google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಮಹಾನಗರ ಪಾಲಿಕೆ ವತಿಯಿಂದ. ನಡೆಯುತ್ತಿರುವ ಶಿವಮೊಗ್ಗ ದಸರಾದ ಭಾಗವಾಗಿ ಮೆಸ್ಕಾಂ ನೌಕರರಿಗೆ ಮತ್ತು ಸಾರ್ವಜನಿಕರಿಗೆ ನಗರದ ಶಿವಪ್ಪ ನಾಯಕ ವೃತ್ತದ ಬಳಿ ಇಂದು ಆಯೋಜಿಸಿದ್ದ ಆಹಾರ ದಸರಾದಲ್ಲಿ ಬಾಳೆ ಹಣ್ಣು ಹಾಗೂ ಇಡ್ಲಿ ತಿನ್ನುವ ಸ್ಪರ್ಧೆ ವೀಕ್ಷಕರ ಗಮನ ಸೆಳೆಯಿತು.

ಮೆಸ್ಕಾಂ ಮಹಿಳಾ ಸಿಬ್ಬಂದಿಗೆ ಆಯೋಜಿಸಿದ್ದ ಬಾಳೆ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಮೆಸ್ಕಾಂ ಲೆಕ್ಕಾಧಿಕಾರಿ ಜಾನಕಿ ಅವರು 2 ನಿಮಿಷದಲ್ಲಿ 8 ಬಾಳೆ ಹಣ್ಣು ತಿಂದು ಮೊದಲ ಸ್ಥಾನ ಪಡೆದರು. ವಿಶಾಲಾಕ್ಷಿ ಪಿ ಅವರು 7 ವರೆ ಬಾಳೆ ಹಣ್ಣು ತಿಂದು ದ್ವೀತಿಯ ಸ್ಥಾನಪಡೆದರೆ, ಶಿವಮ್ಮ 7 ಬಾಳೆ ಹಣ್ಣು ತಿಂದು ತೃತೀಯ ಬಹುಮಾನ ಗಿಟ್ಟಿಸಿಕೊಂಡರು.

ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಏರ್ಪಡಿಸಿದ್ದ ಬಾಳೆ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಧನಲಕ್ಷ್ಮೀಅವರು ಎರಡು ನಿಮಿಷದಲ್ಲಿ 11 ವರೆ ಬಾಳೆಹಣ್ಣು ತಿಂದು ಪ್ರಥಮ ಬಹುಮಾನ ಪಡೆದರೆ, 10 ವರೆ ಬಾಳೆ ಹಣ್ಣು ತಿಂದ ಬಿ.ಜಿ. ಗೀತಾ ದ್ವೀತಿಯ, ಚಂದ್ರಮ್ಮ ಗುಡ್ರುಕೊಪ್ಪ ಅವರು 9 ವರೆ ಬಾಳೆ ಹಣ್ಣು ತಿಂದು ತೃತೀಯ ಬಹುಮಾನ ಪಡೆದರು. ಈ ಸ್ಪರ್ಧೆಗೆ 15 ಜನ ಮಹಿಳೆಯರು ಪಾಲ್ಗೊಂಡಿದ್ದರು.

ಮೆಸ್ಕಾಂ ಪುರುಷ ಸಿಬ್ಬಂದಿಗೆ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ರಾಕೇಶ್ ಗೌಡ ಎರಡು ನಿಮಿಷದಲ್ಲಿ 10 ಇಡ್ಲಿ ತಿಂದು ಪ್ರಥಮ ಬಹುಮಾನ ಪಡೆದರು.ಸಂದೀಪ 5ವರೆ ತಿಡ್ಲಿ ತಿಂದು ದ್ವಿತೀಯ, ಸುಮಿತ್ ಸಾಗರ್ ಅವರು 4 ಮೂಕ್ಕಾಲು ಇಡ್ಲಿತಿಂದು ತೃತೀಯ ಬಹುಮಾನ ಗಿಟ್ಟಿಸಿಕೊಂಡರು.

