google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಹಿಂದೂ ಸಂಘಟನಾ ಮಹಾಮಂಡಲಿ ವತಿಯಿಂದ ೮೧ ನೇ ವರ್ಷದ ಗಣೇಶೋತ್ಸ ವ ಆಚರಿಸಲಾಗುತ್ತಿದ್ದು ಸೆ.೫ರ ಇಂದು ರಾತ್ರಿ ೮ ಗಂಟೆಗೆ ಕೋಟೆ ಭೀಮೇಶ್ವರ ದೇಗುಲದ ಆವರಣದಲ್ಲಿ ಗಣಪತಿ ಸನ್ನಿಧಿಯಲ್ಲಿ ವೀರ ಶಿವಮೂರ್ತಿ ಪುಣ್ಯ ಸ್ಮರಣೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮವಿರುತ್ತದೆ. ಸೆ. ೬ರ ನಾಳೆ ಶನಿವಾರ ಬೆಳಿಗ್ಗೆ ವರಸಿದ್ದಿ ವಿನಾಯಕಸ್ವಾಮಿಯ ರಾಜಬೀದಿ ಉತ್ಸವ ಹಾಗೂ ವಿಸರ್ಜನೆ ಕಾರ್ಯಕ್ರಮ ವಿರುತ್ತದೆ.

ವಿನಾಯಕಸ್ವಾಮಿಯ ರಾಜಬೀದಿ ಉತ್ಸವದಲ್ಲಿ ಅನೇಕ ಸಂಘ ಸಂಸ್ಥೆಗಳ ವತಿಯಿಂದ ಮಾಲಾರ್ಪಣೆ ಮಾಡುವುದು ಅನೇಕ ವರ್ಷಗಳಿಂದಲೂ ನಡೆದು ಬಂದಿದ್ದು, ಪ್ರತೀ ವರ್ಷ ಇದರ ಸಂಖ್ಯೆ ಹೆಚ್ಚಾಗುತ್ತಿದೆ.ಇದು ತುಂಬಾ ಹರ್ಷದಾಯಕ ಬೆಳವಣಿಗೆಯಾಗಿರುತ್ತದೆ.

ವಿನಾಯಕ ಸ್ವಾಮಿಯ ರಾಜಬೀದಿ ಉತ್ಸವದಲ್ಲಿ ಮಾಲಾರ್ಪಣೆ ಮಾಡಲು ಎಲ್ಲರಿಗೂ ಅವಕಾಶವಿದ್ದು, ತಮಲ್ಲಿಗೆ ಉತವ ಬಂದಾಗ ತಮ್ಮಲ್ಲಿ ೪ ಜನ ಮಾತ್ರ ಟ್ರಾಕ್ಟರ್ ಮೇಲೆ ಬಂದು ಸ್ವಾಮಿಗೆ ಮಾಲಾರ್ಪಣೆ ಮಾಡಿ ಇಳಿದು ಮುಂದೆ ಕಾಯುತ್ತಿರುವ ನಮ್ಮ ಹಿಂದೂಬಾಂಧವರಿಗೆ ಅವಕಾಶ ಮಾಡಿಕೊಡಬೇಕಾಗಿ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕೋರಿದ್ದಾರೆ.

ವರಸಿದ್ಧಿ ವಿನಾಯಕಸ್ವಾಮಿಯ ವಿಜೃಂಭಣೆ ರಾಜಬೀದಿ ಉತ್ಸವಕ್ಕೆ ತಮ್ಮೆಲ್ಲರ ಸಹಕಾರ ಕೋರುತ್ತಾ, ಸಮಸ್ತ ಹಿಂದೂಬಾಂಧವರೆಲ್ಲರೂ ಶಾಂತಿಯಿಂದ ಈ ಸಲದ ರಾಜಬೀದಿ ಉತ್ಸವದಲ್ಲಿ ಭಾಗವಹಿಸಬೇಕಾಗಿ ಕೋರಿದ್ದಾರೆ.

Leave a Reply

Your email address will not be published. Required fields are marked *