ಶಿವಮೊಗ್ಗ :- ತಾಲ್ಲೂಕಿನ ಆಯನೂರು ಹೋಬಳಿ ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲುಮೆ ಜೆಡ್ಡು ಗ್ರಾಮದ ಕೆಲ ರೈತರುಗಳ ಗದ್ದೆ ಮೂಲಕ ಬುಧವಾರ ಬೆಳಗಿನಜಾವ ನಡೆದು ಹೋಗಿರುವುದರಿಂದ ಭತ್ತದ ಗದ್ದೆ ಮತ್ತು ಕೆಲ ತೋಟಗಳು ಹಾಳಾಗಿವೆ.
ಮೂರು ಆನೆಗಳು ಈ ಭಾಗದಲ್ಲಿ ಸಾಗಿ ಹೋಗಿವೆ ಎಂದು ಸ್ಥಳೀಯ ರೈತರು ತಿಳಿಸಿದ್ದಾರೆ. ಯರೆಬೀಸು, ಕೆಸುವಿನ ಹೊಂಡ, ಅಡ್ಡೇರಿ ಭಾಗದಲ್ಲಿ ಸಂಚರಿಸುತ್ತಿದ್ದು, ಗದ್ದೆ, ತೋಟಗಳಲ್ಲಿ ಓಡಾಡಿವೆ. ಈ ಭಾಗದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದು, ಸಾಗುವಳಿ ಮಾಡಿದ ಭತ್ತದ ಗದ್ದೆಗಳು ಹಾಳಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಶೆಟ್ಟಿಹಳ್ಳಿ ಮೂಲಕ ಪುರದಾಳು ಭಾಗದಲ್ಲೂ ಆನೆಗಳು ಓಡಾಡುತ್ತಿದ್ದು, ರೈತರಲ್ಲಿ ಆತಂಕ ಮೂಡಿದೆ.