ಶಿವಮೊಗ್ಗ :- ರಾಜ್ಯ ಸರ್ಕಾರ ಕೂಡಲೇ ಶಿವಮೊಗ್ಗ ಸೇರಿದಂತೆ ರಾಜ್ಯದ 7ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಮುಂದಾಗಬೇಕು ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಇತ್ತೀಚೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ಎಚ್ಚರಿಕೆ ನೀಡಿದ್ದಾರೆ. ಚುನಾಯಿತ ಪ್ರತಿನಿಧಿಗಳು ಇಲ್ಲದೆ ಶಿವಮೊಗ್ಗ ನಗರ ಎಷ್ಟರ ಮಟ್ಟಿಗೆ ಕಸದ ತೊಟ್ಟಿಯಾಗಿದೆ ಎಂದು ಹೇಳಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸುವುದು ಇಷ್ಟವಿಲ್ಲ ಎಂದು ತೋರುತ್ತದೆ. ಕೂಡಲೇ ಚುನಾವಣೆ ನಡೆಸಲು ಮುಂದಾಗಬೇಕು ಎಂದರು.
ಈಗಾಗಲೇ ಚುನಾವಣಾಧಿಕಾರಿಗಳು ಮಹಾನಗರ ಪಾಲಿಕೆಗಳ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳಬೇಕು ಎಂದು ಹೇಳಿದೆ. ಈ ಬಗ್ಗೆ ನ್ಯಾಯಾಲಯವು ಕೂಡ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದೆ. ಆದರೂ ಕೂಡ ರಾಜ್ಯಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯ ಸರ್ಕಾರ ಮೀಸಲಾತಿ ಘೋಷಿಸಿದರೆ ಸರಿ. ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗ ಮಹಾನಗರ ಚುನಾವಣೆಯನ್ನು ನಡೆಸಬೇಕು. ಚುನಾವಣೆ ಆಯುಕ್ತರ ಬಳಿ ಮತ್ತೊಮ್ಮೆ ಹೋಗುವುದಿಲ್ಲ. ಮತ್ತೊಮ್ಮೆ ತಕ್ಷಣ ಮಹಾನಗರ ಪಾಲಿಕೆ ಚುನಾವಣೆಯನ್ನು ನಡೆಸಬೇಕು ಎಂದು ಒತ್ತಾಯ ಮಾಡಿದ ಅವರು ರಾಷ್ಟ್ರಭಕ್ತ ಬಳಗದಿಂದ ಚುನಾವಣಾ ಆಯೋಗಕ್ಕೆ ನಿಯೋಗ ಹೋಗಿ ಒತ್ತಾಯಿಸಲಾಗುವುದು ಎಂದರು.
ಉಪಾಯುಕ್ತರು ನಗರದ ಅಭಿವೃದ್ಧಿಗೆ ಹಣ ಇಲ್ಲದಿದ್ದರೆ ನನಗೆ ತಿಳಿಸಿ ನಾನು ಸರ್ಕಾರಕ್ಕೆ ಪತ್ರ ಬರೆದು ಹಣ ಒದಗಿಸುವ ಬಗ್ಗೆ ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಆದರೆ ರಾಜ್ಯಸರ್ಕಾರದ ಹತ್ತಿರ ಎಲ್ಲಿ ಹಣವಿದೆ. ಈಗಾಗಲೇ ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬಾರಿ ೧೨ ಕೋಟಿ ರೂಪಾಯಿಯನ್ನು ಆಶ್ರಯ ಮನೆಗಳ ಮೂಲಭೂತ ಸೌಕರ್ಯಗಳಿಗೆ ಬಿಡುಗಡೆ ಮಾಡಿಸುತ್ತೇನೆ ಎಂದು ೬ ತಿಂಗಳಾಯಿತು. ಹೀಗಿರುವಾಗ ಉಪಲೋಕಾಯುಕ್ತರ ಎಷ್ಟು ಹಣ ಬೇಕಾದರೂ ಪತ್ರ್ರ ಬರೆಯಿರಿ ಕಳಿಸುತ್ತೇನೆ ಎಂದದ್ದು ಸಂತೋಷದ ವಿಷಯ ಅಷ್ಟೇ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಈ. ವಿಶ್ವಾಸ್, ಮೋಹನ್ ಜಧವ್, ಚನ್ನಬಸಪ್ಪ, ರಾಜು, ಶಿವು, ಕುಬೇರಪ್ಪ, ದೊರೆ, ಪ್ರಶಾಂತ್, ಬೇಳೂರು ಗೋವಿಂದಪ್ಪ, ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
