
ಶಿವಮೊಗ್ಗ :- ಸ್ವದೇಶಿ ಉತ್ಪನ್ನಗಳ ದೇಸಿ ಮೇಳ ಪರಂಪರೆ ಬೃಹತ್ ಮತ್ತು ಮಾರಾಟವನ್ನು ಇದೇ ಡಿ. 12 ರಿಂದ 14ರ ವರೆಗೆ ನಗರದ ಗೋಪಾಲಗೌಡ ಬಡಾವಣೆಯ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವದೇಶಿ ಜಗರಣಾ ಮಂಚ್ನ ಜಿಲ್ಲಾಧ್ಯಕ್ಷ ಪ್ರೊ.ಬಿ.ಎಂ. ಕುಮಾರಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಶಿವಮೊಗ್ಗದ ಜನತೆಗೆ ವಿಶಿಷ್ಟ ಮತ್ತು ಗುಣಮಟ್ಟದ ಸ್ವದೇಶಿ ಉತ್ಪನ್ನಗಳನ್ನು ಒಂದೇ ಸೂರಿನಡಿ ಖರೀದಿಸುವ ಸುವರ್ಣಾವಕಾಶ ಇದಾಗಿದೆ. ಈ ದೇಸಿ ಮೇಳ-ಪರಂಪರೆ ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಬಗೆ ಬಗೆಯ ಗೃಹ ಉತ್ಪನ್ನಗಳು, ಕೈಮಗ್ಗದ ಸೀರೆಗಳು, ಮಣ್ಣಿನ ಉತ್ಪನ್ನಗಳು, ಖಾದಿ ಉತ್ಪನ್ನಗಳು, ಖಾದ್ಯ ಉತ್ಪನ್ನಗಳು, ಹ್ಯಾಂಡ್ ಮೇಡ್ ಹಾಸಿಗೆ ಮತ್ತು ಹೊದಿಕೆಗಳು, ಅಲಂಕಾರಿಕ ವಸ್ತುಗಳು, ಹ್ಯಾಂಡ್ ಮೇಡ್ ಆಭರಣಗಳು ಆಕರ್ಷಕ ಸ್ವದೇಶಿ ಉತ್ಪನ್ನಗಳು ಮತ್ತು ದೇಸಿ ಆಹಾರ ಪದಾರ್ಥಗಳು ಲಭ್ಯವಿರಲಿದ್ದು. ಸ್ಥಳೀಯ ಮಾರಾಟಗಾರರಿಗೆ ಮತ್ತು ಕರಕುಶಲಕರ್ಮಿ ಗಳಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪರಿಚಯಿಸಲು, ಮಾರಾಟ ಮಾಡಲು ಮತ್ತು ಮಾರುಕಟ್ಟೆ ವಿಸ್ತರಿಸಲು ಈ ದೇಸಿ ಮೇಳ-ಪರಂಪರೆ ಒಂದು ಉತ್ತಮ ವೇದಿಕೆಯಾಗಲಿದೆ ಎಂದರು.
ಆತ್ಮ ನಿರ್ಭರ ಭಾರತ ಪರಿಕಲ್ಪನೆಗೆ ಅನುಗುಣವಾಗಿ, ಸ್ವದೇಶಿ ನಮ್ಮ ಸ್ವ-ಭಾವವಾಗಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಾರಲಾಗುತ್ತಿದೆ. ಭಾರತದಲ್ಲೇ ತಯಾರಾದ ವಸ್ತುಗಳನ್ನು ಬಳಸುವ ಮೂಲಕ ದೇಶದ ಆರ್ಥಿಕತೆಗೆ ಮತ್ತು ಸ್ಥಳೀಯ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವ ಜಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಯುವಕರು ಹೆಚ್ಚಾಗಿ ಜಗತಿಕ ಬ್ರ್ಯಾಂಡ್ಗಳು ಮತ್ತು ವೇಗದ ಫ್ಯಾಷನ್ ಕಡೆಗೆ ಒಲವು ತೋರುತ್ತಿರುವ ಈ ಸಮಯದಲ್ಲಿ, ಸ್ವದೇಶಿ ಉತ್ಪನ್ನಗಳನ್ನು ಬಳಸುವ ಮಹತ್ವವನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ಅತ್ಯಗತ್ಯವಾಗಿದೆ ಎಂದರು.
ಶಿವಮೊಗ್ಗದ ಸಮಸ್ತ ನಾಗರಿಕರು, ವಿದ್ಯಾರ್ಥಿಗಳು, ಉದ್ಯಮಿಗಳು, ಮತ್ತು ಪ್ರಜವಂತ ಗ್ರಾಹಕರು ಈ ಮೂರು ದಿನಗಳ ‘ದೇಸಿ ಮೇಳ-ಪರಂಪರೆ’ ಮಹೋತ್ಸವಕ್ಕೆ ಭೇಟಿ ನೀಡಿ, ಇದರ ಭಾಗವಾಗಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಅರ್ಥಶಾಸ್ತ್ರಜ್ಞರು ದೇಸಿ ಮೇಳ-ಪರಂಪರೆ ಕಾರ್ಯಕ್ರಮದ ಆಯೋಜಕರಾದ ಜಯವರ್ಧನ ಆಚಾರ್ಯ, ದಿಲೀಪ್ ಎನ್., ಅರವಿಂದ ಎಲ್.ಜಿ. ಉಪಸ್ಥಿತರಿದ್ದರು.