
ಶಿವಮೊಗ್ಗ :- ಬಹುಜನ ಸಮಾಜಪಾರ್ಟಿಯ ಶಿವಮೊಗ್ಗ ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ನೂತನ ಜಿಲ್ಲಾಧ್ಯಕ್ಷ ಗಲ್ಲಿ ಸಂಗಪ್ಪ ಹೇಳಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ರಾಜ್ಯ ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಮಿತಿಯನ್ನು ರಚಿಸಲಾಗಿದೆ. ರಾಜಧ್ಯಕ್ಷ ಎಂ. ಕೃಷ್ಣಮೂರ್ತಿಯವರು ಜಿಲ್ಲಾ ಸಮಿತಿಯನ್ನು ಪುನರ್‌ಚೇತನಗೊಳಿಸಿ ನೇಮಕ ಮಾಡಿದ್ದಾರೆ. ನಾನು ಜಿಲ್ಲಾಧ್ಯಕ್ಷನಾಗಿದ್ದು, ಉಪಾಧ್ಯಕ್ಷರಾಗಿ ಶೇಖರ್‌ನಾಯಕ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಬಿ.ಜಿ., ಖಜಂಚಿಯಾಗಿ ಪುಲ್‌ರಾಜಂ, ಜಿಲ್ಲಾ ಕಾರ್ಯದರ್ಶಿಯಾಗಿ ಡಿ. ರವಿ ಹಾಗೂ ಐದು ಜನ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದರು.

ಬಹುಜನ ಸಮಾಜ ಪಾರ್ಟಿಯು ಕಾನ್ಸಿರಾಮ್‌ಜೀರವರ ಕನಸ್ಸಾಗಿದೆ. ಅದನ್ನು ನನಸು ಮಾಡಲು ಅಕ್ಕ ಮಾಯಾವತಿಯವರು ಶ್ರಮಿಸಿದ್ದಾರೆ. ಭಯೋತ್ಪಾದನೆ ತೊಲಗಲು, ಕೋಮುವಾದ ಕೊನೆಗಾಣಿಸಲು, ಭ್ರಷ್ಟಾಚಾರ ನಿರ್ಮೂಲನೆ ಮಾಡಲು, ಆಡಳಿತದಲ್ಲಿ ಸುಧಾರಣೆ ತರಲು, ಅಂಬೇಡ್ಕರ್‌ರವರ ಕನಸು ನನಸು ಮಾಡಲು ಬಹುಜನ ಸಮಾಜಪಾರ್ಟಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಕರ್ನಾಟಕದಲ್ಲಿ ಬಿ.ಎಸ್.ಪಿ.ಯನ್ನು ಮತ್ತಷ್ಟು ಸಂಘಟಿಸುವ ನಿಟ್ಟಿನಲ್ಲಿ ನಮ್ಮ ನೂತನ ಪದಾಧಿಕಾರಿಗಳ ಸಮಿತಿ ಶ್ರಮಿಸುತ್ತಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡುತ್ತೇವೆ. ಅಷ್ಟೇ ಅಲ್ಲ, ಶಿವಮೊಗ್ಗ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಪ್ರಜಪ್ರಭುತ್ವದ ಮಲ್ಯಗಳನ್ನು ಎತ್ತಿ ಹಿಡಿಯಲು ನಾವು ಕಂಕಣಬದ್ಧರಾಗಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನೂತನ ಪದಾಧಿಕಾರಿಗಳಾದ ಶೇಖರ್ ನಾಯಕ್, ಎಂ.ಕೆ. ನಾಗಪ್ಪ, ಮಂಜಪ್ಪ, ಎನ್.ಹೆಚ್. ಪರಮೇಶ್ವರಪ್ಪ, ಗೋಪಾಲ್ ಸೇರಿದಂತೆ ಹಲವರಿದ್ದರು.