google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಕುವೆಂಪು ರಸ್ತೆಯಲ್ಲಿರುವ ಯೂನಿಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವತಿಯಿಂದ ಮೇ 4ರಂದು ಆಸ್ಪತ್ರೆ ಆವರಣದಲ್ಲಿ ಬೃಹತ್ ಬೇಸಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಮುಖ್ಯವಾಗಿ ಈ ಶಿಬಿರದಲ್ಲಿ ಉಚಿತ ದಂತ ತಪಾಸಣೆಯನ್ನು ಮಾಡಲಾಗುವುದು ಎಂದು ಮಕ್ಕಳ ತಜ್ಞ ಡಾ.ಶಂಬುಲಿಂಗ ಬಂಕೊಳ್ಳಿ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಯುನಿಟಿ ಆಸ್ಪತ್ರೆಯೂ ಮಕ್ಕಳ ಮತ್ತು ಹಿರಿಯರ ಆರೋಗ್ಯ ದೃಷ್ಟಿಯನ್ನಿಟ್ಟುಕೊಂಡು ಉಚಿತ ಆರೋಗ್ಯ ಶಿಬಿರವನ್ನು ನಡೆಸುತ್ತ ಬಂದಿದೆ. ಈ ಬಾರಿಯೂ ಕೂಡ ಮೇ 5ರಂದು ಈ ಶಿಬಿರ ಬೆಳಗಿನಿಂದಲೇ ಆರಂಭವಾಗುತ್ತದೆ. ದಂತ ಚಿಕಿತ್ಸೆಗೆ ಸಂಬಂಧಪಟ್ಟಂತೆ ತಪಾಸಣೆ ಮತ್ತು ಹಲವು ರೀತಿಯ ಚಿಕಿತ್ಸೆಗಳನ್ನು ಮತ್ತು ಔಷಧಿಯನ್ನು ನೀಡಲಾಗುತ್ತದೆ. ದಂತ ಚಿಕಿತ್ಸೆಯಲ್ಲಿ ಶೇ.25ರಷ್ಟು ರಿಯಾಯಿತಿಯನ್ನು ನೀಡಲಾಗುವುದು ಎಂದರು.

ಇತ್ತೀಚಿಗೆ ಮಕ್ಕಳಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾಗಿದ್ದು, ರಕ್ತಹೀನತೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಇದು ಗೊತ್ತಾಗುವುದಿಲ್ಲ. ಆಗಾಗಿ ಈ ಬಗ್ಗೆಯೂ ಕೂಡ ನಾವು ಉಚಿತವಾಗಿ 18 ವರ್ಷದ ಒಳಗಿನ ಮಕ್ಕಳಿಗೆ ಉಚಿತವಾಗಿ ಹಿಮೋಗ್ಲೋಬಿನ್ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆಯನ್ನು ನೀಡುತ್ತೇವೆ. ರಕ್ತಹೀನತೆಯಿಂದ ಮುಕ್ತಗೊಳಿಸುವುದು ನಮ್ಮ ಉದ್ದೇಶವಾಗಿದೆ. ಹಾಗೆಯೇ ಮಕ್ಕಳಲ್ಲಿ ಇರುವ ದಂತದ ತೊಂದರೆಯನ್ನು ಕಂಡುಹಿಡಿದು ಅದಕ್ಕೆ ಚಿಕಿತ್ಸೆ ನೀಡಲಾಗುವುದು ಎಂದರು.

ಭಾರತೀಯ ವೈದ್ಯ ಸಂಘದ ಅಧ್ಯಕ್ಷ ಶ್ರೀಧರ್ ಮಾತನಾಡಿ, ಈ ಶಿಬಿರಕ್ಕೆ ಐಎಂಎ ಕೂಡ ಸಹಕಾರ ನೀಡುತ್ತದೆ. ಮಕ್ಕಳ ತಜ್ಞರಿಂದ ಆರೋಗ್ಯ ತಪಾಸಣೆಯಲ್ಲದೆ ಸಮಾಲೋಚನೆಯನ್ನು ಕೂಡ ನಡೆಸಬಹುದಾಗಿದೆ. ಇದರ ಜೊತೆಗೆ ಟೈಫಾಯಿಡ್, ಜಂಡೀಸ್ ಮುಂತಾದ ಸೋಂಕು ರೋಗಗಳ ವಿರುದ್ಧವು ಲಸಿಕೆಗಳನ್ನು ನೀಡಲಾಗುತ್ತದೆ. ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.

ಹೆಚ್ಚಿನ ವಿವರಗಳಿಗೆ ಮತ್ತು ನೊಂದಣಿಗಾಗಿ 8762171225, 7892617233ನ್ನು ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಕ್ಕಳ ತಜ್ಞರಾದ ಡಾ.ರಾಜರಾಮ್ ಉಪ್ಪೂರ್, ಡಾ.ಅಜಯ್‌ಬಡ್ಡಿ, ಡಾ.ಸೌಮ್ಯ ಇದ್ದರು.

Leave a Reply

Your email address will not be published. Required fields are marked *