ಶಿವಮೊಗ್ಗ :- ಜಿಲ್ಲಾ ವಾಣಿಜ್ಯ ಸಂಘದ ಹಲವು ವರ್ಷಗಳ ಕನಸಾದ ಅಡ್ವಾನ್ಸ್‌ಡ್ ಸ್ಕಿಲ್ ಡೆವೆಲಪ್‌ಮೆಂಟ್ ಅಕಾಡೆಮಿಯನ್ನು ಪ್ರಾರಂಭಿಸಿರುವುದಕ್ಕೆ ಸಂಘದ ಅಧ್ಯಕ್ಷರು ಮತ್ತು ಪಧಾಧಿಕಾರಿಗಳಿಗೆ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಕೃತಜ್ಞತೆ ತಿಳಿಸಿದರು.
ಅವರು ಇಂದು ಜಿಲ್ಲಾ ವಾಣಿಜ್ಯದಿಂದ ಅಡ್ವಾನ್ಸ್ ಸ್ಕಿಲ್ ಡೆವೆಲಪ್‌ಮೆಂಟ್ ಅಕಾಡೆಮಿ ಮತ್ತು ವಿಸ್ಟಾ ತಂತ್ರಜನ ಸಂಸ್ಥೆಯ ಸಹಯೋಗದೊಂದಿಗೆ ವೃತ್ತಿ ಕೌಶಲ್ಯ ತರಬೇತಿ ಬಗ್ಗೆ ಮಾರ್ಗದರ್ಶನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಅಡಿಯಲ್ಲಿ ಅಕಾಡೆಮಿ ಪ್ರಾರಂಬಿಸಿದ್ದು ವಿದ್ಯಾರ್ಥಿಗಳ ಶಿಕ್ಷಣ ಮತ್ತು ಉದ್ಯೋಗದ ಮಧ್ಯ ಇರುವ ಅಂತರವನ್ನು ಹೋಗಲಾಡಿಸಲು ಸುಮಾರು ೨೫ ಲಕ್ಷ ಬಂಡವಾಳವನ್ನು ತೊಡಗಿಸಿದ್ದು ಇದು ಶಿವಮೊಗ್ಗ ಜಿಲ್ಲೆಯ ಭವಿಷ್ಯಕ್ಕಾಗಿ ಹಾಗೂ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹೂಡಿದ ಬಂಡವಾಳ ೨೦೫೦ರ ಹೊತ್ತಿಗೆ ಶಿವಮೊಗ್ಗ ಕೈಗಾರಿಕಾ ಕ್ಷೇತ್ರ, ವಾಣಿಜ್ಯ ಕ್ಷೇತ್ರ ಹಾಗೂ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಹೊಂದಿದ ಜಿಲ್ಲೆ, ಉನ್ನತ ಕೌಶಲ್ಯ ಕೇಂದ್ರವಾಗಿ ಶಿವಮೊಗ್ಗ ವಿಷನ್ ೨೦೫೦ರ ಆಶಯದಂತೆ ಹೊರಹೊಮ್ಮುವ ನಂಬಿಕೆ ಇದೆ ಎಂದು ತಿಳಿಸಿದರು.
ಪೂರ್ಣಿಮಾ ಡಿ, ಎಜುರೈಟ್ ಕಾಲೇಜಿನ ಪ್ರಂಶುಪಾಲರಾದ ಶಂಕರ್‌ನಾರಾಯಣ, ರಾಷ್ಟ್ರೀಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್.ಎನ್. ನಾಗಾರಾಜ್ ಮತ್ತು ಮಾನಸ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಜಿನಿ ಪೈ ರವರು ವಿದ್ಯಾರ್ಥಿಗಳಿಗೆ ಇಂದಿನ ವಿದ್ಯಾಭ್ಯಾಸದಲ್ಲಿ ಸ್ಕಿಲ್‌ನ ಅಗತ್ಯತೆಯ ಬಗ್ಗೆ ಸವಿವರವಾಗಿ ಮಾತನಾಡಿ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದು ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಅಗತ್ಯತೆಯನ್ನು ತಿಳಿಸಿದರು.
ವಿಸ್ಟಾ ಕಂಪೆನಿಯ ಕೋ-ಫೌಂಡರ್ ವಿನಯ್ ಕುಮಾರ್ ಎ.ಎಸ್ ಮತ್ತು ಚಿಫ್ ಆಪರೇಟಿಂಗ್ ಆಫೀಸರ್ ಸ್ಕಿಲ್ ಅಕಾಡೆಮಿಯ ಉದ್ದೇಶದೊಂದಿಗೆ ಪ್ರಸ್ತಾವಿಕ ನುಡಿ ನುಡಿದರು, ಸಂಜಯ್ ಕುಮಾರ್ ವಿಶ್ವಕರ್ಮರವರು ತರಬೇತಿ ಕಾರ್ಯಕ್ರಮದ ಮಾರ್ಗದರ್ಶನ ಬಗ್ಗೆ ವಿವರಣೆ ನೀಡಿದರು.
ಸಂಘದ ಉಪಾಧ್ಯಕ್ಷ ಬಿ. ಗೋಪಿನಾಥ್ ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ಡಿ.ಎಂ. ಶಂಕರಪ್ಪ, ಎಸ್.ಎಸ್ ಉದಯಕುಮಾರ್, ಮಧುಸೂದನ ಐತಾಳ್, ಪ್ರದೀಪ್ ವಿ. ಎಲಿ, ತೇಜಶ್ರೀ ಎಸ್.ಹೆಚ್ ಇತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಸಂತ್ ಹೋಬಳಿದಾರ್ ವಂದಿಸಿದರು.