
ಶಿವಮೊಗ್ಗ :- ಯುವ ಸಮೂಹ ಭ್ರಾತೃತ್ವದಿಂದ ಸಮಾಜವನ್ನು ಮುನ್ನಡೆಸಬೇಕೆ ವಿನಃ ಐಕ್ಯತೆಯನ್ನು ಮುರಿದು ಮುನ್ನಡೆಸುವುದಲ್ಲ ಎಂದು ನಿವೃತ್ತ ನ್ಯಾ. ನಾಗಮೋಹನ್ ದಾಸ್ ಕಿವಿಮಾತು ಹೇಳಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರದ ವತಿಯಿಂದ ಇಂದು ಚಂದನ ಸಭಾಂಗಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಶಾಂತಿಯ ಸಂದೇಶ, ಸೌಹಾರ್ದ ಸಪ್ತಾಹ ಮತ್ತು ಶಾಂತಿಯ ನಡಿಗೆ ಸೌಹಾರ್ದತೆ ಕಡೆಗೆ ಜಥಾ ಸಮಾ ರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಹಿಂಸೆ ಜಗತ್ತನ್ನು ಆವರಿಸಿದೆ. ಜೊತೆಗೆ ಭಯೋತ್ಪಾದನೆ, ಕೋಮುವಾದ, ಅನಾಚಾರಗಳಿಂದ ವ್ಯಾಪಕ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಹಿಂಸೆಯಿಂದ ಹಿಂಸೆ ಹುಟ್ಟುತ್ತಿದೆ. ಸಮಾಜಕ್ಕೆ ಮಲ್ಯವು ಹೃದಯವಿದ್ದ ಹಾಗೆ. ಮಲ್ಯವಿಲ್ಲದಿದ್ದರೆ ಸಮಾಜಕ್ಕೆ ಹೃದಯವೇ ಇಲ್ಲದಂತಾಗುತ್ತದೆ. ಮಲ್ಯಾಧಾರಿತ ಜೀವನ ನೆಮ್ಮದಿಯ ಜೀವನ ನೀಡುತ್ತದೆ ಎಂದರು.
ದೇಶದ ಜನರನ್ನು ಹಸಿವು, ಬಡತನದಿಂದ ವಿಮೋಚನೆ ಮಾಡ ಬೇಕು ಎಂಬುದು ಗಾಂಧೀಜಿಯವರ ಆಸೆಯಾಗಿತ್ತು. ಇಂದಿಗೂ ನಮ್ಮ ನಡುವೆ ಅನಕ್ಷರಸ್ಥರು, ಹಸಿವು, ಬಡv ನದಿಂದ ಬಳಲುತ್ತಿದ್ದಾರೆ ಎಂಬುದು ಬೇಸರದ ಸಂಗತಿ ಎಂದರು.
ಗಾಂಧೀಜಿಯವರ ಕನಸನ್ನು ಪೂರ್ಣಗೊಳಿಸುವ ಕಾರ್ಯ ಯುವ ಸಮೂಹ ಮಾಡಬೇಕಿದೆ. ಹಸಿವು, ಬಡತನ ಮುಕ್ತ ಸಮಾಜ ನಿರ್ಮಾ ಣಕ್ಕೆ ಕಂಕಣಬದ್ದರಾಗಿ. ಗಾಂಧೀಜಿಯವರು ರೈತರು, ಮಹಿಳೆ ಯರು, ಎಲ್ಲಾ ಭಾಷೆ, ಜತಿಯ ಜನರನ್ನು, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಂಘಟಿಸುತ್ತಿದ್ದರು. ಅದರೇ ಇಂದು ಐಕ್ಯತೆಯನ್ನು ಹೊಡೆದು ಬಿಸಾಕಿದ್ದೇವೆ. ವಿಷವನ್ನು ಬಿತ್ತುವ ಕಾರ್ಯ ನಮ್ಮ ನಡುವೆ ಆಗುತ್ತಿದೆ. ಆಷಾಢಭೂತಿಗಳ ಸಂಖ್ಯೆ ಸಮಾಜದಲ್ಲಿ ಜಸ್ತಿಯಾಗುತ್ತಿದೆ. ಅಂತಹ ಅಶಾಷಡಭೂತಿತನ ಯುವ ಸಮೂಹಕ್ಕೆ ಪ್ರೇರಣೆಯಾಗದಿರಲಿ. ಯಾರೆ ಒಪ್ಪಿಕೊಳ್ಳಲಿ ಬಿಡಲಿ, ಗಾಂಧೀಜಿ ಎಂದೆಂದಿಗೂ ಪ್ರಸ್ತುತ. ಮಲ್ಯಾ ಧಾರಿತ ಜೀವನ ಮತ್ತು ಸಮಾಜ ಕಟ್ಟಲು ಗಾಂಧೀಜಿ ಎಂದೆಂದಿಗೂ ಪ್ರೇರಣೀಯ ಎಂದು ಹೇಳಿದರು.
ಬಸವ ಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಗಾಂಧೀಜಿ ಎಂದಾಗ ಒಂದು ರೀತಿಯ ಅಸಮಾಧಾನ, ಅಸಹಿಷ್ಣತೆ ಯನ್ನು ಯುವ ಸಮೂಹದಲ್ಲಿ ಕಾಣುತ್ತಿದ್ದೇವೆ. ಅದರೇ ಗಾಂಧೀಜಿಯ ಉದಾತ್ತ ಸ್ವಭಾವವನ್ನು ಅರ್ಥ ಮಾಡಿಕೊಳ್ಳದೆ ಇಂತಹ ಅಸಹಿಷ್ಣತೆ ಸರಿಯಲ್ಲ. ಗಾಂಧೀಜಿಯವರು ಪ್ರಶ್ನೆಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಎದುರಿಸಿದವರು. ಗಾಂಧೀಜಿಯನ್ನು ಪ್ರಶ್ನೆ ಮಾಡುವಾಗ ಅಸಹಿಷ್ಣತೆ ಇರಬಾರದು. ಗಾಂಧೀಜಿಯವರನ್ನು ಸರಿಯಾದ ರೀತಿಯಲ್ಲಿ ಅರ್ಥೈಸುವ ಕೆಲಸ ಯುವ ಸಮೂಹದಿಂದ ಆಗಬೇಕಿದೆ ಎಂದರು.
ಪ್ರಾಂಶುಪಾಲೆ ಡಾ. ಎ.ಅನಲ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಮಲಾನಾ ಶಾಹುಲ್ ಹಮೀದ್, ಎಸ್‌ಎಂಎಸ್‌ಎಸ್ ನಿರ್ದೇಶಕ ಫಾದರ್ ಪಿಯೂಸ್ ಡಿಸೋಜ, ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್, ನ್ಯಾಯವಾದಿ ಕೆ.ಪಿ. ಶ್ರೀಪಾಲ್, ಐಕ್ಯೂಎಸಿ ಸಂಯೋಜಕ ಡಾ.ಎಸ್.ಕಾಂತರಾಜ್ ಇದ್ದರು.