ವೈದ್ಯರಾಗುವ ಕನಸು ಹೊತ್ತು ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ವೈದ್ಯಕೀಯ ಪದವಿಗೆ ಕಡ್ಡಾಯವಾಗಿರುವ ನೀಟ್ ಪರೀಕ್ಷೆಯನ್ನು ಬರೆಯುತ್ತಾರೆ. ಬಹಳಷ್ಟು ವಿದ್ಯಾರ್ಥಿಗಳು ಮೊದಲ ಹಂತದಲ್ಲಿ ಇಲ್ಲಿ ಅವಕಾಶ ಪಡೆಯುವುದು ಬಹಳ ಕಷ್ಟ. ಇಂತಹ ಸಂದರ್ಭದಲ್ಲಿ ಮರು ವರ್ಷ ಇದೆ ಪರೀಕ್ಷೆಗೋಸ್ಕರ ಹಗಲಿರಳು ಓದುತ್ತಾರೆ.

ಈ ಮೊದಲು ಮಂಗಳೂರು, ಬೆಂಗಳೂರು, ದೆಹಲಿ ಇಲ್ಲವೇ ರಾಜಸ್ಥಾನದಲ್ಲಿ ಇಂತಹ ತರಬೇತಿ ನೀಡುವ ಕೋಚಿಂಗ್ ಸೆಂಟರ್ ಗಳು ಕಾಣುತ್ತಿದ್ದವು. ಇದೇ ಪ್ರಥಮ ಬಾರಿಗೆ ಕಳೆದ 2024ರ ಆಗಸ್ಟ್ ನಿಂದ ಶಿವಮೊಗ್ಗದ ಬಸ್ ಸ್ಟ್ಯಾಂಡ್ ನಿಂದ ಒಂದು ಕಿಲೋಮೀಟರ್ ಅಂತರದ ನ್ಯೂಮಂಡ್ಲಿ ಬಳಿಯ ಗಂಧರ್ವ ನಗರದಲ್ಲಿ ನೀಟ್ ಅಕಾಡೆಮಿಯನ್ನು ಆರಂಭಿಸಲಾಗಿದೆ.ಱಈಗಾಗಲೇ ನೂರಾರು ಮಕ್ಕಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಈ ವರ್ಷ ಬಹಳಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆಯಲು ಸಜಗುತ್ತಿದ್ದಾರೆ ಹಾಗೂ ಸಿದ್ಧರಾಗಿದ್ದಾರೆ ಎಂಬುದು ಅಲ್ಲಿನ ಉಪನ್ಯಾಸಕರ ಹಾಗೂ ಪೋಷಕರ ಅಭಿಪ್ರಾಯ. ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಪೋಷಕರೂ ಸಹ ತರಬೇತಿಯ ಗುಣಮಟ್ಟವನ್ನು ತುಂಬುಮನದಿಂದ ಶ್ಲಾಘಿಸಿದ್ದಾರೆ.ಱಅತ್ಯಂತ ವಿಶಾಲವಾದ ಪ್ರದೇಶದಲ್ಲಿ ನೀಟ್ ತರಬೇತಿ ಪಡೆಯಲು ವ್ಯವಸ್ಥಿತವಾದ ಕೋಚಿಂಗ್ ಸೆಂಟರ್ ಆರಂಭಗೊಂಡಿದೆ.
ಕಲಿಕೆಗೆ ಪೂರಕವಾದ ತರಗತಿ ಕೊಠಡಿ ಹಾಗೂ ವ್ಯವಸ್ಥಿತವಾದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್ ಗಳು, ಉತ್ತಮವಾದ ಅಡುಗೆ, ಅದಕ್ಕೆ ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ಇದು ಮಲೆನಾಡು ಭಾಗದ ಬಹಳಷ್ಟು ವಿದ್ಯಾರ್ಥಿಗಳಿಗೆ ನೀಟ್ ತಪಸ್ವಿ ಮಂದಿರವಾಗಿ ಒಂದು ಬಗೆಯಲ್ಲಿ ಸಮೀಪದಲ್ಲೇ ತರಬೇತಿ ಪಡೆಯುವ ಅವಕಾಶವನ್ನು ಕಲ್ಪಿಸಿರುವ ಕಲಿಕಾ ದೇಗುಲವಾಗಿರುವುದು ವಿಶೇಷ.

