google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಚುಂಚಾದ್ರಿ ಕಪ್ ಶಿವಮೊಗ್ಗ ಜಿಲ್ಲೆಯಲ್ಲಿಯೇ ಒಂದು ವಿಶೇಷವಾದ ಕ್ರೀಡಾಕೂಟ, ಕ್ರೀಡೆಯ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರವನ್ನು ಕೊಡುವಂತಹ ಕೆಲಸವನ್ನು ಶ್ರೀ ಆದಿಚುಂಚನಗಿರಿ ಮಠ ಮಾಡುತ್ತಾ ಇದೆ. ಎಲ್ಲರೂ ಕೂಡ ಸ್ಕಾರವಂತರಾಗಬೇಕು, ಭಾರತೀಯ ಸಂಸ್ಕೃತಿ ವಿಶೇಷವಾಗಿ ತಮಗೆಲ್ಲರಿಗೂ ದೊರಕುವಂತಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪಅವರು ಹೇಳಿದರು.

ಅವರು ನಿನ್ನೆ ಸಂಜೆ ನೆಹರು ಕ್ರೀಡಾಂಗಣದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೨೩ನೇ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಚುಂಚಾದ್ರಿ ಕಪ್ ಪಂದ್ಯಾವಳಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ರೂಪಿಸಲು ಕ್ರೀಡೆ ಸಹಕಾರಿ, ಇಂತಹ ಕ್ರೀಡಾಸ್ಪೂರ್ತಿ,ಚುಂಚಾದ್ರಿ ಕಪ್ ನಂತಹ ಕ್ರೀಡಾಕೂಟಗಳಲ್ಲಿ ಕ್ರೀಡಾ ಪ್ರತಿಭಾನ್ವಿತರನ್ನು ಹೊರಹೊಮ್ಮಿಸಲು ಸಾಧ್ಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡುತ್ತಾ, ಕ್ರೀಡೆಯ ಮಹತ್ವವನ್ನು ನಾವು ತಿಳಿದುಕೊಳ್ಳಲಿಲ್ಲ ಅಂದರೆ ಜೀವನದಲ್ಲಿ ಯಾವುದೇ ಒಂದು ಅಂಶವನ್ನು ಕಳೆದುಕೊಂಡಿದ್ದೇವೆ ಎಂದರ್ಥ. ದೇಹದ ಅಂಗಾಂಗಗಳಿಗೆ,ಸ್ನಾಯುಗಳಿಗೆ ಬೇಕಾಗಿರುವಂತಹ ದೈಹಿಕ ಚಟುವಟಿಕೆಗಳನ್ನು ಕ್ರೀಡೆಯ ಮೂಲಕ ಅಳವಡಿಸಿಕೊಂಡಾಗ, ಕ್ರೀಡೆ ನಮಗೆ ನೈತಿಕತೆ, ನಾಯಕತ್ವದಗುಣ ಬೆಳೆಯುತ್ತದೆ. ಈ ಒಂದು ಚಟುವಟಿಕೆಯಿಂದ ಆರೋಗ್ಯವನ್ನು ಸುಸ್ಥಿತಿಗೆ ತಂದುಕೊಳ್ಳಲು ಸಾಧ್ಯ ಎಂದರು.

ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಜಿ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಸಿ. ಅಂಶುಮಂತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ್, ಜಿಲ್ಲಾ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ,ಕೆ.ಎಸ್. ಶಶಿ, ಸಂಸ್ಥೆಯ ನಿರ್ದೇಶಕರುಗಳಾದ ಕೊಳಿಗೆ ವಾಸಪ್ಪಗೌಡ, ರವೀಶ್, ಕುಮಾರಸ್ವಾಮಿ, ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಖಜಂಚಿ ಉದಯ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *