google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಸುಮಾರು ನಾಲ್ಕೈದು ಊರುಗಳ 12ಮನೆಗಳಲ್ಲಿ ಕಳ್ಳತನ‌ ಮಾಡಿ ತಲೆ ಮರೆಸಿಕೊಂಡಿದ್ದ ಕುಖ್ಯಾತ ಕಳ್ಳನನ್ನು ಹಾಗೂ ಈತನಿಂದ ಚಿನ್ನ ಬೆಳ್ಳಿ ಖರೀದಿಸಿದವನನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಅಶೋಕ ಕೆ, 42 ವರ್ಷ, ವ್ಯವಸಾಯ ಕೆಲಸ,  ಬಸವಾಪುರ ಗ್ರಾಮ, ಹಾರೋಹಿತ್ಲು ಹೊಸನಗರ, ಚಂದ್ರ @ ಚಂದ್ರಹಾಸ, 33 ವರ್ಷ, ಚಿನ್ನಬೆಳ್ಳಿ ತಯಾರಿಕಾ ಕೆಲಸ, ಹಾರ್ನಳ್ಳಿ ಗ್ರಾಮ, ಬಂಧಿತ ಆರೋಪಿಗಳು. ಇವರನ್ನು ದಸ್ತಗಿರಿ ಮಾಡಿದ ಪೊಲೀಸರು ವಿಚಾರಣೆಗೆ ಓಳಪಡಿಸಿದಾಗ  ಆರೋಪಿ  ಅಶೋಕ, ತಾನು ಕಳ್ಳತನ ಮಾಡಿದ ಬೆಳ್ಳಿ ಹಾಗೂ ಬಂಗಾರದ ಆಭರಣಗಳಲ್ಲಿ ಕೆಲವು ಆಭರಣಗಳನ್ನು ಆರೋಪಿ ಚಂದ್ರ @ ಚಂದ್ರಹಾಸ ಈತನಿಗೆ  ಮಾರಾಟ ಮಾಡಿದ್ದು, ಬಾಕಿ ಉಳಿದ ಆಭರಣಗಳನ್ನು ಬ್ಯಾಂಕಿನಲ್ಲಿ ಅಡಮಾನ ಇಟ್ಟಿರುವುದು ಕಂಡುಬಂದಿದ್ದು, ನಂತರ ಸದರಿ ಆರೋಪಿತರಿಂದ ಆನಂದಪುರ ಪೊಲೀಸ್ ಠಾಣೆಯ 4, ಸಾಗರ ಪೇಟೆ ಪೊಲೀಸ್ ಠಾಣೆಯ 1
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ 5,  ಹೊಸನಗರ ಪೊಲೀಸ್ ಠಾಣೆಯ 1 ಮತ್ತು ಮಾಳೂರು ಪೊಲೀಸ್ ಠಾಣೆಯ 1 ಪ್ರಕರಣ ಸೇರಿ ಒಟ್ಟು 12 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 30,96,000  ರೂಗಳ 387 ಗ್ರಾಂ ಚಿನ್ನದ ಆಭರಣ, ಅಂದಾಜು ಮೌಲ್ಯ 27,688 ರೂಗಳ 384 ಗ್ರಾಂ ಬೆಳ್ಳಿ ಆಭರಣ  ಹಾಗೂ ಅಂದಾಜು ಮೌಲ್ಯ 1,00,000 ರೂ ಗಳ ಕೃತ್ಯಕ್ಕೆ ಬಳಸಿದ 2 ಬೈಕ್ ಗಳು  ಸೇರಿ ಒಟ್ಟು 32,23,688 ರೂಗಳ ಆಭರಣ, ವಾಹನ ಹಾಗೂ ನಗದನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಕುಖ್ಯಾತ ಕಳ್ಳರ ಪತ್ತೆಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಡಿವೈಎಸ್ ಪಿ ಗಳಾದ ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಕಾರಿಯಪ್ಪ ಎ. ಜಿ. ಇವರ ಮಾರ್ಗದರ್ಶನದಲ್ಲಿ ಸಾಗರ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ಟಿ. ನಾಯ್ಕ ಇವರ ಮೇಲ್ವಿಚಾರಣೆಯಲ್ಲಿ, ಸಾಗರ ಸಿಪಿಐ ಸಂತೋಷ್ ಶೆಟ್ಟಿ, ಪಿಎಸ್ಐ ಯುವರಾಜ. ಕೆ ಮತ್ತು ಆನಂದಪುರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಸಿ.ಹೆಚ್.ಸಿ ಅಶೋಕ್, ಪರಶುರಾಮ, ಸಿಪಿಸಿ ಉಮೇಶ್ ಲಮಾಣಿ, ಸಂತೋಷಕುಮಾರ, ನೂತನ್,  ನಿರಂಜನ್,
ಸುಬ್ರಮಣ್ಯ.ಎಸ್,  ಭರತ್‌ ಕುಮಾರ್ ಹಾಗೂ ಶಿವಮೊಗ್ಗ *ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ಇಂದ್ರೇಶ್, ವಿಜಯ್ ಕುಮಾರ್, ಮತ್ತು ಚಾಲಕರಾದ ಎ.ಆರ್.ಎಸ್.ಐ ನರಸಿಂಹಸ್ವಾಮಿ ಮತ್ತು ಎ.ಹೆಚ್‌.ಸಿ ಸತೀಶ್ ರವರುಗಳನ್ನು ಒಳಗೊಂಡ ವಿಶೇಷ ತನಿಖಾತಂಡವನ್ನು ರಚಿಸಲಾಗಿತ್ತು.

ಕಳ್ಳರನ್ನು ಪತ್ತೆಹಚ್ಚಿ ಚಿನ್ನಾಭರಣ ಹಾಗೂ ನಗದು, ವಾಹನಗಳನ್ನು ವಶಪಡಿಸಿಕೊಂಡ ಪೊಲೀಸರು ಹಾಗೂ ಸಿಬ್ಬಂದಿಗಳ ಈ ಯಶಸ್ವಿ ಕಾಯಾಚರಣೆಯನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಪ್ರಶಂಶಿಸಿದ್ದಾರೆ.

Leave a Reply

Your email address will not be published. Required fields are marked *