
ಶಿವಮೊಗ್ಗ :- ಸಮೀಪದ ಸಕ್ರೆಬೈಲು ಆನೆ ಬಿಡರಾದಲ್ಲಿನ ಆನೆಗಳು ಅನಾರೋಗ್ಯಕ್ಕೆ ಒಳಗಾಗಿದ್ದು, ಈ ಪೈಕಿ ಪ್ರಸಿದ್ದ ನಾಡಹಬ್ಬ ಶಿವಮೊಗ್ಗ ದಸರಾ ಅಚರಣೆಯಲ್ಲಿ ಅಂಬಾರಿ ಹೊರುವುದಕ್ಕೆ ನಗರಕ್ಕೆ ಕರೆತರಲಾಗಿದ್ದ ಆನೆ ಬಾಲಣ್ಣನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇದು ಭಾರೀ ಆತಂಕ ಸೃಷ್ಟಿಸಿದೆ.
ಸಕ್ರೆಬೈಲುಆನೆ ಬಿಡಾರದಲ್ಲೀಗ ಒಟ್ಡು ನಾಲ್ಕು ಆನೆಗಳು ಅನಾರೋಗ್ಯಕ್ಕೆ ಒಳಗಾಗಿವೆ. ಶಿವಮೊಗ್ಗ ದಸರಾ ಆಚರಣೆ ವೇಳೆ ಜಂಬೂ ಸವಾರಿ ಮೆರವಣಿಗೆಗೆ ಸಕ್ರೆಬೈಲು ಆನೆ ಬಿಡಾರದಿಂದ ಕರೆತಲಾಗಿದ್ದ ಬಾಲಣ್ಣ, ಸಾಗರ್, ಬಹದ್ದೂರ್ ಹೆಸರಿನ ಮೂರು ಆನೆಗಳ ಪೈಕಿ ಬಾಲಣ್ಣ ಹಾಗೂ ಸಾಗರ್ ಅನಾರೋಗ್ಯಕ್ಕೆ ಒಳಗಾಗಿವೆ. ಅದರ ಜೊತೆಗೆ ಆನೆಬಿಡಾರದಲ್ಲಿನ ವಿಕ್ರಾಂತ್ ಹಾಗೂ ಅಡಕ ಪಡಕ ಎನ್ನುವ ಅನೆಗಳು ಕೂಡ ಅನಾರೋಗ್ಯಕ್ಕೆ ಒಳಗಾಗಿವೆ. ಇದಕ್ಕೆ ಆನೆ ಬಿಡಾರದ ಸಿಬ್ಬಂದಿನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.
ಅಂಬಾರಿ ಹೊತ್ತಿದ್ದ ಬಾಲಣ್ಣನ ಕಿವಿಯ ಭಾಗದಲ್ಲಿ ಗಾಯವಾಗಿ ಹುಳುಗಳ ಬೀಳುತ್ತಿವೆ. ದಸರಾ ಅಂಬಾರಿಗೆ ಬಾಲಣ್ಣ ಹೋಗುವಂತಿರಲಿಲ್ಲ ಬಾಲಣ್ಣನಿಗೆ ಕಾಲು ನೋವಿತ್ತು ಅರ್ಜುನ ಹೋಗಬೇಕಾಗಿತ್ತು ಆದರೆ ಕೊನೆ ಗಳಿಗೆಯಲ್ಲಿ ಅರ್ಜುನನ ಬದಲಾಗಿ ಕಾಲು ನೋವಿದ್ದ ಬಾಲಣ್ಣನನ್ನು ದಸರಾ ಅಂಬಾರಿ ತಯಾರಿಗೆ ಕಳುಹಿಸಲಾಯಿತು. ಮೊದಲೇ ಕಾಲು ನೋವು ಹೇಳುವುದು ಯಾರ ಹತ್ತಿರ ಮೂಕ ಜೀವಿ ಅಂಬಾರಿಗೆ ಹೋಗಿ ಆಯ್ತು ಆದರೆ ಕಾಲು ನೋವು ಹೆಚ್ಚಾದಾಗ ಬಾಲಣ್ಣನಿಗೆ ಕಿವಿಗೆ ಇಂಜೆಕ್ಷನ್ ನೀಡಲಾಯಿತು ಇಬ್ಬರು ವೈದ್ಯರು ಎರಡು ಇಂಜೆಕ್ಷನ್ ಅನ್ನು ನೀಡಿದ್ದಾರೆ.
ಅದು ರಿಯಾಕ್ಷನ್ ಆಗಿ ಬಾಲಣ್ಣನ ಕಿವಿ ಈಗ ಕೊಳೆತು ಹೋಗಿದೆ ಹೊರಗಿನಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದು ಅದು ಫಲಕಾರಿಯಾಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.
