ಶಿವಮೊಗ್ಗ :- ನಗರವನ್ನು ಸುಂದರ ಹಾಗೂ ಹಸರೀಕರಣಗೊಳಿಸಲು ಸೂಡಾ ವತಿಯಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳು, ಬಡಾವಣೆಗಳಲ್ಲಿ ಗಿಡಗಳನ್ನು ನೆಡುವುದು ಹೀಗೆ ಹಲವು ಕಾರ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಗರವನ್ನು ಹಸಿರಾಗಿ ಮತ್ತು ಸುಂದರವಾಗಿಟ್ಟುಕೊಳ್ಳಲು ಎಲ್ಲರೂ ಸಹಕರಿಸಬೇಕೆಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮನವಿ ಮಾಡಿದರು.
ಇಂದು ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದ ಉದ್ಯಾನವನ, ಸೂರ್ಯ ಬಡಾವಣೆ ಹಾಗೂ ಸೋಮಿನಕೊಪ್ಪ ರಸ್ತೆಯ ಕೆಹೆಚ್‌ಬಿ ಕಾಲೋನಿ ಬಳಿ ಉದ್ಯಾನ ವನಗಳ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಅವರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
69 ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದಲ್ಲಿ ಅಂದಾಜು ಮೊತ್ತ ರೂ. 25 ಲಕ್ಷದಲ್ಲಿ ಉದ್ಯಾನ ವನದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಫೌಂಡೇಶನ್ ಸಹಿತ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಸಲಾಗುವುದು. ಉದ್ಯಾನ ವನದ ದಕ್ಷಿಣ ಭಾಗದಲ್ಲಿ ಫೌಂಡೇ ಶನ್ ರಹಿತ ಚೈನ್‌ಲಿಂಕ್ ಫೆನ್ಸಿಂಗ್ ಅಳವಡಿಕೆ, ಉದ್ಯಾನವನದಲ್ಲಿ 633ಮೀ ಅಳತೆಯ ಮೇಲ್ಛಾವಣಿ ಯೊಂದಿಗೆ ಯೋಗ ಮಂಟಪ ನಿರ್ಮಿಸಲಾಗುವುದು ಎಂದರು.
ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಜಿ-ಬ್ಲಾಕ್‌ನಲ್ಲಿ ಹೊರಾಂಗಣ ಸಾಮಗ್ರಿ ಅಳವಡಿಸಿ ರುವ ಉದ್ಯಾನಕ್ಕೆ ಸುತ್ತಲೂ ಗ್ರಿಲ್ ಫೆನ್ಸಿಂಗ್ ಅಳವಡಿಸುವ ಕಾಮಗಾರಿ ಯನ್ನು ರೂ. 20 ಲಕ್ಷದಲ್ಲಿ ಕೈಗೆತ್ತಿಗೊಳ್ಳಲು ಗುದ್ದಲಿ ಪೂಜೆ ನೆರವೇರಿಸಿದ್ದು, ಉದ್ಯಾನವನದ ಉತ್ತರ, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಫೌಂಡೇಶನ್ ಸಹಿತ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ ಮಾಡಲಾಗುವುದು ಹಾಗೂ ಸುಮಾರು 35 ಮೀ. ಪಾಥ್ ವೇ ನಿರ್ಮಿಸಲಾಗುವುದು. ಸೂರ್ಯ ಬಡಾವಣೆಯಲ್ಲಿರುವ ಹಾ.ಮ. ನಾಯ್ಕರವರ ಮನೆಯ ಹತ್ತಿರದ ಉದ್ಯಾನವನದ ಅಭಿವೃದ್ದಿ ಕಾಮಗಾರಿಯನ್ನು ಅಂದಾಜು ಮೊತ್ತ 25 ಲಕ್ಷದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು ಉದ್ಯಾನವನ ಪ್ರದೇಶಕ್ಕೆ ಎಂ ಎಸ್ ಪೋಲ್‌ನೊಂದಿಗೆ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ , ಪಾರ್ಕ್‌ಪ್ಲಾಟ್ ಫಾರ್ಮ್ ನಿರ್ಮಾಣದೊಂದಿಗೆ 8 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ ಹಾಗೂ ಅಂದಾಜು ೫೦ಮೀ.ಪಾಥ್‌ವೇ ನಿರ್ಮಾಣ ಹಾಗೂ 4 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಸಲಾಗುವುದು. ಸೋಮಿನಕೊಪ್ಪ ರಸ್ತೆಯ ಕೆಹೆಚ್‌ಬಿ ಕಾಲೋನಿಯ ೫ನೇ ತಿರುವಿನಲ್ಲಿ ರೂ. 20ಲಕ್ಷ ಮೊತ್ತದಲ್ಲಿ ಉದ್ಯಾನವನ ಪ್ರದೇಶಕ್ಕೆ ಫೌಂಡೇಷನ್‌ಸಹಿತ ಚೈನ್‌ಲಿಂಕ್ ಹೊರ ಭಾಗದಲ್ಲಿ ಅಂದಾಜು 32ಮೀ ಪಾಥ್‌ವೇ ನಿರ್ಮಿಸಲಾಗುವುದು ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ, ಸೂಡಾ ಸದಸ್ಯರಾದ ಎಸ್.ಎಂ. ಸಿದ್ದಪ್ಪ, ಪ್ರವೀಣ್ ಕುಮಾರ್ ಎಂ, ಸೂಡಾ ಆಯುಕ್ತ ವಿಶ್ವನಾಥ ಮುದಜ್ಜಿ, ಸೂಡಾ ಅಭಿಯಂತರ ಬಸವ ರಾಜಪ್ಪ, ಗಂಗಾಧರ ಸ್ವಾಮಿ, ಅಧಿಕಾರಿಗಳು, ನಿವಾಸಿಗಳಿದ್ದರು.