ಭಾರತದಲ್ಲಿ ನಡೆಸುವ ಕಠಿಣ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್), ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಎಂಪಿಎ ಪ್ರತಿ ವರ್ಷ ಪದವಿಪೂರ್ವ ವಿದ್ಯಾರ್ಥಿಗಳಿಗೆ ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಪಶು ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಇದಕ್ಕೆ ಸೇರಲು ನೀಟ್ ಪರೀಕ್ಷೆ ಕಡ್ಡಾಯವಾಗಿರುತ್ತದೆ.ಱಉನ್ನತ ವೈದ್ಯಕೀಯ ಕಾಲೇಜುಗಳಲ್ಲಿ ಸೀಮಿತ ಸೀಟುಗಳಿಗಾಗಿ ಪ್ರತಿ ವರ್ಷ ಲಕ್ಷಾಂತರ ಆಕಾಂಕ್ಷಿಗಳು ನೀಟ್ ಪರೀಕ್ಷೆಗಳನ್ನು ಬರೆಯುತ್ತಾರೆ.
ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದ್ದು ಇದು ಹೆಚ್ಚಿನ ಸ್ಪರ್ಧೆಯನ್ನು ನೀಡಿದೆ. ಱಈ ಕಲಿಕೆಯ ಪರೀಕ್ಷೆ ಬರೆಯಲು ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ಸೀಟು ಪಡೆಯುವ ಅವಕಾಶವನ್ನು ನೀಡುತ್ತದೆ. ಱಮಲೆನಾಡ ಪ್ರಕೃತಿ ತಾಯಿಯ ಮಡಿಲಲ್ಲಿರುವ ದೇಶ ಅಕಾಡೆಮಿ ೩ ಎಕರೆ ವಿಸ್ತೀರ್ಣದ ವಿಶಾಲವಾದ ಹಸಿರು ಕ್ಯಾಂಪಸ್ ಅನ್ನು ಹೊಂದಿದ್ದು, ವಿದ್ಯಾರ್ಥಿಗಳು ಅಧ್ಯಾಪಕರು ಮತ್ತು ಸಿಬ್ಬಂದಿಗಳಿಗೆ ಆಧುನಿಕ ಸೌಕರ್ಯದ ಹಾಗೂ ಸುಸಜ್ಜಿತ ಸೌಲಭ್ಯಗಳ ಕ್ಯಾಂಪಸ್ ನಿರ್ಮಿಸಲಾಗಿದೆ. ಶೈಕ್ಷಣಿಕ ಬ್ಲಾಕ್ ಹೌಸ್ ಗಳು, ಸುಸಜ್ಜಿತ ಕ್ಲಾಸ್ ರೂಮ್ ಗಳು, ಅಧ್ಯಾಪಕರ ಕಚೇರಿಗಳು, ಕಲಿಕಾ ಸಂಪನ್ಮೂಲ ಕೇಂದ್ರವನ್ನು ಹೊಂದಿದ್ದು, ಇಲ್ಲಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯನ್ನು ಮಾಡಲಾಗಿದೆ. ಕಲಿಕೆಗೆ ಏಕಾಗ್ರತೆ ಅತ್ಯಗತ್ಯ ಎಂಬುದನ್ನು ಮನಗಂಡ ಅಕಾಡೆಮಿ ಮಕ್ಕಳಿಗೆ ಯೋಗ, ಧ್ಯಾನದ ಮೂಲಕ ಮಕ್ಕಳಲ್ಲಿ ಅಂತರ್ ಶಕ್ತಿಯನ್ನು ಹೆಚ್ಚಿಸುತ್ತಿದೆ.ಱಮಲೆನಾಡ ಮಡಿಲ ಮಕ್ಕಳನ್ನು ವೈದ್ಯ ಲೋಕಕ್ಕೆ ಕಳುಹಿಸುವ ಮುಖ್ಯ ಉದ್ದೇಶ ಹೊಂದಿರುವ ದೇಶ್ ನೀಟ್ ಅಕಾಡೆಮಿ ಅದಕ್ಕಾಗಿ ಇಂತಹ ವ್ಯವಸ್ಥೆಯನ್ನು ಶಿವಮೊಗ್ಗದ ಮಡಿಲಲ್ಲೇ ಮಾಡಿರುವುದು ವಿಶೇಷವೇ ಹೌದು.

