google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಶಿವಮೊಗ್ಗಕ್ಕೆ ಮೊದಲ ಬಾರಿಗೆ ಬಂದು ಈ ಎಕ್ಸಿಬಿಷನ್ ನಡೆಸುತ್ತಿರುವುದು ಸಂತಸ ತಂದಿದೆ. ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆಯಲ್ಲಿ ವೈವಿಧ್ಯಮಯ ಮೀನುಗಳ ಅಕ್ವೇರಿಯಂ ಹಾಗೂ ವಿಶೇಷ ಆಕರ್ಷಣೆಗಳು ಮಕ್ಕಳಿಗೆ ಮುಧ ನೀಡುವುದರ ಜೊತೆಗೆ ಜನ ಕೂಡ ಹೆಚ್ಚಿಸುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಇದೇ ಮೊದಲ ಬಾರಿಗೆ ಫನ್ ವರ್ಲ್ಡ್‌ನಿಂದ ಹಮ್ಮಿಕೊಳ್ಳಲಾದ ಅಪರೂಪದ ಎಕ್ಸಿಬಿಷನ್ ಶಿವಮೊಗ್ಗ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಂಸ್ಥೆಯವರು ಆಹಾರದ ಮಳಿಗೆಗಳು ಮತ್ತು ವಸ್ತು ಪ್ರದರ್ಶನ ಮಕ್ಕಳಿಗೆ ರಜಾ ಕಾಲದಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಫನ್ ವರ್ಲ್ಡ್ ಸಿಇಒ ಮಾಸ್ತಿ ಚೈತನ್ಯ ಅಯ್ಯಂಗಾರ್ ಮಾತನಾಡಿ, ದೇಶದಲ್ಲೇ ಅತಿ ದೊಡ್ಡ ಎಕ್ಸಿಬಿಷನ್ ಇಂಡಿಯಾ ಸಂಸ್ಥೆ ನಮ್ಮದು ಏಕಕಾಲದಲ್ಲಿ ಪ್ರಸ್ತುತ 22ಕಡೆ ಈ ರೀತಿಯ ಎಕ್ಸಿಬಿಷನ್ ನಡೆಯುತ್ತಿದೆ. ಎಲ್ಲಾ ಕಡೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಈ ವಸ್ತು ಪ್ರದರ್ಶನದಲ್ಲಿ ನೂರಾರು ಜಾತಿಯ ವಿಶೇಷ ತಳಿಯ ಮೀನುಗಳ ಅಕ್ವೇರಿಯಂ ನೋಡಬಹುದು ಅಲ್ಲದೆ ವಿಶೇಷ ಆಕರ್ಷಣೆಯಾಗಿ ಫಿಲಿಫೈನ್ಸ್ ದೇಶದ ಮತ್ಸ್ಯ ಕನ್ಯೆಯರು ಇರುವ ವಿಶೇಷ ಅಕ್ವೇರಿಯಂ ಇಲ್ಲಿ ಹೆಚ್ಚು ಆಕರ್ಷಿತವಾಗಿದೆ. ೪೫ ದಿನಗಳ ಕಾಲ ನಡೆಯಲಿರುವ ಈ ಎಕ್ಸಿಬಿಷನ್ ಪ್ರತಿದಿನ ಸಂಜೆ 4 ರಿಂದ 9.30ವರೆಗೆ ಇರಲಿದೆ. ಮಕ್ಕಳಿಗೆ ಆಟ ಆಡಲು ವಿಶೇಷ ಅಮ್ಯೂಸ್ಮೆಂಟ್ ಪಾರ್ಕ್, ಮೊದಲ ಬಾರಿಗೆ ಸುನಾಮಿ ಮತ್ತು ಗ್ರೀನ್ ಟವರ್ ಅಮ್ಯೂಸ್ಮೆಂಟ್ ಇದ್ದು ವಿಶೇಷ ವಸ್ತು ಪ್ರದರ್ಶನ. ವಿವಿಧ ಆಹಾರದ ಮಳಿಗೆಗಳು ಮಕ್ಕಳಿಗೆ ಖುಷಿ ಕೊಡುವ ವೈವಿಧ್ಯಮಯ ಎಕ್ಸಿಬಿಷನ್ ಇದಾಗಿದೆ ಎಂದರು.

ಪ್ರವೇಶ ದರ 100 ರೂ ನಿಗದಿಪಡಿಸಲಾಗಿದೆ. ನಾವು ಶಿವಮೊಗ್ಗದ ಜನರಿಗಾಗಿ ಬಂದಿದ್ದೇವೆ. ದೇಶ ವಿದೇಶಗಳಲ್ಲಿ ಹೆಸರಾಂತ ಎಕ್ಸಿಬಿಷನ್ ಇದು. ಮಿಸ್ ಮಾಡದೆ ಶಿವಮೊಗ್ಗದಲ್ಲಿ ಸಾರ್ವಜನಿಕರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ ಎಂದರು. ಮೈಸೂರು ದಸರಾ ಸೇರಿದಂತೆ ದೇಶದ ಪ್ರತಿಷ್ಠಿತ ಕಡೆಗಳಲ್ಲಿ ನಮ್ಮ ಸಂಸ್ಥೆ ಎಕ್ಸಿಬಿಷನ್ ನಡೆಸಿ ಯಶಸ್ವಿಯಾಗಿದ್ದು, ಶಿವಮೊಗ್ಗದಲ್ಲು ಯಶಸ್ವಿ ಪ್ರದರ್ಶನವಾಗಲು ಜನತೆಯ ಸಹಕಾರವಿರಲಿ ಎಂದರು. ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *