ಸೊರಬ :- ಸಾರ್ವಜನಿಕವಾಗಿ ರುವ ಎಲ್ಲಾ ಕೆಲಸ ಕಾರ್ಯಗಳನ್ನು ಸರ್ಕಾರವೇ ಮಾಡಲೆಂದು ಅಪೇಕ್ಷಿಸದೆ ತಾವು ಕೂಡ ಸ್ವಯಂ ಪ್ರೇರಿತರಾಗಿ ಕೈಲಾದ ಸೇವೆ ಸಲ್ಲಿಸಲು ಸಿದ್ದರಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪಕರೆ ನೀಡಿದರು.
ಇಂದು ತಾಲೂಕಿನ ಹುರುಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗೆ ನೂತನ ಶಾಲಾ ಕಾಂಪೌಂಡ್ ಮತ್ತು ಅಡುಗೆ ಕೋಣೆಯ ಕಾಮಗಾರಿಗಳಿಗೆ ಅವರು ಯೋಜನೆ ಮತ್ತು ಸಾಂಕಿಕ ಸಚಿವ ಡಿ. ಸುಧಾಕರ್ ಹಾಗೂ ಸ್ಥಳೀಯ ರೊಂದಿಗೆ ಭಾಗವಹಿಸಿ, ಶಾಲಾ ಕಾಂಪೌಂಡ್ ಮತ್ತು ಅಡುಗೆ ಕೋಣೆ ನಿರ್ಮಾಣಕ್ಕೆ ಶ್ರಮದಾನ ಮಾಡಿದ ನಂತರ ಗಿಡ ನೆಟ್ಟು ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿದ ಅವರು ಶಾಲಾ ಸ್ವತ್ತು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾ ಬ್ದಾರಿಯಾಗಿದೆ. ಈ ಹಿಂದೆ ಶಾಸಕ ನಾಗಿದ್ದ ಅವಧಿಯಲ್ಲಿ ನೂತನ ಶಾಲಾ ಕೊಠಡಿಯ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗಿತ್ತು. ಪ್ರಸ್ತುತ ಹೆಚ್ಚುವರಿಯಾಗಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಅಗತ್ಯವಿರುವ ಅನು ದಾನ ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದರು.
ಎಲ್ಲರಲ್ಲೂ ನಮ್ಮ ಊರು, ನಮ್ಮ ಶಾಲೆ ಎಂಬ ಅಭಿಮಾನವಿರಬೇಕು ಎಂದ ಅವರು ಮಕ್ಕಳ ಭವಿಷ್ಯ ರೂಪಿ ಸುವುದು ಮಾತ್ರವಲ್ಲ ಸರ್ಕಾರದ ಅಸ್ತಿಯ ರಕ್ಷಣೆಯ ಹೊಣೆಯೂ ನಮ್ಮೆಲ್ಲರದ್ದಾಗಿದೆ. ರಾಜ್ಯದ ಅತಿಹೆಚ್ಚು ಅಂದರೆ 1300 ಕೆರೆಗಳನ್ನು ಹೊಂದಿರುವ ಸೊರಬ ತಾಲೂಕಿನ ಕೆರೆಗಳ ಅಭಿ ವೃದ್ಧಿಗೆ ನರೇಗಾ ಯೋಜನೆ ಸಂಜೀವಿನಿ ಯಾಗಿದೆ ಎಂದರು.
ಅಜೀಮ್ ಪ್ರೇಮ್ ಜಿ ಫೌಂಡೇಶನ್ ಅವರ 1591ಕೋಟಿ ರೂ.ಗಳ ಆರ್ಥಿಕ ನೆರವಿನೊಂದಿಗೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ ಆರು ದಿನಗಳು ಪೌಷ್ಟಿಕ ಆಹಾರ ಮೊಟ್ಟೆ, ಹಾಲು, ರಾಗಿಮಾಲ್ಟ್, ನೀಡಲಾಗುತ್ತಿದೆ. ಅಲ್ಲದೆ ಬಟ್ಟೆ, ಶೂ, ಸಾಕ್ಸ್ ಮತ್ತಿತರ ಸೌಲಭ್ಯಗಳೊಂದಿಗೆ ಶಾಲೆಗೆ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸಲಾಗುತ್ತಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಇಂದಿನ ಮಕ್ಕಳು ದೇಶದ ಅತ್ಯಂತ ಉಚ್ಚ ಸ್ಥಾನ ಅಲಂಕರಿಸಿ ಸೇವೆ ನೀಡುವಂತಾಗಬೇಕು. ರಾಜ್ಯದ ಎಲ್ಲಾ ವರ್ಗದ ಜನರಿಗೆ ಮದ್ಯವರ್ತಿ ಗಳ ನೆರವಿಲ್ಲದೆ ಗ್ಯಾರಂಟಿ ಯೋಜನೆ ಗಳ ಲಾಭ ದೊರೆಯುತ್ತಿದೆ. ರಾಜ್ಯದ ಪ್ರತಿ ಮನೆಗೂ ಯೋಜನೆಯ ಲಾಭ ದೊರೆತಿದೆ. ಮುಂದಿನ ದಿನಗಳಲ್ಲಿ ಜನರ ಅಶೋತ್ತರಾಗಳಿಗೆ ಪೂರಕ ವಾಗಿ ಇನ್ನಷ್ಟು ಸೇವೆ ಮಾಡುವ ಉತ್ಸಾಹ ಬಂದಿದೆ ಎಂದರು.

ರಾಜ್ಯ ಯೋಜನೆ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಅವರು ಮಾತನಾಡಿ, ರಾಜ್ಯದ ಪ್ರಗತಿಗೆ ಮುಖ್ಯಮಂತ್ರಿ ದೇವರಾಜ ಅರಸು ಅವರ ನಂತರ ಎಸ್. ಬಂಗಾರಪ್ಪ ಅವರು ಮೇಲ್ಪಕ್ತಿಯಲ್ಲಿ ಗುರುತಿಸ ಲಾಗುತ್ತಿದೆ. ಅವರ ಉಚಿತ ವಿದ್ಯುತ್ ನೀಡುವ ಯೋಜನೆ ಇಂದಿಗೂ ಪ್ರಚಲಿತ ದಲ್ಲಿದೆ. ದೇವಸ್ಥಾನಕ್ಕಿಂತ ಶಾಲಾ ಕಟ್ಟಡ ನಿರ್ಮಾಣ ಅತ್ಯಂತ ಪುಣ್ಯದ ಕಾರ್ಯ. ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಸಚಿವ ಮಧು ಅವರು ಅಭಿನಂದನಾರ್ಹರು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜು ನಾಥಗೌಡ, ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಭಾನು ಹುರುಳಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಅನಸೂಯ ಶಿವಕುಮಾರ್, ಮುಖಂಡ ಆರ್. ಪ್ರಸನ್ನಕುಮಾರ್ ಇನ್ನಿತರರಿದ್ದರು.