ಅದೇ ರೀತಿ ಸಾಗರನಿಗೆ ಹೊಟ್ಟೆ ನೋವು ಎಂದು ಕೊಟ್ಟ ಇಂಜೆಕ್ಷನ್‌ನಿಂದ ಆದ ಗಾಯ ದೊಡ್ಡದಾಗಿದೆ. ಉಳಿದಂತೆ ವಿಕ್ರಾಂತ್ ಆನೆಯ ಕಾಲು ಕೊಳೆತು ಹೋಗಿದೆ. ಆಡ್ಕ ಬಡ್ಕಾ ಎನ್ನುವ ಕುಂದಾಪುರದ ಹಾಲಾಡಿ ಹತ್ತಿರ ಹಿಡಿದು ತಂದ ಆನೆ ಪರಿಸ್ಥಿತಿ ಕೂಡ ಸರಿ ಇಲ್ಲ ಎಂದು ಹೇಳಲಾಗಿದೆ.
ಇಂದೂ ಕೂಡ ಇದಕ್ಕೆ ಸಂಬಂಧಿಸಿದಂತೆ ಸಚಿವ ಮಧುಬಂಗಾರಪ್ಪನವರ ಗಮನಕ್ಕೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಗಮನಕ್ಕೆ ತಂದರು. ಸಚಿವರು ಈ ಬಗ್ಗೆ ನನಗೆ ವಿವರಗಳು ಗೊತಿಲ್ಲ. ಆದರೆ ತಪ್ಪು ಮಾಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರಲ್ಲದೆ, ಸಂಬಂಧಪಟ್ಟ ವಿವರಗಳನ್ನು ತರಿಸಿಕೊಳ್ಳುವುದಾಗಿ ತಿಳಿಸಿದರು.
ಸ್ಷಷ್ಟೀಕರಣ ನೀಡಿದ ಡಿಸಿಎಫ್ ಪಟಗಾರ್
ಸಕ್ರೇಬೈಲು ಆನೆಬಿಡಾರದ ಆನೆಗಳ ಆರೋಗ್ಯದ ಬಗ್ಗೆ ಕೊನೆಗೂ ದೂರವಾಣಿವಲ್ಲಿ ಸಿಕ್ಕು ಸ್ಪಷ್ಟನೆ ನೀಡಿದ ಡಿಸಿಎಫ್ ಪಟಗಾರ್‌ರವರು ಬಾಲಣ್ಣನ ಕಿವಿಗೆ ಗಾಯವಾಗಿರುವುದು ನಿಜ. ಆದರೆ ಯಾವುದೇ ಆತಂಕಪಡಬೇಕಾಗಿಲ್ಲ. ಈಗಾಗಲೇ ಬನ್ನೇರುಘಟ್ಟದಿಂದ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲಾಗಿದೆ. ಈ ಹಿಂದೆ ಬಾಲಣ್ಣನ ಕಿವಿಗೆ ಇಂಜಕ್ಷನ್ ನೀಡುವಾಗ ಇಂಜೆಕ್ಷನ್ ಮುಳ್ಳು ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರಿಂದ ರಿಯಾಕ್ಷನ್ ಆಗಿತ್ತು. ಆದ್ದರಿಂದ ಗಾಯವಾಗಿತ್ತು ಈಗ ಅದಕ್ಕೆ ಚಿಕಿತ್ಸೆ ಕೊಡಲಾಗಿದೆ. ಕ್ರಮೇಣ ಗಾಯ ಮಾಯುತ್ತಾ ಬರುತ್ತಿದೆ ಎಂದರು.
ಹಾಗೆಯೇ ಸಾಗರ್ ಆನೆಗೂ ಕೂಡ ಈ ಹಿಂದೆ ಹೊಟ್ಟೆಯಲ್ಲಿ ಸಣ್ಣದೊಂದು ಗಾಯವಾಗಿತ್ತು. ಆ ಕಾರಣಕ್ಕೆ ಅಂದೇ ಚಿಕಿತ್ಸೆ ಕೊಡಲಾಗಿತ್ತು. ಆದರಿಂದಲೂ ರಿಯಾಕ್ಷನ್ ಈಗ ಗಾಯವಾಗಿ ಪಸ್(ಕೀವು) ಬರುತ್ತಾ ಇದೆ. ಅದನ್ನೆಲ್ಲಾ ಸ್ವಚ್ಛಗೊಳಿಸಿ ಈಗ ಚಿಕಿತ್ಸೆ ನೀಡಲಾಗಿದೆ. ಉಳಿದ ಇನ್ನೇರೆಡು ಆನೆಗಳಿಗೆ ಕಾಡಾನೆಗಳಿಂದ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಮತ್ತು ಈ ಸಂಬಂಧ ಯಾರನ್ನೂ ಅಮಾನತ್ತು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
