google.com, pub-9939191130407836, DIRECT, f08c47fec0942fa0

ಸಿರಸಿ :- ಉಡುಪಿ ಅಷ್ಟಮಠ ಗಳಲ್ಲೊಂದಾದ ಸೋದೆ ಶ್ರೀ ವಾದಿರಾಜ ಮಠದಲ್ಲಿ ರಮಾತ್ರಿ ವಿಕ್ರಮದೇವರ ಮಹಾರಥೋತ್ಸವ ಮತ್ತು ಶ್ರೀ ವಾದಿರಾಜರ ಆರಾಧನಾ ಮಹೋತ್ಸವವು ಕ್ರಮವಾಗಿ ಮಾರ್ಚ್ 14 ಮತ್ತು 17ರಂದು ವಿಜೃಂಭಣೆಯಿಂದ ನಡೆಯಲಿದೆ.

ಶ್ರೀ ರಮಾ ತಿರುವಿಕ್ರಮದೇವರ ಮಹಾರಥೋತ್ಸವದ ನಿಮಿತ್ತ ಮಾ. 12ರ ಬುಧವಾರದಂದು ರಾತ್ರಿ ಶೇಷೋತ್ಸವ ಮಾ. 13ರ ಗುರುವಾರ ರಾತ್ರಿ ಶ್ರೀ ಭೂತರಾಜರ ವಿಶೇಷ ಪೂಜೆ, ದಂಡೆ ಬಲಿ, ಗರುಡೋತ್ಸವ ನಡೆಯಲಿದೆ. ಶ್ರೀ ಮಠದ ಪ್ರಧಾನ ಉತ್ಸವವಾದ ಶ್ರೀರಮಾವಿಕ್ರಮದೇವರ ಬ್ರಹ್ಮ ಮಹಾರಥೋತ್ಸವವು ಮಾ. 14 ಶುಕ್ರವಾರದಂದು ವೈಭವದಿಂದ ನಡೆಯಲಿದೆ. ಮಾ. 15 ರಂದು ಬೆಳಗ್ಗೆ ರಮಾತ್ರಿವಿಕ್ರಮದೇವರ ಕಲ್ಯಾಣೋತ್ಸವ ಅವಭೃತ ಸ್ನಾನ, ಮತ್ತು ರಾತ್ರಿ ವೇಣುಗೋಪಾಲಕೃಷ್ಣದೇವರ ಮುಖ್ಯಪ್ರಾಣದೇವರ ಹಾಗೂ ರುದ್ರದೇವರ ಸನ್ನಿಧಿಯಲ್ಲಿ ರಂಗಪೂಜೆ ಮತ್ತು ಮಾ. 16ರ ರವಿವಾರ ಶಾಕೋತ್ಸವ ಜರುಗಲಿದೆ.

ಮಾ. 17 ಸೋಮವಾರದಂದು ಶ್ರೀಮಠದ ಭಾವಿಸಮೀರ ಗುರುಗಳಾದ ಶ್ರೀ ವಾದಿರಾಜ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ, ಗದ್ದುಗೆ ಪೂಜೆ, ರಾತ್ರಿ ಗುರುರಾಜರ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಲಿದೆ .

ಮಾ. 18ರ ಮಂಗಳವಾರ ಶ್ರೀ ಭೂತರಾಜರ ಕ್ಷಮಾಪಣಾ ಪೂಜೆ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸೋದೆ ಮಠದ ಪೀಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಹಾಗೂ ಮಾರ್ಗದರ್ಶನದಲ್ಲಿ ನೆರವೇರಲಿದೆ . ಭಕ್ತರು ಪಾಲ್ಗೊಳ್ಳಲು ಕೋರಿದೆ.

Leave a Reply

Your email address will not be published. Required fields are marked *