ಈ ತರಬೇತಿಯನ್ನು ಪಡೆಯಲು ಈಗಾಗಲೇ ಪೂರಕ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪಿಯು ಬೋರ್ಡ್ ನಿಂದ ಅನುಮತಿಗೆ ಅರ್ಜಿ ಸಲ್ಲಿಸಿ 25ಸಾವಿರ ಶುಲ್ಕ ನೀಡಿದೆ. ಪಿಯು ಬೋರ್ಡ್ ನ ಅಧಿಕಾರಿಗಳು ಅಗತ್ಯವಿರುವ ದಾಖಲೆಗಳನ್ನು ಪಡೆದಿದ್ದು ಅಗ್ನಿಶಾಮಕ ದಳ ಹಾಗೂ ನಗರಪಾಲಿಕೆಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಇಲ್ಲಿ ಇಂತಹದೊಂದು ವ್ಯವಸ್ಥಿತವಾದ ಕೋಚಿಂಗ್ ಸೆಂಟರ್ ಆರಂಭಗೊಂಡಿರುವುದನ್ನು ಖುದ್ದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ತುಂಬು ಮನದಿಂದ ಹೊಗಳಿ ಮಲೆನಾಡ ಮಕ್ಕಳಿಗೆ ಅತ್ಯುತ್ತಮವಾದ ತರಬೇತಿ ಸಿಗಲು ಕಮ ಕೈಗೊಂಡಿರುವುದನ್ನು ಶ್ಲಾಘಿಸಿದ್ದಾರೆ.

ಒಟ್ಟಾರೆ ನಮ್ಮ ಈ ಮಡಿಲಲ್ಲಿ ವೈದ್ಯ ಲೋಕಕ್ಕೆ ನಮ್ಮ ಮಕ್ಕಳನ್ನು ಕಳುಹಿಸಲು ಪೂರಕವಾದ ತರಬೇತಿಯನ್ನು ಕೊಡುವಂತಹ ವ್ಯವಸ್ಥಿತ ಹಾಗೂ ಸುಸಜ್ಜಿತವಾದ ಅನುಭವಿ ಉಪನ್ಯಾಸಕರಾದ ಎಂ.ಆರ್. ಅವಿನಾಶ್ ಅವರು ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಯ ಹೆಜ್ಕೆ ಹಾಕಿದ ಅವಿನಾಶ್ ಹಾಗೂ ಅವರ ತಂಡದ ಮೇಲೆ ಕೆಟ್ಟ ಕಂಗಳು ಬೀಳದಿರಲಿ. ಸಿಹಿಮೊಗೆಯ ಮಡಿಲಲ್ಲಿ ವೈದ್ಯ ದೇವಮಂದಿರ ಸಾವಿರಾರು ಮಕ್ಕಳ ಕನಸು ಈಡೇರಿಸಿ, ವೈದ್ಯಯರನ್ನಾಗಿಸಲಿ. ಅವರೊಂದಿಗೆ ನುರಿತ ಹಿರಿಯ ಉಪನ್ಯಾಸಕರ ತಂಡ ಹಗಲಿರಲು ಮಕ್ಕಳ ಕಲಿಕಾ ಹಂತವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಱಮದ್ಯಕರ್ನಾಟಕದ ಮೊದಲ ಮಡಿಲಿಗೆ ಬಂದಿರುವ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಪಡೆಯಲಿ ಎಂಬುದು ನಮ್ಮ ಹಾರೈಕೆಯಾಗಿದೆ.