ಸಾರ್ವಜನಿಕರಿಗೆ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಮದನ್ 10 ಮುಕ್ಕಾಲು ಇಡ್ಲಿ ತಿಂದು ಪ್ರಥಮ ಬಹುಮಾನ ಪಡೆದರೆ, ಅಟೋ ಚಾಲಕ ಪ್ರವೀಣ್ 10 ವರೆ ಇಡ್ಲಿ ತಿಂದು ದ್ವಿತೀಯ ಬಹುಮಾನ ಹಾಗೂ 9 ಇಡ್ಲಿ ತಿಂದ ಮಣಿಕಂಠ ತೃತೀಯ ಬಹುಮಾನ ಗಿಟ್ಟಿಸಿಕೊಂಡರು.ಈಸ್ಪರ್ಧೆಗೆ 50 ಜನರು ಭಾಗವಹಿಸಿದ್ದರು.

ಇಡ್ಲಿ ಹಾಗೂ ಬಾಳೆ ಹಣ್ಣುತಿನ್ನುವ ಸ್ಪರ್ಧೆ ನೋಡುವುದಕ್ಕೆ ಸಾಕಷ್ಟು ಜನರು ಪಾಲ್ಗೊಂಡು ಆಹಾರ ದಸರಾ ಕಳೆ ಗಟ್ಟುವಂತೆ ಮಾಡಿದರು. ಇದಕ್ಕೂ ಮುನ್ನ ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟನೆ ಮಾಡಿ ಮಾತನಾಡಿ ದರು. ಆಹಾರ ದಸರಾದಲ್ಲಿ ವಿಶೇಷವಾಗಿ ಮಳೆ,ಗಾಳಿಚಳಿ ಲೆಕ್ಕಿಸದೆ ಕೆಲಸ ಮಾಡುವ ಮೆಸ್ಕಾಂನೌಕರರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ರುಚಿಯಾದ ಇಡ್ಲಿಸಾಂಬಾರ್ ತಿನ್ನುವ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶವಿದೆ. ಅಲ್ಲಮ ಪ್ರಭು ಮೈದಾನದಲ್ಲೂ ಕೂಡ ಆಹಾರ ಮೇಳ ನಡೆಯುತ್ತಿದ್ದು, ಸಾರ್ವಜನಿಕ ರು ಅದರಲ್ಲೂ ಭಾಗವಹಿಸಬೇಕೆಂದರು.

ಮೆಸ್ಕಾಂ ಕಾರ್ಯನಿರ್ವಾಹಕ ಅಧೀಕ್ಷಕ ವಿರೇಂದ್ರ ಮಾತನಾಡಿ, ಮೆಸ್ಕಾಂ ನೌಕರರು ಸೈನಿಕರು ಇದ್ದ ಹಾಗೆ. ಯಾವಾಗಲೂ ಅವರು ತಮ್ಮ ಸ್ವಂತ ಕಾರ್ಯಗಳನ್ನು ತ್ಯಾಗ ಮಾಡಿ ಕರ್ತವ್ಯಕ್ಕೆ ಹಾಜರಾಗುವ ಅನಿವಾರ್ಯತೆ ಇರುತ್ತದೆ. ಅಂತಹ ನೌಕರರಿಗೆ ಸ್ವಲ್ಪ ಸಮಯದಲ್ಲಾದರೂ ಖುಷಿ ಸಿಗಲಿ ಎನ್ನುವ ಉದ್ದೇಶಕ್ಕೆ ಈಅವಕಾಶ ಕಲ್ಪಿಸಲಾಗಿದೆ. ಅವರು ಕೂಡಹೆಚ್ವಿನ ಸಂಖ್ಯೆಯಲ್ಲು ಭಾಗವಹಿಸಿದ್ದಾರೆ.ದಸರಾ ಎಲ್ಲರಿಗೂ ಶುಭ ತರಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಡಿಎಚ್‌ಒ ಡಾ.ನಟರಾಜ್, ತೀರ್ಪುಗಾರರಾಗಿ ಡಾ. ಉಮಾ, ಡಾ. ಉಮಾ ಇದ್ದರು. ಆಹಾರ ದಸರಾ ಕಾರ್ಯದರ್ಶಿ ಕೃಷ್ಣಮೂರ್ತಿಇದ್ದರು.

Leave a Reply

Your email address will not be published. Required fields are marked *