google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಾಲ್ಕು ಗೋಡೆಯ ಶಿಕ್ಷಣದ ಜೊತೆಗೆ ಹೃದಯವಂತಿಕೆ ಯನ್ನು ಕಲಿಸುವ ನೈತಿಕ ಶಿಕ್ಷಣವನ್ನು ಕಲಿಸಬೇಕಿದೆ ಎಂದು ಎನ್‌ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.

ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಆವರಣದಲ್ಲಿ ವೈಶಾಖ ವೈಭವ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಬಿಎ, ಬಿಕಾಂ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು.

ಜವಾಬ್ದಾರಿಯುತ ವ್ಯವಸ್ಥೆಯಲ್ಲಿ ನಾವಿದ್ದೇವೆ. ಒಳ್ಳೆಯ ಶಿಕ್ಷಣ ಬೇಕು ನಿಜ. ಅದರೆ ಶಿಕ್ಷಣ ಕಲಿತ ಕೂಡಲೆ ಉತ್ತಮ ನಾಗರಿಕರಾಗುವುದಿಲ್ಲ. ನಮ್ಮ ನಿಜವಾದ ಬದುಕು ರೂಪಿಸುವುದು ಸಮಾಜದಿಂದ ಪಡೆದ ಅನುಭವ ವೆಂಬ ಶಿಕ್ಷಣ. ಅಂತಹ ವ್ಯಕ್ತಿತ್ವದ ಪರಿಪೂರ್ಣತೆಗೆ ಕಾಲೇಜು ಹಂತದಲ್ಲಿ ಲಭ್ಯವಿರುವ ವೇದಿಕೆಗಳನ್ನು ಬಳಸಿಕೊಳ್ಳಿ ಎಂದರು.

ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಏಳನೇ ತರಗತಿಯೆ ಕೊನೆ ಎಂಬ ಮನಸ್ಥಿತಿ ಇತ್ತು. ಬದಲಾದ ಕಾಲಮಾನದಲ್ಲಿ ಸಮಾಜದ ಮುಖ್ಯ ವಾಹಿನಿಯಲ್ಲಿ ಇಂದು ಹೆಣ್ಣು ಮಕ್ಕಳು ಅದ್ಭುತ ಸಾಧಕರಾಗಿ ಹೊರಹೊಮ್ಮುತ್ತಿದ್ದಾರೆ. ವಿಭಿನ್ನವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ದೇಶವನ್ನು ಉದ್ದೇಶಿಸಿ ಯುದ್ದದ ಕುರಿತಾಗಿ ಇಬ್ಬರು ಮಹಿಳಾ ಕಮಾಂಡರ್ ಮಾಡಿದ ಸುದ್ದಿ ಗೋಷ್ಟಿಯೇ ಅದ್ಭುತ ಉದಾ ಹರಣೆ. ಅಂತಹ ದಿಟ್ಟತನವನ್ನು ನಾವೆಲ್ಲರೂ ಅಭಿನಂದಿಸಬೇಕಿದೆ ಎಂದರು.

ಶಿಕ್ಷಣ ಇದ್ದವರು ಕಸವನ್ನು ಎಸೆದು, ಶಿಕ್ಷಣ ಇಲ್ಲದವರು ಅದನ್ನು ಸ್ವಚ್ಚ ಮಾಡಿದರೆ ಶಿಕ್ಷಣಕ್ಕೆ ಸಿಕ್ಕ ಬೆಲೆಯಾ ದರು ಏನು. ಹಣದ ಕಡೆಗೆ ನಮ್ಮ ಲಕ್ಷ ಇದೆ. ಅರಮನೆಗಾಗಿ ಶಾಂತಿಯನ್ನು ತ್ಯಜಿಸುತ್ತಿದ್ದಾರೆ. ಅದರೆ ಜೀವನದಲ್ಲಿ ತೃಪ್ತಿ ಮತ್ತು ನೆಮ್ಮದಿ ನೀಡುವುದು ಅನುಭವ ಮತ್ತು ಸಂಬಂಧಗಳಿಂದ ಮಾತ್ರ ಎಂಬ ಸತ್ಯ ಅರಿಯಬೇಕಿದೆ.

ನಮಗೆ ಎಷ್ಟು ಸ್ನೇಹ ಸಂಬಂಧ ಗಳಿವೆ ಎನ್ನುವುದಕ್ಕಿಂತ, ಜೀವವಿರುವ ಸಂಬಂಧಗಳು ಎಷ್ಟಿವೆ ಎನ್ನುವುದು ಮುಖ್ಯ. ಗ್ರಹದಿಂದ ಗ್ರಹಕ್ಕೆ ಹಾರುವುದನ್ನು ಕಲಿತ ಮಾನವ ಗೃಹದಿಂದ ಗೃಹಕ್ಕೆ ಹೋಗುವುದನ್ನು ಮರೆತ. ಒಳ್ಳೆಯ ಸಂಬಂಧ ಸ್ನೇಹವೆಂಬ ಗೃಹ ನಮ್ಮದಾಗಬೇಕು. ನಿಜವಾದ ಸಾರ್ಥಕತೆಯಿರುವುದು ಜೀವನದ ಸುದೀರ್ಘತೆಯಲ್ಲಿ ಅಲ್ಲ, ಅದರ ಸುಂದರತೆಯಿಂದ. ಅಂತಹ ಸುಂದರ ಜೀವನಕ್ಕೆ ನೈತಿಕ ಶಿಕ್ಷಣ ಬೇಕಿದೆ ಎಂದು ಹೇಳಿದರು.

ಪ್ರಾಂಶುಪಾಲ ಡಾ. ಆರ್.ಎಂ. ಜಗದೀಶ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋ ಜನಾಧಿಕಾರಿ ಡಾ.ಓಂಕಾರಪ್ಪ.ಎ.ಪಿ, ಸಾಂಸ್ಕೃತಿಕ ಸಂಘದ ಸಂಚಾಲಕಿ ಕಾವ್ಯಶ್ರೀ ಡಿ.ಎಂ. ಇನ್ನಿತರರಿದ್ದರು.

Leave a Reply

Your email address will not be published. Required fields are marked *