
ಶಿಕಾರಿಪುರ :- ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಆ. 9 ರ ಶನಿವಾರ ಇಲ್ಲಿನ ಎಪಿಎಂಸಿ ವರ್ತಕರು ಹಾಗೂ ರೈಸ್ ಮಿಲ್ ಮಾಲಿಕರ ವತಿಯಿಂದ ಆಗಮಿಸುವ ಸರ್ವ ಭಕ್ತಾಧಿಗಳಿಗೆ ಬೃಹತ್ ಅನ್ನ ಸಂತರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವರ್ತಕರ ಸಂಘದ ಪ್ರಮುಖ ಕರಿಬಸಪ್ಪ ಅಂಗಡಿ ತಿಳಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿದವರ ಇಷ್ಠಾರ್ಥಗಳನ್ನು ಪೂರೈಸುವ ಶ್ರೀ ಹುಚ್ಚರಾಯಸ್ವಾಮಿ ಐತಿಹಾಸಿಕವಾಗಿ ಪ್ರಸಿದ್ದವಾಗಿದ್ದು ನಾಡಿನ ಮೂಲೆ ಮೂಲೆಯಿಂದ ಭಕ್ತಾಧಿಗಳು ಸ್ವಾಮಿಯ ದರ್ಶನಕ್ಕೆ ನಿತ್ಯ ಆಗಮಿಸುತ್ತಿದ್ದಾರೆ.ಶ್ರಾವಣ ಮಾಸದಲ್ಲಿ ಭಕ್ತ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಧಾವಿಸುತ್ತಿದ್ದು ಶ್ರಾವಣ ಶನಿವಾರ ಭಕ್ತರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದೆ ಎಂದು ತಿಳಿಸಿದ ಅವರು ಪರಸ್ಥಳದಿಂದ ಪುರುಷರು,ಮಹಿಳೆ,ಮಕ್ಕಳ ಸಹಿತ ವೃದ್ದರು ಶ್ರದ್ದಾ ಭಕ್ತಿಯಿಂದ ಧಾವಿಸುವ ದೇವಸ್ಥಾನದಲ್ಲಿ ಕಳೆದ ಹಲವು ವರ್ಷಗಳಿಂದ ವರ್ತಕರ ಸಂಘ ಹಾಗೂ ರೈಸ್ ಮಿಲ್ ಮಾಲೀಕರು ಧಾವಿಸುವ ಸರ್ವ ಭಕ್ತಾಧಿಗಳಿಗೆ ಶ್ರದ್ದೆಯಿಂದ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವರ್ತಕರ ಸಂಘದ ವತಿಯಿಂದ ಇದೀಗ 11 ನೇ ಬಾರಿ ಶ್ರಾವಣದಲ್ಲಿ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದ್ದು ಪ್ರತಿ ಬಾರಿ ಪುಷ್ಕಳ ಬೋಜನದಿಂದ ಭಕ್ತ ವರ್ಗ ಸಂತುಷ್ಟತೆ ಪಡೆದಿದ್ದಾರೆ ಪ್ರತಿ ಅಧಿಕ ಶ್ರಾವಣದಲ್ಲಿ 25 ಸಾವಿರ ಅಧಿಕ ಭಕ್ತರು ನಾಡಿನ ಮೂಲೆಮೂಲೆಯಿಂದ ಆಗಮಿಸಿ ಸ್ವಾಮಿ ದರ್ಶನದ ಜತೆಗೆ ಅನ್ನಪ್ರಸಾದ ಸ್ವೀಕರಿಸಿದ್ದು ಈ ದಿಸೆಯಲ್ಲಿ ವರ್ತಕರ ರೈಸ್,ಮಿಲ್ ಮಾಲೀಕರ ಶ್ರಮ ಸಾರ್ಥಕವಾಗಿದೆ ಎಂದರು.
ಗೋಷ್ಠಿಯಲ್ಲಿ ವರ್ತಕರ ಸಂಘದ ಲಕ್ಷ್ಮಣನಾಯ್ಕ,ಮಹಾರುದ್ರಪ್ಪ,ನಾಗರಾಜ,ಮಲ್ಲಿಕಾರ್ಜುನ (ಬೆಲ್ಲದ ಮಂಡಿ), ಗಜನನ,ಈರಣ್ಣ,ಚಂದ್ರಪ್ಪ ಮತ್ತಿತರರು ಹಾಜರಿದ್ದರು.
