ಶಿವಮೊಗ್ಗ :- ಇಲ್ಲಿನ ಶ್ರೀ ರಕ್ತೇಶ್ವರಿ ಮತ್ತು ಮಳಲಿ ಗಿಡ್ಡಮ್ಮ ದೇವಸ್ಥಾನದ ೮ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಏ. 2ರ ನಾಳೆಯಿಂದ 4ರವರೆಗೆ ವಿನೋಬನಗರ 60 ಅಡಿ ರಸ್ತೆಯಲ್ಲಿರುವ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ, ಪುರುಷೋತ್ತಮ್ ಹೇಳಿದರು .
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಇದು 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವಾಗಿದೆ ಫೆಬ್ರವರಿ 2ರಂದು ಸಂಜೆ 6 ಗಂಟೆಗೆ ಗಣಪತಿ ಹೋಮ ಪುಣ್ಯವಚನ, ಕಳಸ ಪ್ರತಿಷ್ಠಾಪನೆ, ಸುದರ್ಶನ ಹೋಮ, ವಾಸ್ತು ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ನಂತರ ಸಂಜೆ 7.30ರಿಂದ ಶ್ರೀರಾಮ ಪ್ರಿಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಏ. 3ರ ಬೆಳಗ್ಗೆ 8ಕ್ಕೆ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶಾರದಾ ಪೀಠದ ಪೀಠಾಧಿಪತಿಗಳಾದ ಶ್ರೀ ಡಾ. ವಿದ್ಯಾಭಿನವ ವಿದ್ಯಾರಣ್ಯ ಭಾರತಿ, ಮಹಾಸ್ವಾಮಿಗಳವರ ದಿವ್ಯ ಸಾನಿದ್ಯದಲ್ಲಿ ಅಮ್ಮನವರಿಗೆ ಹಾಗೂ ನಾಗದೇವರಿಗೆ ಅಭಿಷೇಕ ಪೂಜಾ ಕಾರ್ಯಕ್ರಮ ನಡೆಯಲಿದೆ.ಬೆಳಗ್ಗೆ 9ಗಂಟೆಯಿಂದ ಸುಬ್ರಹ್ಮಣ್ಯ ಹೋಮ ಆರಂಭವಾಗಲಿದೆ, ನಂತರ ಶ್ರೀಗಳಿಂದ ಆಶೀರ್ವಚನ,ಮದ್ಯಾಹ್ನ 1.30 ಕ್ಕೆ ಅನ್ನ ಸಂತರ್ಪಣೆ ರಾತ್ರಿ 7ಗಂಟೆಗೆ ಶಾಂಭವಿ ನೃತ್ಯ ಕಲಾ ಕೇಂದ್ರದವರಿಂದ ಭರತನಾಟ್ಯ ಕಾರ್ಯಕ್ರಮ ಅಯೋಜಿಸಲಾಗಿದೆ ಎಂದರು.
ಎ. 4ರಂದು ಬೆಳಗ್ಗೆ 9 ರಿಂದ ಬಸವ ಕೇಂದ್ರದ ಡಾ. ಶ್ರೀಬಸವ ಮರಳುಸಿದ್ದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಅಮ್ಮನವರಿಗೆ ರಕ್ತೇಶ್ವರಿ ಮಹಾ ಹೋಮ ನಡೆಯಲಿದ್ದು ನಂತರ ಆಶೀರ್ವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ ಅನ್ನಸಂತರ್ಪಣೆನೆಡೆಯಲಿದೆ ಎಂದರು.

ಅಂದು ಸಂಜೆ 7 ಗಂಟೆಗೆ ಶಿವಮೊಗ್ಗದ ಯಕ್ಷ ಸಂವರ್ಧನಾ ಕಲಾವಿದರಿಂದ ಕದಂಬ ಕೌಶಿಕ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು . ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು. ಸೇವಾ ಸಮಿತಿಯ ಅಧ್ಯಕ್ಷ ಭೀಮಣ್ಣ ಉಪಾಧ್ಯಕ್ಷ ದಯಾನಂದ್ ಪ್ರಮುಖರಾದ ಸುರೇಶ್, ಧನಂಜಯ, ಮುರಳಿ, ಮುಂತಾದವರಿದ್ದರು.
