google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆಯಲ್ಲದೆ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಜಿಲ್ಲಾ ಬಿಜೆಪಿಯು ಇಂದು ನಗರದ ಅಮೀರ್ ಅಹಮ್ಮದ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತಲ್ಲದೆ ಮುಖ್ಯಮಂತ್ರಿಗಳ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರನ್ನುದ್ಧೇಶಿಸಿ ಮಾತನಾಡಿದ ಶಾಸಕ ಹಾಗೂ ಮಾಜಿ ಗೃಹ ಸಚಿವ ಅರಗ ಜನೇಂದ್ರ, ಭಾರತದ ಸಂವಿಧಾನವು 106 ಬಾರಿ ತಿದ್ದುಪಡಿಗೆ ಒಳಗಾಗಿದ್ದು ಅದರಲ್ಲಿ 76 ಬಾರಿ ಕಾಂಗ್ರಸ್ಸೇ ತಿದ್ದುಪಡಿ ಮಾಡಿ ಮುಸ್ಲೀಮರ ಓಲೈಕೆಗೆ ಏನು ಬೇಕೋ ಅದನ್ನು ಮಾಡಿಕೊಂಡಿದೆ. ಕಾಂಗ್ರೆಸ್ ಆವತ್ತು ದೇಶವನ್ನು ಇಬ್ಭಾಗ ಮಾಡಿತ್ತು. ಈಗ ಮುಸ್ಲಿಂ ತುಷ್ಠೀಕರಣ ಬಜೆಟ್ ಮೂಲಕ ಊರು ಊರನ್ನು ಒಡೆಯುತ್ತಿದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಹಿಂದೂ-ಮುಸ್ಲಿಂರನ್ನು ಒಂದಾಗಿರಲು ಬಿಡುತ್ತಿಲ್ಲ. ಗುತ್ತಿಗೆಯಲ್ಲಿ ಈಗಾಗಲೇ ಮುಸ್ಲಿಂರೇ ಹೆಚ್ಚಿದ್ದಾರೆ. ಮತ್ತೆ ಮುಸ್ಲಿಂರಿಗೆ ಶೇ. 4ರಷ್ಟು ಮೀಸಲು ಕಲ್ಪಿಸಿದೆ. ಸಾಧನೆಗಳ ಆಧಾರದ ಮೇಲೆ ಅವರಿಗೆ ಮತ ಕೇಳುವ ಯೋಗ್ಯತೆ ಇಲ್ಲ. ಅದಕ್ಕಾಗಿ ಗ್ಯಾರೆಂಟಿಗಳ ಮೇಲೆ ಮತ ಕೇಳುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರರು, ವಿಚಾರವಾದಿಗಲಕು, ಬುದ್ದಿಜೀವಿಗಳನ್ನು ತರಾಟೆಗೆ ತೆಗೆದುಕೊಂಡ ಜನೇಂದ್ರ ಎಲ್ಲದಕ್ಕೂ ನೀವೇ ಬಾಸ್ ಆಗಿದ್ದೀರಿ. ಬೇರೆ ವಿಷಯಗಳಿಗೆ ಹೋರಾಡುತ್ತೀರಿ. ಮುಸ್ಲಿಂ ತುಷ್ಠೀಕರಣದ ಬಗ್ಗೆ ನೀವೇಕೆ ಸಿನಿಕರಾಗಿದ್ದೀರಿ. ಭವಿಷ್ಯದ ಕರ್ನಾಟಕವನ್ನು ಮಣ್ಣು ಪಾಲು ಮಾಡುತ್ತಿದ್ದೀರಿ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಮುಸ್ಲಿಂರಿಗೆ ಪಾಕಿಸ್ತಾನ ಮಾಡಿ ಕೊಟ್ಟಾಗಿದೆ. ಯಾವುದೇ ಕಾರಣಕ್ಕೂ ರಾಜ್ಯವನ್ನು ಬಿಟ್ಟುಕೊಡುವುದಿಲ್ಲ ಎಂದ ಅವರು ಬಿಜೆಪಿ ನಾಯಕರಾದ ಯಡಿಯೂರಪ್ಪ ಅವರು ಶಾಲಾ ಮಕ್ಕಳಿಗೆ ಸೈಕಲ್ ಕೊಟ್ಟಿದ್ದರು. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀಯೋಜನೆ ಕೊಟ್ಟಿದ್ರು. ಅವು ಕೇವಲ ಹಿಂದೂಗಳಿಗೆ ಅಂತಾ ಹೇಳಿದ್ರಾ ಎಂದು ಪ್ರಶ್ನಿಸಿದ ಅವರು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. 9ವಿವಿಗಳನ್ನು ಮುಚ್ಚಿ ಆ ಹಣವನ್ನು ಮುಸ್ಲಿಂರಿಗೆ ನೀಡುತ್ತಿದೆ ಎಂದು ಹೇಳಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಧನಂಜಯ ಸರ್ಜಿ, ಡಿ.ಎಸ್.ಅರುಣ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಎಸ್. ಜನೇಶ್ವರ್, ಎಸ್. ದತ್ತಾತ್ರಿ, ಡಾ.ರವೀಂದ್ರ, ಟಿ.ಡಿ.ಮೇಘರಾಜ್, ಹರಿಕೃಷ್ಣ, ಮೋಹನ್ ರೆಡ್ಡಿ, ಕೆ.ವಿ.ಅಣ್ಣಪ್ಪ, ಸಿ.ಎಚ್.ಮಾಲತೇಶ್, ರಶ್ಮಿ ಶ್ರೀನಿವಾಸ್, ಸುರೇಖಾ ಮುರಳೀಧರ, ಶಾಂತಾ ಸುರೇಂದ್ರ ಮೊದಲಾದವರಿದ್ದರು.

Leave a Reply

Your email address will not be published. Required fields are marked *