google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಯುವ ಸಮೂಹ ಮಾದಕ ವ್ಯಸನಗಳ ಅಡಿಯಾಳಾಗದೆ ವ್ಯಸನ ಮುಕ್ತ ಸುಸ್ಥಿರ ದೇಶ ನಿರ್ಮಾಣ ಮಾಡಲು ಕಂಕಣ ಬದ್ದರಾಗೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಕರೆ ನೀಡಿದರು.

ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವತಿಯಿಂದ ಐಕ್ಯೂಎಸಿ, ಎನ್‌ಎಸ್‌ಎಸ್ ಹಾಗೂ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ಇಂದು ಚಂದನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಯುವ ದಿನ ಅಂಗವಾಗಿ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ ವರ್ಷ ಜಿಲ್ಲೆಯಲ್ಲಿ ೩೦೦ ಕ್ಕೂ ಹೆಚ್ಚು ಗಾಂಜ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ನಗರ ಪ್ರದೇಶಗಳಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವೈಯೋಸಹಜ ವ್ಯಾಮೋಹಗಳಿಂದ ಶುರುವಾಗುವ ಕೆಲವು ದುಶ್ಚಟಗಳು, ಹಂತವಾಗಿ ನಮ್ಮ ದೇಹವನ್ನು ಆಕ್ರಮಿಸಿಕೊಳ್ಳುತ್ತದೆ. ಇದರಿಂದ ಸಮಾಜದಲ್ಲಿ ಗೌರವ ಇಲ್ಲದವರಾಗಿ, ಜೊತೆಯಲ್ಲಿ ಯಾವುದೇ ಕೌಶಲ್ಯಾಧಾರಿತ ಚಿಂತನೆಗಳನ್ನು ಮಾಡಲಾಗದ ಅಧೋಗತಿಗೆ ಬಂದು ತಲುಪಿಬಿಡುತ್ತಾರೆ. ಅಂತಹ ವಿಚಾರಗಳಿಂದ ದೂರವಿರಿ.

ಪೊಲೀಸ್ ಇಲಾಖೆ ಒಂದೇ ಎಲ್ಲವನ್ನು ಸರಿ ಪಡಿಸುತ್ತದೆ ಎಂಬ ಯೋಚನೆಗಿಂತ, ಸಮಾಜದ ಪ್ರಜೆ ಗಳಾಗಿ ಸುಸ್ಥಿರ ವಾತಾವರಣ ನಿರ್ಮಾಣ ಮಾಡಲು ಏನೆಲ್ಲಾ ಕೊಡುಗೆ ನೀಡಬಹುದು ಎಂಬುದನ್ನು ಸೂಕ್ಷ್ಮವಾಗಿ ಯೋಜಿಸಿ. ಅಮೂಲ್ಯವಾದ ಬದುಕನ್ನು ಸಮಾಜ ಮುಖಿ ಕಾರ್ಯಗಳಿಗೆ ವಿನಿಯೋ ಗಿಸಿ. ಹೆಲ್ಮೆಟ್, ಸೀಟ್ ಬೆಲ್ಟ್ ನಂತಹ ಸೂಕ್ಷ್ಮ ವಿಚಾರಗಳ ಬಗೆಗಿನ ಅಸಡ್ಡೆ ದೊಡ್ಡ ಅನಾಹುತಗಳಿಗೆ ಕಾರಣವಾ ಗುತ್ತಿದ್ದು, ಸುರಕ್ಷಿತವಾಗಿ ವಾಹನ ಗಳನ್ನು ಚಲಾಯಿಸಿ ಎಂದು ಸಲಹೆ ನೀಡಿದರು.

ಅತಿಥಿಗಳಾದ ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ನಮ್ಮ ವಾತಾವರಣವನ್ನು ವಿಪರೀತವಾಗಿ ಕಾಡುತ್ತಿರುವ ಸಮಸ್ಯೆ ಮಾದಕ ದ್ರವ್ಯ ಸೇವನೆ. ಪ್ರಕೃತಿ ಎಂಬುದು ತುಂಬಾ ಸೂಕ್ಷ್ಮವಾದ ವಿಚಾರ. ಅದರ ಸಮತೋಲನ ಏರಿಳಿತವಾದಾಗ, ತಾನೇ ಸ್ವಯಂ ನಿಯಂತ್ರಿಸಿಕೊಳ್ಳುವ ಕಾರ್ಯವಿಧಾನಗಳನ್ನು ಹೊಂದಿದೆ. ಇಂತಹ ವಿಧಾನಗಳು ಪ್ರವಾಹ, ಬರಗಾಲ ವಿಕೋಪಗಳಂತಹ ಅನಾಹುತಗಳಿಗೆ ಕಾರಣವಾಗುತ್ತದೆ ಎಂದರು.

ಎನ್‌ಇಎಸ್ ಕುಲಸಚಿವ ಪ್ರೊ. ಎನ್.ಕೆ. ಹರಿಯಪ್ಪ ಮಾತನಾಡಿದರು. ಪ್ರಾಂಶುಪಾಲೆ ಪ್ರೊ. ಪಿ.ಆರ್. ಮಮತಾ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರುವಂತೆ, ಗೃಹ ರಕ್ಷಕದಳದ ನಿಕಟಪೂರ್ವ ಜಿಲ್ಲಾ ಸಮಾದೇಷ್ಟರಾದ ಚಂದನ್ ಪಟೇಲ್, ಎನ್‌ಎಸ್‌ಎಸ್ ಘಟಕ ಅಧಿಕಾರಿ ಮಂಜುನಾಥ್.ಎನ್, ಪ್ರವೀಣ್.ಬಿ.ಎನ್, ಗಾಯತ್ರಿ.ಟಿ, ಯುವ ರೆಡ್ ಕ್ರಾಸ್ ವಿಭಾಗ ಸಂಚಾಲಕಿ ಸೌಪರ್ಣಿಕ ಉಮೇಶ್, ಶೃತಿ ಕೆ., ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಫ್ರಾನ್ಸಿಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *