ಶಿವಮೊಗ್ಗ : ಯುವಕರು ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸಂಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸೇವೆ ಸಹಾಯ ಮಾಡಬೇಕು ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.
ಶ್ರೀ ಲಕ್ಷ್ಮಿ ಸೇವಾ ಟ್ರಸ್ಟ್ , ರಾಘಣ್ಣ ಅಭಿಮಾನಿಗಳ ಸಂಘದ ಮುಖಂಡರಾದ ಹರೀಶ್ ನಾಯ್ಕ್ ನೇತೃತ್ವದಲ್ಲಿ ಊರಗಡೂರು ಪುಟ್ಟಪ್ಪ ಕ್ಯಾಂಪ್‍ನಲ್ಲಿ 20 ಶೌಚಾಲಯ. ಹೊಸಳ್ಳಿ ತಾಂಡದಲ್ಲಿ ಒಂದು ಮನೆ, ಸೂಳೆಬೈಲುನಲ್ಲಿ ನಿರ್ಮಿಸಿದ ಒಂದು ಮನೆ ಮತ್ತು ಶೌಚಾಲಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು ಎಷ್ಟು ವರ್ಷಗಳಾದರು, ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಶೋಚನೀಯವಾಗಿದೆ. ಇದನ್ನು ಮನಗಂಡು ಹರೀಶ್‍ನಾಯ್ಕ ನೇತೃತ್ವದಲ್ಲಿ ಶೌಚಾಲಯ ಮತ್ತು ಮನೆಗಳನ್ನು ನಿರ್ಮಿಸಿ ಕೊಟ್ಟಿರುವುದು ಮಾದರಿ ಕಾರ್ಯವಾಗಿದೆ. ಯುವಕರು ಇಂತಹ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸೇವೆ ಸಹಾಯ ಮಾಡುವ ಮೂಲಕ ನೆರವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಹಾಗೂ ಮುಖಂಡ ಮೋಹನ್ ರೆಡ್ಡಿ, ಹರೀಶ್‍ನಾಯ್ಕ ಸೇರಿದಂತೆ ಮೊದಲಾದವರು ಇದ್ದರು.