇವಸ್ಥಾನದಲ್ಲೂ ಕೂಡ ವಿಶೇಷ ಅಲಂಕಾರ, ಭಕ್ತರಿಗೆ ದರ್ಶನ, ಪಾನಕ ಕೋಸಂಬರಿ ವಿತರಣೆ ನಡೆಯಿತು. ಅದೇ ರೀತಿ ವಿನೋಬನಗರದ ಪ್ರಸಿದ್ಧ ಶಿವಾಲಯದಲ್ಲಿ ಭಕ್ತರ ದಂಡು ಹೆಚ್ಚಾಗಿತ್ತು. ಸುಮಾರು ನಾನೂರು ಮೀಟರ್ ದೂರ ಸರತಿ ಸಾಲಿನಲ್ಲಿ ನಿಂತ ಹಿರಿಯರು ಕಿರಿಯರು ಶಿವನ ದರ್ಶನ ಪಡೆದರು. ಇಲ್ಲೂ ಪ್ರಸಾದದ ವ್ಯವಸ್ಥೆ ನಡೆಯಿತು. ವೀರಶೈವ ಕಲ್ಯಾಣ ಮಂದಿರದ ಆವರಣದಲ್ಲಿ ಇರುವ ಶಿವನ ದೇವಳದಲ್ಲಿ ಶಿವಲಿಂಗಕ್ಕೆ ಪೂಜೆ ನೆರವೇರಿಸಿದ ಭಕ್ತರು ಧನ್ಯರಾದರು.
ವಿನೋಬನಗರ ಮಲೆನಾಡು ಸ್ನೇಹ ಜೀವಿ ಬಳಗದಿಂದ ಭಕ್ತರಿಗೆ ಪಾನಕ ಕೋಸಂಬರಿ ವಿತರಣೆ…

ವಿನೋಬನಗರ ಬಡಾವಣೆಯ ಹೆಸರು ವಾಸಿ ಮಲೆನಾಡು ಸ್ನೇಹ ಜೀವಿ ಬಳಗದಿಂದ ಫ್ರೀಡಂ ಪಾರ್ಕ್ ಎದುರಿನ ವೃತ್ತದಲ್ಲಿ ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಳಗದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.