
ತೀರ್ಥಹಳ್ಳಿ :- ತಾಲೂಕಿನ ಭಾರತೀಪುರದಲ್ಲಿ ನಿನ್ನೆ ರಾತ್ರಿ ಕಾರು ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಇಂದು ಬೆಳಿಗ್ಗೆ ಮತ್ತೋರ್ವ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.
ಚನ್ನಗಿರಿ ತಾಲೂಕಿಗೆ ಕಾರ್ಯಕ್ರಮ ನಿಮಿತ್ತ ಶೃಂಗೇರಿಯ ಬೆಣಸೆಯಿಂದ ಹೊರಟಿದ್ದ ಶ್ವಿಪ್ಟ್ ಕಾರು ತೀರ್ಥಹಳ್ಳಿಯ ಭಾರತೀಪುರದಲ್ಲಿ ಬಸ್ ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮಕ್ಕಳು ದೊಡ್ಡವರು ಮತ್ತು ಚಾಲಕನೂ ಸೇರಿ 6 ಜನ ಪ್ರಯಾಣಿಸುತ್ತಿದ್ದರು. ನಾಲ್ವರು ಈ ಪ್ರಕರಣದಲ್ಲಿ ಮೃತಪಟ್ಟಿದ್ದು, ಉಳಿದಿಬ್ವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಚಾಲಕ ರಿಯಾಜ್ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಫಾತೀಮಾ (78) ರಿಹಾನ್ (15) ರಾಯಿಲ್ (9) ಮತ್ತು ಜಿಯಾನ್ (12) ಎಂಬುವರು ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಶಿವಮೊಗ್ಗ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ ಎ. ಜಿ. , ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
