google.com, pub-9939191130407836, DIRECT, f08c47fec0942fa0

ಸಾಗರ :- 1.16 ಕೋಟಿ ರೂ. ವೆಚ್ಚದಲ್ಲಿ ಒಂದು ವರ್ಷದಲ್ಲಿ ಜೈಲ್ ಕಾಮಗಾರಿ ಮುಗಿದಿದ್ದು, ವಾರ್ಡನ್ ಮತ್ತು ಸಿಬ್ಬಂದಿಗೆ ವಸತಿಗೃಹ ನಿರ್ಮಿಸಲು ಅಗತ್ಯ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.    

ಇಲ್ಲಿನ ವರದಾ ರಸ್ತೆಯಲ್ಲಿರುವ ಸಬ್ ಜೈಲ್ ಕಾಮಗಾರಿಯನ್ನು ಬುಧವಾರ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಉಪವಿಭಾಗೀಯ ಆಸ್ಪತ್ರೆ ಮತ್ತು ತಾಯಿಮಗು ಆಸ್ಪತ್ರೆಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದ್ದು, ರೋಗಿಗಳಿಗೆ ಗುಣಮಟ್ಟದ ಆರೋಗ್ಯಸೇವೆ ನೀಡಲಾಗುತ್ತಿದೆ ಎಂದು ಹೇಳಿದರು.

ಸಬ್‍ಜೈಲ್ ಕಟ್ಟಡ ಕುಸಿದು ರೋಗಿಗಳನ್ನು ಶಿವಮೊಗ್ಗ ಜೈಲ್‍ಗೆ ಶಿಫ್ಟ್ ಮಾಡಲಾಗಿತ್ತು. ಗೃಹಸಚಿವರ ಪರಮೇಶ್ವರ್ ಅವರಿಗೆ ಸಬ್‍ಜೈಲ್ ಸ್ಥಿತಿಗತಿ ವಿವರಿಸಿದಾಗ ತಕ್ಷಣ 1.16 ಕೋಟಿ ರೂ. ಮಂಜೂರು ಮಾಡಿದ್ದರು. ಜೊತೆಗೆ ಇನ್ನೊಂದು ಭಾಗದಲ್ಲಿ ಕಾಂಪೋಡ್ ನಿರ್ಮಾಣ ಸೇರಿದಂತೆ ಗಾರ್ಡನ್ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಗಮನ ಹರಿಸಲಾಗುತ್ತದೆ. ಸದ್ಯದಲ್ಲೆ ಶಿವಮೊಗ್ಗದಲ್ಲಿರುವ ಖೈದಿಗಳನ್ನು ಸಾಗರಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಹೇಳಿದರು.

ಉಪವಿಭಾಗೀಯ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು 70 ಕೋಟಿ ರೂ. ಅನುದಾನ ಮಂಜೂರಾಗಿದೆ. 250 ಹಾಸಿಗೆ ಸಾಮಥ್ರ್ಯಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಪುರಸ್ಕಾರ ದೊರೆತಿದೆ 

ಕೇಂದ್ರ ಗ್ರಂಥಾಲಯ ಪುನರ್ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಇರಿಸಲಾಗಿದೆ. ಸದ್ಯದಲ್ಲಿಯೆ ಸುಸಜ್ಜಿತ ಗ್ರಂಥಾಲಯ ಕಟ್ಟಡ ಪುನರ್ ನಿರ್ಮಾಣ ಮಾಡಲಾಗುತ್ತದೆ. ಆಡಳಿತ ಸೌಧದ ಹೆಚ್ಚುವರಿ ಕಾಮಗಾರಿಗೆ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ 8 ಕೋಟಿ ರೂ. ಬಂದಿದೆ. ಮಾಜಿ ಶಾಸಕರು ಅನುದಾನ ತಂದಿದ್ದು ನಾವು ಎಂದು ಹೇಳುತ್ತಿದ್ದಾರೆ. ಅವರವರ ಅವಧಿಯಲ್ಲಿ ಅಭಿವೃದ್ದಿ ದೃಷ್ಟಿಯಿಂದ ಅನುದಾನ ತರುವುದು ಸಹಜ ಪ್ರಕ್ರಿಯೆ. ನಾನು ಅವರು ಅನುದಾನ ತಂದಿಲ್ಲ ಎಂದು ಹೇಳುತ್ತಿಲ್ಲ. ನಮ್ಮ ಅವಧಿಯಲ್ಲಿ ತಂದ ಅನುದಾನದ ದಾಖಲೆ ಒದಗಿಸಲು ಸಿದ್ದನಿದ್ದೇನೆ. ನನ್ನ ಉದ್ದೇಶ ಊರಿನ ಸಮಗ್ರ ಅಭಿವೃದ್ದಿ ಮಾತ್ರ. ನಾವು ಮೂರು ಬೀದಿದೀಪ ಹಾಕಿ ಮಹಿಳಾ ಸದಸ್ಯರನ್ನು ಕರೆದುಕೊಂಡು ಹೋಗಿ ಹತ್ತಾರು ಬಾರಿ ಉದ್ಘಾಟನೆ ಮಾಡುವ ಸ್ವಭಾವದವರಲ್ಲ ಎಂದು ಪರೋಕ್ಷವಾಗಿ ಹಾಲಪ್ಪಗೆ ಟಾಂಗ್ ನೀಡಿದರು.

ಒಳಚರಂಡಿ ಕಾಮಗಾರಿ ಮುಂದುವರೆದ ಕಾಮಗಾರಿಗೆ 20 ಕೋಟಿ ರೂ. ಮಂಜೂರಾಗಿದೆ. ಪದವಿ ಕಾಲೇಜಿನ ಅಭಿವೃದ್ದಿ ಕಾಮಗಾರಿ ಮುಗಿದಿದೆ. ಬಿ ಖಾತಾ ಹಂಚಿಕೆ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ತುಮರಿ ಮತ್ತು ಕೋಗಾರು ಭಾಗದಲ್ಲಿ ಮನೆಮನೆಗೆ ನೀರು ಪೂರೈಸಲು ತಲಾ 100 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಗಣಪತಿ ದೇವಸ್ಥಾನವನ್ನು ಕೇರಳ ದೇವಸ್ಥಾನ ಅಭಿವೃದ್ದಿ ಮಾದರಿಯಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ ಸದ್ಯದಲ್ಲಿಯೆ ಪ್ರಮುಖರ ಸಭೆ ಕರೆದ ಚರ್ಚೆ ನಡೆಸಲಾಗುತ್ತದೆ. ಮಾರ್ಕೇಟ್ ರಸ್ತೆ ಮತ್ತು ಬಿ.ಎಚ್.ರಸ್ತೆ ಅಗಲೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೈಲ್ ಸೂಪರಿಡೆಂಟ್ ಡಾ. ರಂಗರಾಜ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಪ್ರಮುಖರಾದ ತಾರಾಮೂರ್ತಿ, ಗಿರೀಶ್ ಕೋವಿ, ಪರಿಮಳ, ಭೀರೇಶ್ ಕಾಗೋಡು ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *