google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಶ್ರೀ ಭಗವದ್ಗೀತಾ ಅಭಿಯಾನಕ್ಕೆ ಸ್ಪಷ್ಟ ಗೊತ್ತು-ಗುರಿ ಇದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ತಿಳಿಸಿದರು.

ಅವರು ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮತ್ತು ಸ್ವರ್ಣರಶ್ಮೀ ಟ್ರಸ್ಟ್ ಸಂಯುಕ್ತವಾಗಿ ರಾಜದ್ಯಂತ ಆಯೋಜಿಸಿರುವ ಶ್ರೀ ಭಗವದ್ಗೀತಾ ಅಭಿಯಾನ-2025ರ ಪೂರ್ವಸಿದ್ಧತಾ ಸಭೆಯಲ್ಲಿ ಶ್ರೀ ಸ್ವರ್ಣವಲ್ಲೀ ಮಠದ ಭಕ್ತ ಗಣದಲ್ಲಿ ಒಂದಾದ ಶ್ರೀ ರಾಮ ಕ್ಷತ್ರಿಯ ಸಮುದಾಯದ ಪ್ರಮುಖರನ್ನುದ್ಧೇಶಿಸಿ ಮಾತನಾಡುತ್ತಿದ್ದರು.

ಈ ಬಾರಿ ಭಗವದ್ಗೀತೆಯ 11ನೇ ಅಧ್ಯಾಯವನ್ನು ತೆಗೆದುಕೊಳ್ಳಲಾಗಿದೆ. ಶ್ಲೋಕಗಳನ್ನು ಹೇಗೆ ಬೇಕೋ ಹಾಗೆ ಹೇಳುವುದಲ್ಲ. ಅದಕ್ಕೊಂದು ಪದ್ಧತಿ ಇದೆ. ಹಾಗೆಯೇ ಹೇಳಬೇಕು. ರಾಜದ್ಯಂತ ಈ ಅಧ್ಯಾಯದ ಶ್ಲೋಕಗಳನ್ನು ಒಂದೇ ದಾಟಿಯಲ್ಲಿ ಪಠಣ ಮಾಡಲಾಗುತ್ತದೆ. ಶಾಲಾ ಕಾಲೇಜು ಮಕ್ಕಳಿಗೆ, ಸಾರ್ವಜನಿಕರಿಗೆ ಶ್ಲೋಕ ಹೇಳಿಕೊಡಲು ನೂರಾರು ಸಂಖ್ಯೆಯಲ್ಕಿ ಪ್ರಶಿಕ್ಷಕರು ಸಿದ್ಧರಾಗಿದ್ದಾರೆ ಎಂದರು.

ಶಾಲಾ ಕಾಲೇಜುಗಳಲ್ಲಿ, ದೇವಸ್ಥಾನಗಳಲ್ಲಿ, ಊರಿನ ಒಂದು ಮನೆಯಲ್ಲಿ ಐವತ್ತು ಜನ ಸೇರಿದರೆ ಅಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಹೇಳಿಕೊಡಲಾಗುವುದು. ಒಟ್ಟಿನಲ್ಲಿ ಭಗವ್ಗೀತೆ ಪಠಿಸಿ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವುದೇ ಈ ಅಭಿಯಾನದ ಗುರಿ ಎಂದರು.

ಅಭಿಯಾನದ ಕಾರ್ಯಾಧ್ಯಕ್ಷ ಅಶೋಕ ಜಿ. ಭಟ್ಟರು, ಸಮಿತಿ ಸದಸ್ಯ ಡಾ. ಬಾಲಕೃಷ್ಣ ಹೆಗಡೆ, ರಾಮಕ್ಷತ್ರಿಯ ಸಮಾಜದ ಪ್ರಮುಖರಾದ ಶಶಿಧರ ನಾಯ್ಕ, ಶ್ರೀನಿವಾಸ ಜಿ. ಹೊಸಮನೆ, ರವೀಂದ್ರ ಗಂಗೊಳ್ಳಿ ಮೊದಲಾದವರಿದ್ದರು.

Leave a Reply

Your email address will not be published. Required fields are marked *