google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಇಂದು ಮಹಾನಗರ ಪಾಲಿಕೆಯ ಪೌರಾಯುಕ್ತ ಕೆ, ಮಾಯಣ್ಣಗೌಡ ಅವರನ್ನು ಭೇಟಿ ಮಾಡಿ ಬಡಾವಣೆಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ತುರ್ತಾಗಿ ಗಮನಹರಿಸುವಂತೆ ಮನವಿ ಸಲ್ಲಿಸಿದರು.

ಎಸ್. ಬಂಗಾರಪ್ಪ ಇಂಡೋರ್ ಶಟಲ್ ಕೋರ್ಟ್ ನ ಕಾಮಗಾರಿ ತುರ್ತಾಗಿ ಕೈಗೊಳ್ಳಲು ಕ್ರಮ ಕೈಗೊಳ್ಳುವುದು ಬಡಾವಣೆಗೆ ಹೋಗುವ ಪ್ರಮುಖ ರಸ್ತೆ ಆಯನೂರು ಗೇಟ್‌ನಿಂದ ಶಾರದಾದೇವಿ ಅಂಧ ವಿಕಾಸ ಶಾಲೆಯವರೆಗೆ ಗುಂಡಿ ಬಿದ್ದಿದ್ದು ತಕ್ಷಣ ವೆಟ್ ಮಿಕ್ಸಿ ಇಂದ ಗುಂಡಿ ಮುಚ್ಚುವಂತೆ, ಹೈ ವೋಲ್ಟೇಜ್ ವಿದ್ಯುತ್ ಲೈನ್‌ನ ಕೆಳಗೆ ಗಿಡಗಂಟೆಗಳು ಬೆಳೆದಿದ್ದು ಇದನ್ನು ತಕ್ಷಣ ತೆರವುಗೊಳಿಸಬೇಕೆಂದು ಚಂದನ ಆರೋಗ್ಯ ಪಾರ್ಕ್‌ನ ತಡೆಗೋಡೆ ಕಾಮಗಾರಿ ತ್ವರಿತವಾಗಿ ಮುಗಿಸುವುದು, ಬೀದಿ ನಾಯಿಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿದ್ದು ತಕ್ಷಣ ಸಂತಾನ ಹರಣ ಚಿಕಿತ್ಸೆ ಕೈಗೊಳ್ಳುವುದು ಹಾಗೂ ಹಂದಿಗಳ ಹೆಚ್ಚಳಕ್ಕೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಗೋಪಾಲಗೌಡ ಬಡಾವಣೆ ವಾರ್ಡ್ ಹದಿನೇಳರ ವಿಸ್ತರಣೆ ದೊಡ್ಡದಿದ್ದು ಇದಕ್ಕೆ ಹೊಂದಿಕೊಂಡಂತೆ ಸ್ವಾಮಿ ವಿವೇಕಾನಂದ ಬಡಾವಣೆಯ ಕಸ ವಿಲೇವಾರಿಯ ಜವಾಬ್ದಾರಿಯು ಇರುವುದರಿಂದ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇರುವುದನ್ನು ಪರಿಗಣಿಸಿ ಹೆಚ್ಚುವರಿ ಕಾರ್ಮಿಕರನ್ನು ನಿಯೋಜಿಸುವುದು, ವಾರ್ಡಿನಲ್ಲಿ ಅತಿ ಹೆಚ್ಚು ಪಾರ್ಕ್‌ಗಳಿದ್ದು ನಿರ್ವಹಣೆ ಇಲ್ಲವಾಗಿದೆ ಪಾರ್ಕ್ ಗಳ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸುವುದು, ವಾರ್ಡಿನ ಒಳಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳುವುದು ರಾಜ ಕಾಲುವೆಯ ಕಾಮಗಾರಿ ಅವೈಜನಿಕವಾಗಿದ್ದು ಮಳೆಗಾಲದಲ್ಲಿ ಬಡಾವಣೆಗೆ ನೀರು ನುಗ್ಗುತ್ತಿದ್ದು ವೈಜನಿಕವಾಗಿ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಮನವಿ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಜಿ.ಡಿ. ಮಂಜುನಾಥ್ ಟಿ.ಡಿ ಗೀತೇಂದ್ರಗೌಡ, ಜಿ.ಎಸ್. ಶಿವಕುಮಾರ್, ಚಂದನ ಪಾರ್ಕ್‌ನ ಪ್ರಧಾನ ಕಾರ್ಯದರ್ಶಿ ಗುರುರಾಜ್, ಅಶೋಕ್, ರವಿ, ಬೋರೇಗೌಡ, ನಾಗೇಶ್ ರಂಗೆಗೌಡ್ರು, ಆನಂದ್ ಮತ್ತು 17ನೇ ವಾರ್ಡಿನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ರಾಜಶೇಖರ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *