ಶಿವಮೊಗ್ಗ :- ನಗರದ ಗೋಂಧಿ ಚಟ್ನಹಳ್ಳಿ ನಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ನೂತನ ದೇವಸ್ಥಾನ ಪ್ರವೇಶ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಳಸರೋಹಣ ಅಷ್ಟ ಬಂಧನ ಮಹಾ ಕುಂಭ ಅಭಿಷೇಕ ಮಹೋತ್ಸವ ಆ. 13 ಮತ್ತು 14ರಂದು ಜರುಗಲಿದೆ.
ಆ. 13ರಂದು ಬೆಳಗ್ಗೆ ಪೂಜೆ ಆರಂಭಗೊಂಡು 14 ಗುರುವಾರ ಬೆಳಿಗ್ಗೆ 9ರಿಂದ 10.30 ರವರೆಗೆ ನಡೆಯುವ ನೂತನ ದೇವಸ್ಥಾನ ಪ್ರವೇಶ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಅಷ್ಟಬಂಧನ ಮತ್ತು ಮಹಾ ಕುಂಭಾಭಿಷೇಕ ವಿಜೃಂಭಣೆಯಿಂದ ಜರುಗಲಿದೆ. ಅಂದುಮಧ್ಯಾಹ್ನ 12ಗಂಟೆಗೆ ಅನ್ನ ಸಂತರ್ಪಣೆ ಇರುತ್ತದೆ.
ಕುಂಭಾಭಿಷೇಕವನ್ನು ಶ್ರೀ ಬಸವ ಮರಳುಸಿದ್ದ ಸ್ವಾಮಿಯರು ನೆರವೇರಿಸಲಿದ್ದಾರೆ. ಪೂಜಾ ಕಾರ್ಯಕ್ರಮದಲ್ಲಿ ಕೆ ,ಎಸ್, ಈಶ್ವರಪ್ಪ ಬಿ, ವೈ, ರಾಘವೇಂದ್ರ ಶಾರದಾ ಪುರನಾಯ, ಚೆನ್ನಬಸಪ್ಪ, ಡಿ.ಎಸ್, ಅರುಣ್ , ಧನಂಜಯ್ ಸರ್ಜಿ, ಅಶೋಕ್ ನಾಯ್ಕ, ಕೆ,ಇ ಕಾಂತೇಶ್, ನಾಗರತ್ನ, ಎಚ್. ಪ್ರೇಮ ಭಾಗವಹಿಸಲಿದ್ದಾರೆ. ಭಕ್ತರು ಪಾಲ್ಗೊಳ್ಳಲು ಅಧ್ಯಕ್ಷ ಎಂ, ಪ್ರಕಾಶ್ (ಗಿಲ್ಲಿ) ಕೋರಿದ್ದಾರೆ.